ದಾವಣಗೆರೆ:
ಇಂದು ಲೋಕಾರ್ಪಣೆಗೊಂಡ ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಹಾಗೂ ಭಾರತದ ಹೆಮ್ಮೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ ನಿರ್ಮಾಣದ ಹಿಂದೆ ನಮ್ಮ ರಾಜ್ಯದ ದಾವಣಗೆರೆ ಜಿಲ್ಲೆಯ ಓರ್ವ ಸಿವಿಲ್ ಎಂಜಿನಿಯರ್ ಪಾತ್ರವೂ ಇದೆ ಎಂಬುದೇ ಕನ್ನಡಿಗರ ಪಾಲಿಗೆ ಹೆಮ್ಮೆ ತರುವ ವಿಷಯ..!
ಹೌದು ನಗರದ ವಿದ್ಯಾನಗರದ ನಿವಾಸಿಯಾಗಿರುವ ಸಿವಿಲ್ ಎಂಜಿನಿಯರ್ ಕೆ.ಎಂ.ಜಗದೀಶ್, ವಿಶ್ವದ ಅತಿ ಎತ್ತರದ ಮೂರ್ತಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಸ್ಥಾಪನೆ ತಂಡದಲ್ಲಿ ಸಕ್ರಿಯವಾಗುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗುಜರಾತ್‌ನ ಗಾಂಧಿನಗರದ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್, ಕಳೆದ ಒಂದೂವರೆ ವರ್ಷದಿಂದ ಸರ್ದಾರ್ ಪ್ರತಿಮೆ ನಿರ್ಮಾಣದ ಪರಿಣಿತರ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಪ್ರತಿಮೆಗೆ ಬೇಕಾದ ಪರಿಕರಗಳ ಗುಣಮಟ್ಟ ತಪಾಸಣೆ ಮಾಡುವ ಹೊಣೆ ಜಗದೀಶ್ ಅವರದ್ದಾಗಿದೆ.
ಒಂದು ವರ್ಷದಿಂದ ಗುಜರಾತ್ನಲ್ಲಿ ಬೀಡುಬಿಟ್ಟಿರುವ ಜಗದೀಶ್ 200 ಪರಿಣಿತ ಆರ್ಕಿಟೆಕ್ಟ್ ಜತೆ ಕೆಲಸ ಮಾಡುತ್ತಿದ್ದ ಜಗದೀಶ್, ಕಂಪ್ಯೂಟರ್‌ನಲ್ಲಿ ಡಿಸೈನ್ ಮಾಡಿ ಮೇಲಧಿಕಾರಿಗಳಿಗೆ ಇಂಥಾದ್ದೇ ಪರಿಕರ ಬಳಸಿದರೆ ಉತ್ತಮ ಎಂದು ಸಲಹೆ ನೀಡುತ್ತಾ ಬಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ