ವಿವಾದ ಸೃಷ್ಠಿಸಿದ ಡಿ.ರೂಪ ಅವರ ಹೇಳಿಕೆ..!!

ಬೆಂಗಳೂರು

    ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಗೃಹರಕ್ಷಕದಳದ ಪೊಲೀಸ್ ಮಹಾನಿರೀಕ್ಷಕ(ಐಜಿಪಿ)ಡಿ. ರೂಪಾ ಅವರು ಹೇಳಿಕೆ ನೀಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ

    ವಿದ್ಯುನ್ಮಾನ ಮತಯಂತ್ರಗಳಲ್ಲಿ ಲೋಪವಿದ್ದು, ಅವುಗಳನ್ನು ಬದಲಾಯಿಸುವಂತೆ ವಿರೋಧ ಪಕ್ಷಗಳು ಕೂಗು ಹಾಕುತ್ತಿರುವ ಬೆನ್ನಲ್ಲೇ ರೂಪಾ ಅವರ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಂಡಿದೆ.ಸರ್ಕಾರಿ ಹುದ್ದೆಯಲ್ಲಿರುವವರು ಇಂತಹ ಹೇಳಿಕೆ ನೀಡಬಹುದೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.

      ಈ ಸಂಬಂಧ ಟ್ವೀಟ್ ಮಾಡಿರುವ ಡಿ. ರೂಪಾ, ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ. ದೇಶದಲ್ಲಿರುವ ಎಲ್ಲಾ ಐಪಿಎಸ್ ಅಧಿಕಾರಿಗಳು ಹಾಗೂ ರಾಜ್ಯದ ಅಧಿಕಾರಿಗಳಿಗೂ ಈ ವಿಷಯ ಗೊತ್ತಿದೆ. ಚುನಾವಣೆ ವೇಳೆ ಇವಿಎಂಗಳು, ರಿಟರ್ನಿಂಗ್ ಆಫೀಸರ್ಸ್‍ ಗಳು ಹಾಗೂ ಸಹಾಯಕ ರಿಟರ್ನಿಂಗ್ ಆಫೀಸರ್ಸ್ ರೀತಿ ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಿದ್ದಾರೆ.ಮತದಾನ ಮುಗಿದ ಬಳಿಕ ಇವಿಎಂಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಭದ್ರವಾಗಿಟ್ಟರೆ, ಅವುಗಳನ್ನು ತೆಗೆಯುವುದು ಮತ ಎಣಿಕೆ ದಿನದಂದೇ ಎಂದು ಹೇಳಿರುವ ಅವರು, ಪೊಲೀಸ್ ಕಸ್ಟಡಿಗೆ ಬಂದ ನಂತರ, ಇವಿಎಂಗಳನ್ನು ಮಾರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link