ತಿಪಟೂರು :
ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಫರ್ಧೆಯಲ್ಲಿ ತಿಪಟೂರಿನ ಬಾಲಕೀಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿನಿಯರು ಪ್ರಥಮಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ತಾಲ್ಲೂಕಿಗೆ ಮತ್ತು ಶಾಲೆಗೆ ಕೀರ್ತಿತಂದಿರುತ್ತಾರೆ. ಆದರೆ ಈ ವಿದ್ಯಾರ್ಥಿನಿಯರಾದ ವಿಶ್ವಸ್ನೇಹ.ಸಿ.ವಿ, ರುಚಿತ.ಎ.ಎಸ್, ದೀಪ್ತಿ.ಡಿ.ಎನ್, ಯಶಸ್ವಿನಿ.ಎ.ಎನ್, ಹರ್ಷಿತ.ಜೆ.ಸಿ, ಐಶ್ವರ್ಯ.ಡಿ, ದೀಪಿಕ.ಹೆಚ್.ಸಿ, ಭೂಮಿಕ.ಪಿರವರು ತಮಗೆ ಬಂದಂತಹ ಬಹುಮಾನವನ್ನು ಕೊಡಗಿನಲ್ಲಿ ಸಂಕಷ್ಠದಲ್ಲಿರುವವರ ಸಂಕಷ್ಟಕ್ಕೆ ತಮ್ಮ ಅಳಿಲು ಸೇವೆಸಲ್ಲಿಸುವ ಮನೋಭಿಲಾಷೆಯಿಂದ ಮುಖ್ಯಮಂತ್ರಿಗಳ ಪರಿಹಾರನಿಧಿಗೆ ತಲುಪಿಸುವಂತೆ ಕೋರಿರುತ್ತಾರೆ. ಇವರ ಕಾರ್ಯವನ್ನು ಉಪಪ್ರಾಚಾರ್ಯರು ಹಾಗೂ ಶಿಕ್ಷಕ ವೃಂದವು ಶ್ಲಾಘಿಸಿದ್ದಾರೆ