ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡರೆ ಒಂದು ವಾರ ರಜೆ..!

ರಾಜ್ಯಗಳಿಗೆ ಕೇಂದ್ರದ ಸೂಚನೆ
 

ಶಾಲೆಗಳ ಮೇಲೆ ಮತ್ತೆ ಹದ್ದಿನ ಕಣ್ಣೀಡಲು ಮುಂದಾದ ಆರೋಗ್ಯ ಇಲಾಖೆ..!

ಬೆಂಗಳೂರು : ಶಾಲೆಗಳಿಗೆ ಮತ್ತೆ ಕೊರೊನಾ ರೂಲ್ಸ್ ಬಂದಿದೆ. ಹೆಮ್ಮಾರಿ ಸದ್ಯ ಶಾಲೆಗಳಿಗೆ ಒಕ್ಕರಿಸಿ ಆರ್ಭಟ ಶುರು ಮಾಡಿದ್ದು, ಆರೋಗ್ಯ ಇಲಾಖೆ ಶಾಲೆಗಳಿಗೆ ಕಠಿಣ ನಿಯಮ ಜಾರಿ ಮಾಡಲು ಮುಂದಾಗಿದೆ. ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡರೆ ಒಂದು ವಾರ ರಜೆ ನೀಡಬೇಕೆಂದು ಖಡಕ್ ಸೂಚನೆ ನೀಡಿದೆ.

ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಜುಲೈ ತಿಂಗಳನಲ್ಲಿ 4 ನೇ ಅಲೆ ಆತಂಕ ಇರುವುದರಿಂದ ಮತ್ತೆ ಫುಲ್ ಅಲರ್ಟ್ ಮಾರ್ಗಸೂಚಿಯನ್ನು ಹೊರಡಿಸಿದೆ. ಇನ್ನೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಶಾಲಾ-ಕಾಲೇಜುಗಳಿಗೆ ಹೊಸ ಮಾರ್ಗ ಸೂಚಿ ನೀಡಲು ಆರೋಗ್ಯ ಇಲಾಖೆ ತಯಾರಿ ನಡೆಸಿದೆ.

ಶಾಲೆಗಳಲ್ಲಿ ಸೋಂಕು ಪತ್ತೆ ಮುಚ್ಚಿಟ್ಟರೆ ಕಾನೂನು ಕ್ರಮದ : ಸದ್ಯ ರಾಜ್ಯದಲ್ಲಿ ಕೊರೊನಾ ಏರಿಕೆ ನಡುವೆ ಶಾಲಾ ಮಟ್ಟದಲ್ಲಿ ಹರಡುತ್ತಿರುವ ಸೋಂಕಿನ ವ್ಯಾಪಕತೆ ಹಿನ್ನೆಲೆ ಶಾಲೆಗಳಿಗೂ ಹೊಸ ಆತಂಕ ಶುರುವಾಗಿದೆ. ಇಷ್ಟು ದಿನ ನೆಮ್ಮದಿಯಿಂದ ಇದ್ದ ಶಾಲಾ ಮಕ್ಕಳಿಗೆ ಮತ್ತೆ ಕೊರೊನಾ ಕಾಟ ಶುರುವಾಗಿದೆ. ಶಾಲೆಗಳಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಸೋಂಕು ಪತ್ತೆಯಾಗತ್ತಿದ್ದು ಶಾಲೆಗಳಿಗೆ ಹೊಸ ಮಾರ್ಗಸೂಚಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಶಾಲೆಗಳ ಮಾರ್ಗಸೂಚಿಯ ಪ್ರಮುಖಾಂಶಗಳು : ಸೋಂಕು ಕಾಣಿಸಿಕೊಂಡ ಮಗು, ಶಿಕ್ಷಕ ಹಾಗೂ ಶಾಲಾ ಸಿಬ್ಬಂದಿಗಳಿಗೆ ಒಂದುವಾರಗಳ ಕಾಲ ರಜೆ ನೀಡಬೇಕು, ಶೀತ, ಕೆಮ್ಮು, ಜ್ವರ ಇದ್ದರೂ ಕಡ್ಡಾಯವಾಗಿ ರಜೆ ಕೊಡ್ಬೇಕು, ಮಕ್ಕಳು ಜ್ವರ, ಶೀತ, ಕಡಿಮೆ ಆಗುವ ತನಕ ಶಾಲೆಗೆ ಬರದಂತೆ ಸೂಚನೆ, ಸೋಂಕು ದೃಢಪಟ್ಟರೆ ಶಾಲಾ ಕೊಠಡಿಯನ್ನ ಸ್ಯಾನಿಟೈಸ್ ಮಾಡುವುದು, ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ಶಾಲೆಗಳು ಗೌಪ್ಯತೆ ಕಾಪಡಿದರೆ ಕಠಿಣ ಕ್ರಮ ಹಾಗೂ ಶಾಲೆಗಳಲ್ಲಿ ಮತ್ತೆ ಕಡ್ಡಾಯ ಮಾಸ್ಕ್ ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂಬುದಾಗಿ ಮಾಹಿತಿ ನಿಡಿದ್ದಾರೆ.

ಕೋವಿಡ್ ಪತ್ತೆಯಾದರೆ ಸೀಲ್‍ಡೌನ್ ಇಲ್ಲ : ಸೋಂಕು ಕಂಡು ಬಂದರೆ ಶಾಲೆಗಳನ್ನು ಮುಚ್ಚುವ ಅಥವಾ ಅಪಾರ್ಟ್‍ಮೆಂಟ್‍ಗಳನ್ನು ಸೀಲ್‍ಡೌನ್ ಮಾಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಶಾಲೆಗಳಲ್ಲಿ (12 ತರಗತಿವರೆಗೆ) ಸೋಂಕು ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಗೆ ಹಾಜರಾಗದಂತೆ ಸೂಚಿಸಬೇಕು. ಸೋಂಕು ಲಕ್ಷಣ ಹೊಂದಿರುವವರನ್ನು ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟಲ್ಲಿ ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್, ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಬೇಕು. ವರದಿ ನೆಗೆಟಿವ್ ಬಂದಲ್ಲಿ ಆರ್‍ಟಿಪಿಸಿಆರ್ ಮಾದರಿ ಪರೀಕ್ಷೆಯ ವರದಿ ಬರುವವರೆಗೂ ನಿಗಾದಲ್ಲಿ ಇರಿಸಿ ನಂತರ ಕ್ರಮ ವಹಿಸಬೇಕು.

ರಾಜ್ಯಗಳಿಗೆ ಕೇಂದ್ರದ ಸೂಚನೆ : ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೆ, ದೊಡ್ಡ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವವರು ಹಾಗೂ ಯಾತ್ರೆಗಳಲ್ಲಿ ಪಾಲ್ಗೊಳ್ಳುವವರು ಯಾವುದೇ ರೋಗಲಕ್ಷಣಗಳನ್ನು ಹೊಂದಿರಬಾರದು ಮತ್ತು ಲಸಿಕೆ ಪಡೆದವರಾಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ಬರೆದಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ಜಾತ್ರೆಗಳು, ವಿವಿಧ ಉತ್ಸವಗಳು ಹಾಗೂ ಸಭೆ-ಸಮಾರಂಭಗಳು ಸೋಂಕು ಹರಡುವಿಕೆಯ ಕೇಂದ್ರವಾಗಿ ಮಾರ್ಪಾಡಾಗಬಹುದು. ಇದರಲ್ಲಿ ಪಾಲ್ಗೊಳ್ಳಲು ಜನರು ಅಂತಾರಾಜ್ಯ ಅಥವಾ ಅಂತರ್‍ಜಿಲ್ಲಾ ಪ್ರಯಾಣವನ್ನೂ ಮಾಡಬಹುದು. ಹೀಗಾಗಿ ಇಂಥ ಉತ್ಸವ, ಜಾತ್ರೆ ಹಾಗೂ ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರು ಲಸಿಕೆ ಪಡೆದವರಾಗಿರಬೇಕು ಹಾಗೂ ರೋಗ ಲಕ್ಷಣಗಳನ್ನು ಹೊಂದಿರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ರೀತಿ ಯಾತ್ರೆ/ಪ್ರವಾಸ ಕೈಗೊಳ್ಳುವವರು ಇದ್ದರೆ ಅವರ ಪ್ರವಾಸದ 15 ದಿನ ಮುಂಚಿತವಾಗಿಯೇ ಗುರುತಿಸಿ ಲಸಿಕೆ ನೀಡಬೇಕು ಎಂದು ತಿಳಿಸಿದ್ದಾರೆ.

ಸಭೆ, ಯಾತ್ರೆಗಳಲ್ಲಿ ಪಾಲ್ಗೊಳ್ಳುವವರು ಲಸಿಕೆ ಪಡೆದಿರಬೇಕು
 ರೋಗಲಕ್ಷಣ ಹೊಂದಿರಬಾರದು
 ರಾಜ್ಯಗಳು ಈ ಎರಡೂ ಅಂಶ ಖಚಿತಪಡಿಸಿಕೊಳ್ಳಬೇಕು

ಕೋವಿಡ್ ಅಂಕಿ ಅಂಶಗಳು ಮಾಹಿತಿಯನ್ನು ನೋಡುವುದಾದರೆ ಮಂಗಳವಾರ ರಾಜ್ಯದಲ್ಲಿ 968 ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಮಾತ್ರ 887 ಕೇಸ್ ದಾಖಲಾಗಿದೆ. ಇನ್ನ ಒಬ್ಬರು ಸೋಂಕಿಗೆ ಮೃತ ಪಟ್ಟಿದ್ದಾರೆ. ರಾಜ್ಯಾದ್ಯಾಮಂತ ಕೋವಿಡ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 7,978ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮಾತ್ರ 4,682 ಸಂಕ್ರಿಯ ಪ್ರಕರಣಗಳಿವೆ.

-ಡಾ.ಕೆ ಸುಧಾಕರ್, ಆರೋಗ್ಯ ಸಚಿವರು.

12 ವರ್ಷ ಮೇಲ್ಪಟ್ಟ ಮಕ್ಕಳಿಗೆ ವ್ಯಾಕ್ಸಿನ್ ಆಗಿದೆ. ಹೀಗಾಗಿ 7, 8, 9, 10 ತರಗತಿಯ ಮಕ್ಕಳು ಡಬಲ್ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ ಹಾಗಾಗಿ ನಮಗೆ ಭಯ ಇಲ್ಲ. ಆದರೆ 1 ರಿಂದ 6 ತರಗತಿಯ ಮಕ್ಕಳನ್ನ ಶಾಲೆಗೆ ಕಳಿಸೋಕೆ ಭಯ ಆಗುತ್ತಿದೆ. ಆ ಮಕ್ಕಳಿಗೆ ವ್ಯಾಕ್ಸಿನ್ ಇನ್ನೂ ಬಂದಿಲ್ಲ.

-ಗೀತಾ, ಪೋಷಕರು.

Recent Articles

spot_img

Related Stories

Share via
Copy link
Powered by Social Snap