ಹರಪನಹಳ್ಳಿ:
ವಿವಾಹ ದೈಹಿಕ ಸಂಬಂಧ ಮಾತ್ರ ಅಲ್ಲ. ಅದು ಎರಡು ಮನಸುಗಳ ಮಿಲನ. ವಿಕಲಚೇತನಳನ್ನು ವಿವಾಹವಾಗಿ ಯುವಕರಿಗೆ ಶ್ರವಣಕುಮಾರ ಮಾದರಿಯಾಗಿದ್ದಾನೆ ಎಂದು ತಾಲೂಕ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಆರ್.ಧನರಾಜ್ ಹೇಳಿದರು.
ತಾಲೂಕಿನ ಚಿಕ್ಕಮೇಗಳಗೆರೆ ಗ್ರಾಮದ ದುರುಗಮ್ಮ ತಂದೆ ಯಲ್ಲಪ್ಪ ಇವರ ಪುತ್ರಿ ವಿಶೇಷಚೇತನಳ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ವಿಕಲತೆ ಶಾಪವಲ್ಲ ವರ ಎಂದು ಭಾವಿಸಿ ಬದುಕು ಕಟ್ಟಿಕೊಳ್ಳಬೇಕು. ಇಂತಹ ವಿಕಲರನ್ನು ವಿವಾಹವಾಗುವುದಕ್ಕೆ ಯುವಕರು ಮುಂದೆ ಬಂದರೆ ನಮಗೂ ಬದುಕಿದೆ ಎನ್ನುವ ಮನೋಭಾವದಿಂದ ಜೀವನ ನೆಡೆಸಲು ಸಹಕಾರಿಯಾಗುವುದು ಎಂದರು.
ಬಿ.ಎ.ಡಿ.ಇಡಿ ಪದವಿಧರ ಶ್ರವಣಕುಮಾರ ವಿಜಯಪುರ ಜಿಲ್ಲೆಯ ಸಿಂಧಿಗಿ ತಾಲ್ಲೂಕಿನ ಜಾಲವಾದ ಗ್ರಾಮದ ಶ್ರೀಮತಿ ಶಾಂತವ್ವ ತಂದೆ ತಿಪ್ಪಣ್ಣ ಕಟ್ಟಿಮನಿ ಇವರ ದ್ವಿತಿಯ ಪುತ್ರರಾಗಿದ್ದು. ತಾಲೂಕಿನ ಪುಣಭಗಟ್ಟ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮೀಣ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನೆ ಹೆಚ್. ಸುನೀತಾರನ್ನು ವರಿಸಿ ತಮ್ಮ ಘನತೆ ಹೆಚ್ಚಿಸಿಕೊಂಡಿದ್ದಾರೆ ಎಂದರು.
ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯಿಂದ ನೀಡುವ ಸಾಮನ್ಯ ಯುವಕ ಅಥವಾ ಯುವತಿ ಮದುವೆಯಾದರೆ 50.000 ರೂ ಗಳ ವಿವಾಹ ಪ್ರೊತ್ಸಹ ಧನ ಯೋಜನೆಯಲ್ಲಿ ಪ್ರೋತ್ಸಹ ಧನವನ್ನ ನೀಡಲು ಅಗತ್ಯ ಕ್ರಮ ವಹಿಸಲಾಗುವುದು ತಿಳಿಸಿದರು.
ವಿವಾಹ ಮಹೋತ್ಸವದಲ್ಲಿ ಶ್ರೀ. ಡಿ ನೇಮ್ಯನಾಯ್ಕ ವಿಕಲಚೇತನರ ಎಂ.ಆರ್.ಡಬ್ಲ್ಯೂಹಾಗೂ ವಿ.ಆರ್.ಡಬ್ಲ್ಯೂ ಒಕ್ಕೂಟ ದಾವಣಗೆರೆ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವಿ.ಆರ್.ಡಬ್ಲ್ಯೂ ಹಾಜರಾಗಿ ನವ ಜೋಡಿಗೆ ಶುಭಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ