ವಿವೇಕಾನಂದರ ಜರಿದವರು ಚಪ್ಪಾಳೆಯೊಡೆದು ಅಭಿಮಾನಿಗಳಾದರು

ಕುಣಿಗಲ್ :

     ಸ್ವಾಮಿವಿವೇಕಾನಂದರನ್ನು ನೋಡಿದ ಪರಕೀಯರು ಮೊದಲು ವ್ಯಂಗ್ಯವಾಡಿದ್ದರು. ಆದರೆ ಅವರು ಭಾಷಣದ ಮೊದಲ ನುಡಿಯಲ್ಲಿ ಅಮೆರಿಕಾದ ಸಹೋದರ ಸಹೋದರಿಯರೇ ಎಂಬ ಪ್ರೀತಿಯ ಅಂತರಾಳದ ನುಡಿಮುತ್ತುಗಳಿಗೆ ಇಡೀ ಅಮೆರಿಕಾದ ನಾಗರೀಕರು ಸಭೆಯಲ್ಲಿ ಎಂದು ನಿಂತು ಚಪ್ಪಾಳೆ ಬಡಿಯುವ ಮೂಲಕ ಸ್ವಾಮಿವಿವೇಕಾನಂದರಿಗೆ ಮಾರುಹೋದರು ಎಂದು ಯುವ ಬ್ರೀಗೇಡ್ ಸದಸ್ಯ ಸಂತೋಷ್ ಪಡುಮನೆ ತಿಳಿಸಿದರು.

     ಪಟ್ಟಣದ ಜಿಕೆಬಿಎಂಎಸ್ ಶಾಲಾ ಬಯಲು ರಂಗಮಂದಿರದಲ್ಲಿ ಯುವ ಬ್ರಿಗೇಡ್ ಹಾಗೂ ಸಂಘಪರಿವಾರಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಸ್ವಾಮೀವಿವೇಕಾನಂದರ 125ನೇ ವರ್ಷಾಚರಣೆ ಅಂಗವಾಗಿ ಮತ್ತೊಮ್ಮೆ ಧಿಗ್ವಿಜಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಮೇರಿಕಾದ ಚಿಕಾಗೋ ನಗರದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಭಾಷಣಕ್ಕೆ ಅಲ್ಲಿನ ನಾಗರಿಕರು ಎದ್ದು ನಿಂತು ಚಪ್ಪಾಳೆ ಹೊಡೆದದರು. ಸಂಬಂಧಗಳ ಬಾಂಧವ್ಯಗಳ ಬೆಲೆಯೇ ಗೊತ್ತಿಲ್ಲದವರಿಗೆ ಅದರ ಮೌಲ್ಯಗಳನ್ನು ತಿಳಿಸಿಕೊಟ್ಟರು.

      ಪ್ರತಿಯೊಬ್ಬ ಯುವಕರು ಶಕ್ತಿ, ಧೈರ್ಯ, ಪ್ರಮಾಣಿಕತೆ, ಪ್ರೀತಿ, ನೀತಿ ಸಂಸ್ಕಾರಗಳನ್ನು ಬೆಳೆಸಿಕೊಂಡು ತಾವೆಲ್ಲರೂ ಸ್ವಾಮಿ ವಿವೇಕಾನಂದರಂತೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಬೇಕೆಂದರು. ಸೋದರಿ ನಿವೇದಿಯಾ ರವರು ಇವರ ಭಾಷಣಕ್ಕೆ ಮನಸೋತು ಸಮಾಜಿಕ ಜೀವನದಲ್ಲಿ ತೊಡಗಿಸಿಕೊಂಡು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿದ್ದನ್ನು ನಾವು ಸ್ಮರಿಸಿಕೊಳ್ಳಬೇಕು ಪ್ರತಿಯೊಂದು ರಾಷ್ಟ್ರದ ಜನತೆಗೆ ಆಶ್ರಯ ಕೊಟ್ಟಂತಹ ಧರ್ಮ ಎಂದರೆ ಅದು ಹಿಂದೂ ಧರ್ಮ ಎಂಬುದನ್ನು ನಾವು ಮರೆಯಬಾರದು ಎಂದವರು ವಿವೇಕಾನಂದರು ಹೇಳಿದ ಹಾಗೆ ಶಕ್ತಿಯೇ ಜೀವನ ದುರ್ಬಲತೆಯೇ ಮರಣ ಎಂದಿದ್ದಾರೆ,

     ಎರಡು ಕಾಲುಗಳಿಲ್ಲದೆ ಆಸ್ಪತ್ರೆಯಲ್ಲಿ ಮಲಗಿದ್ದ ಮಹಿಳೆಗೆ ಆತ್ಮ ಸ್ಥೈರ್ಯ ತುಂಭಿದ ಹಿನ್ನೆಲೆಯಲ್ಲಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಹಿಮಾಲಯ ಪರ್ವತವನ್ನು ಏರಿದನ್ನು ನಾವು ಮರೆಯಬಾರದು ಆದ್ದರಿಂದ ಪ್ರತಿಯೊಬ್ಬ ಯುವಕ ಯುವತಿಯರು ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಕೊಂಡು ರಾಷ್ಟ್ರಕ್ಕೆ ತಮ್ಮದೇ ಆದಂತಹ ಉತ್ತಮ ಸಂದೇಶಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

       ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಬೆಳೆಸಿಕೊಂಡಂತಹ ಹಲವಾರು ವ್ಯಕ್ತಿಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು. ಇದಕ್ಕೂ ಮುನ್ನಾ ಪಟ್ಟಣದ ಪ್ರವಾಸಿಮಂದಿರದಿಂದ ಜಿಕೆಬಿಎಂಎಸ್ ಶಾಲಾ ಮೈದಾನದ ವರೆಗೆ ಸ್ವಾಮಿ ವಿವೇಕಾನಂದರ ರಥಯಾತ್ರೆಯನ್ನು ಭವ್ಯವಾಗಿ ಕರೆತರಲಾಯಿತು ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರಾಜೇಶ್‍ಗೌಡ, ಮುಖಂಡರುಗಳಾದ ಎ.ಸಂತೋಷ್, ಎಸ್‍ಟಿಡಿ ಶ್ರೀನಿವಾಸ್, ದಿನೇಶಕುಮಾರ್, ವಿವೇಕಾ ಜಾಗೃತ ದಳದ ಬಲರಾಮ್ ಹಾಗೂ ಸ್ನೇಹಿತರು, ಭಜರಂಗ ಸೇನೆಯ ತಾಲ್ಲೂಕು ಅಧ್ಯಕ್ಷ ರಾಮು, ಮಂಜುನಾಥ, ನಂದಿನಿಸುರೇಶ್, ಹಾಗೂ ಪದಾಧಿಕಾರಿಗಳು ಅಪಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅಭಿಮಾನಿಗಳು ಭಾಗವಹಿಸಿದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link