ಜಗಳೂರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಸ್‍ಎಫ್‍ಐ ಸಂಘಟನೆಯಿಂದ ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿದ ಕಾರ್ಯಕರ್ತರು ಎಸ್ ಎಫ್ ಐ ರಾಜ್ಯಕರೆಗೆ ಬೆಂಬಲಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಆರ್ ಟಿ ಇ ಶಿಕ್ಷಣ ಮುಂದುವರೆಸುವಂತೆ ಹಾಗೂ ಬಿಸಿಯೂಟ ರೇಷನ್ ವಿತರಿಸಬೇಕು ಪಿಯುಕಾಲೇಜು ಉಪನ್ಯಾಸಕರ ನೇಮಕಾತಿಯಾಗಿರುವ ಅಭರ್ಥಿಗಳಿಗೆ ಆದೇಶಪತ್ರ ವಿತರಿಸಬೇಕು. ಕೊರೊನ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳಿಗೆ ಆಹಾರ ದಾಸ್ತಾನು ವಿತರಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಮುಖಂಡ ಅನಂತರಾಜ್ ತಾಲ್ಲೂಕು ಅಧ್ಯಕ್ಷ ಅಂಜಿನಪ್ಪ ವಕೀಲ ಆರ್ ಓಬಳೆಶ್ ಎಐಎಸ್ ಎಫ್ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಕೆ. ಮಂಜಪ್ಪ ತಾಲೂಕು ಅಧ್ಯಕ್ಷ ಯುವರಾಜ್ ಹೆಚ್.ಎಂ ಹೊಳೆ ,ಕರಿಬಸಪ್ಪ ಸಿದ್ದಯ್ಯನಕೋಟೆ ಹನಂಮತಪ್ಪ , ಅನ್ವರ್ ಸಾಹೇಬ್, ಡಿಎಸ್ ಎಸ್ ತಾಲ್ಲೂಕು ಅಧ್ಯಕ್ಷ ಸತೀಶ್, ಸೇರಿದಂತೆ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ