ವಿದ್ಯಾರ್ಥಿಗಳು ವಿದ್ಯೆ ಜೊತೆಗೆ ಕ್ರೀಡೆ ಮೈಗೂಡಿಸಿಕೊಳ್ಳಿ : ಶಾಸಕ ರಂಗನಾಥ್

ಕುಣಿಗಲ್

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿದ್ಯೆ ಜೊತೆಗೆ ಕ್ರೀಡೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ಕ್ರೀಡಾ ಪಟುಗಳಾಗುವುದರ ಜೊತೆಗೆ ಹುಟ್ಟಿದ ಊರು ಹಾಗೂ ದೇಶಕ್ಕೆ ಕೀರ್ತಿತರುವಂತಹ ಉತ್ತಮ ಪ್ರಜೆಗಳಾಗುವಂತೆ ಶಾಸಕ ಡಾ.ರಂಗನಾಥ್ ಕಿವಿಮಾತು ಹೇಳಿದರು.

ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಖೋ ಖೋ ಪಂದ್ಯಾವಳಿಗೆ ಚಾಲನೇ ನೀಡಿ ಮಾತನಾಡಿದರು.

ವಿದ್ಯಾರ್ಥಿಯ ದೆಸೆಯಲ್ಲಿ ಓದಿನಲ್ಲಿ ಆಸಕ್ತಿ ತೋರುವಂತೆಯೇ ಕ್ರೀಡೆಗೆ ಒತ್ತು ಕೊಟ್ಟರೆ ಕ್ರೀಡೆಗಳಿಂದ ಶಿಸ್ತು, ಮಾನಸಿಕ ಸ್ಥೈರ್ಯ, ನಾಯಕತ್ವ ಗುಣಗಳು ಬೆಳೆಯುತ್ತವೆ. ಕ್ರೀಡೆಯತ್ತ ಎಲ್ಲರೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆಗೆ ಹಿರಿಯರು, ಕಿರಿಯರು ಎಂಬ ಭೇದ ಭಾವವಿಲ್ಲ. ಕಿರಿಯರು, ಪ್ರೌಢ ಕ್ರೀಡಾಪಟುಗಳು ಸ್ಪೂರ್ಥಿಯಿಂದ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸುವ ಮೂಲಕ ತಾಲೂಕು ಹಾಗೂ ಜಿಲ್ಲಗೆ ಕೀರ್ತಿತರಬೇಕೆಂದು ಶಾಸಕರು ತಿಳಿಸಿದರು.

ಸದೃಢ ದೇಹ ಹಾಗೂ ಮನಸ್ಸು ನಿರ್ಮಾಣಗೊಳ್ಳುತ್ತದೆ. ಕ್ರೀಡೆಗಳಿಂದ ದೇಶ, ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ದಿಯಾಗುತ್ತದೆ. ಗ್ರಾಮೀಣ ಪ್ರತಿಭೆಗಳು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದ ಅವರು ಇದಕ್ಕೆ ನಿರಂತರ ಶ್ರಮ ಅಗತ್ಯ ಎಂದರು.

ಕುಣಿಗಲ್ ಹಿರೇಮಠದ ಶಿವಕುಮಾರ್‍ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯ ಕೆಂಪೇಗೌಡ, ಕ್ರೀಡಾವಿಜೇತರಿಗೆ ಗುತ್ತಿಗೆದಾರ ಆಲ್ಕೆರೆ ನಾರಾಯಣ್ ಬಹುಮಾನ ವಿತರಿಸಿದರು. ಉಪ ಪ್ರಾಚಾರ್ಯೆ ಮಮತಾಮಣಿ, ಬಿಆರ್‍ಸಿ ಕೃಷ್ಣಪ್ಪ, ಮುಖಂಡರಾದ ಕೆಂಪೀರೇಗೌಡ, ಆಲ್ಕೆರೆ ಕುಮಾರ್, ನಂಜಪ್ಪ, ಪಟೇಲ್ ಪ್ರಕಾಶ್, ಮುಖ್ಯ ಶಿಕ್ಷಕಿ ಶೋಭಾರಾಣಿ, ಗಂಗಪ್ಪ ಸೇರಿದಂತೆ ಶಾಲಾ ಸಿಬ್ಬಂದಿ, ಗ್ರಾಮಸ್ತರು ಭಾಗವಹಸಿದ್ದರು

Recent Articles

spot_img

Related Stories

Share via
Copy link
Powered by Social Snap