ವಿಶ್ವವಿದ್ಯಾಲಯ ಪರೀಕ್ಷಾಂಗ ವಿಭಾಗದ ಯಡವಟ್ಟು : ಉತ್ತೀರ್ಣರಾದರೂ ಅನ್ನುತ್ತೀರ್ಣ ಎಂದು ದಾಖಲು : ವಿದ್ಯಾರ್ಥಿಗಳ ಪ್ರತಿಭಟನೆ

ಚಳ್ಳಕೆರೆ

              ನಗರದ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸೆಮಿಷ್ಟರ್ ಪರೀಕ್ಷೆಯ ಫಲಿತಾಂಶವನ್ನು ನಿಗದಿತ ಅವಧಿಯಲ್ಲಿ ಪ್ರಕಟಿಸುತ್ತಿಲ್ಲ ಹಾಗೂ ಫಲಿತಾಂಶ ಸಹ ಅನೇಕ ಲೋಪದೋಷಗಳಿಂದ ಕೂಡಿದ್ದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ನಿರ್ಲಕ್ಷ್ಯೆಯ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಮುಂಭಾಗದ ಪ್ರತಿಭಟನೆ ನಡೆಸಿ ಪ್ರಾಂಶುಪಾಲ ಜಿ.ವೆಂಕಟೇಶ್‍ಗೆ ಮನವಿ ಪತ್ರ ನೀಡಿ ಲೋಪದೋಷಗಳಿಂದ ಮುಕ್ತಿಗೊಳಿಸುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯ ಪಡಿಸಿದರು.
               ಈ ಬಗ್ಗೆ ಮಾಹಿತಿ ನೀಡಿದ ಪದವಿ ವಿದ್ಯಾರ್ಥಿಗಳು, ಸರಿಯಾದ ಕ್ರಮದಲ್ಲಿ ಫಲಿತಾಂಶವನ್ನು ನೀಡದೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಅನ್ಯ ಜ್ಞಾನಗಳ ಶಿಸ್ತು ಆಯ್ಕೆ, ಸಾಮಾಜಿಕ ಪರಿಸರ ಅಧ್ಯಯನ, ಭಾರತೀಯ ಸಂವಿಧಾನ, ಸಾಮಾಜಿಕ ನಿರ್ವಹಣೆ, ಕಂಪ್ಯೂಟರ್ ಅಪ್ಲಿಕೇಷನ್ ಮುಂತಾದ ವಿಷಯಗಳಲ್ಲಿ ಏರುಪೇರಿನ ಫಲಿತಾಂಶ ಪ್ರಕಟಿಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಈಡುಮಾಡಲಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದರೂ ಸಹ ಯಾವುದೇ ಸುಧಾರಣೆಯಾಗಿಲ್ಲ ಇದರಿಂದ ಬೇಸತ್ತು ಪ್ರತಿಭಟನೆ ನಡೆಸಲಾಗುತ್ತಿದೆ ಎಂದಿದ್ದಾರೆ.
                ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಪರೀಕ್ಷೆಯನ್ನು ಬರೆದಿದ್ದರೂ ಸಹ ಪಾಸಾಗುವ ಎಲ್ಲಾ ಆರ್ಹತೆ ಇದ್ದರೂ ಸಹ ಅಂತಹವರ ಫಲಿತಾಂಶವನ್ನು ಅನುತ್ತೀರ್ಣವೆಂದು ಪ್ರಕಟಿಸಲಾಗುತ್ತಿದೆ. ಇದರಿಂದ ಶ್ರಮವಹಿಸಿ ಓದಿದ ವಿದ್ಯಾರ್ಥಿಗಳಿಗೆ ಆತಂಕ ಹೆಚ್ಚಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಪರೀಕ್ಷಾಂಗ ವಿಭಾಗದ ಮುಖ್ಯಸ್ಥರು ಈ ಬಗ್ಗೆ ಜಾಗೃತರಾಗಿ ಕ್ರಮ ಕೈಗೊಳ್ಳಬೇಕಿದೆ. ಲೋಪವೆಸಗುವ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ಧಾರೆ.
               ಈ ಸಂದರ್ಭದಲ್ಲಿ ಬಿ.ಜೆ.ಸುಷ್ಮಾ, ಉಮಾ, ಲಾವಣ್ಯ, ಅಂಬಿಕಾ, ಚೇತನ್ಯ, ಶಾರದ, ಮಮತ, ಶಿಲ್ಪ, ಅರ್ಚನ, ಚಾಂದಿನಿ ಮುಂತಾದವರು ಫಲಿತಾಂಶದ ವಿಳಂಬದ ಬಗ್ಗೆ ವಿಶ್ವವಿದ್ಯಾಲಯ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ.ಜಿ.ವೆಂಕಟೇಶ್, ಪರೀಕ್ಷೆಯ ಫಲಿತಾಂಶಗಳಲ್ಲಿ ಆಗುತ್ತಿರುವ ಲೋಪಗಳ ಬಗ್ಗೆ ಈಗಾಗಲೇ ಸಂಬಂಧಪಟ್ಟ ಪರೀಕ್ಷಾ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದು ಫಲಿತಾಂಶವನ್ನು ಸರಿಪಡಿಸುವಂತೆ ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಿಶ್ವವಿದ್ಯಾಲಯ ಮುಖ್ಯಸ್ಥರಿಗೆ ಇಂದೇ ಪತ್ರ ಬರೆಯುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರುಗಳಾದ ಎಂ.ಆರ್.ಮಂಜುನಾಥರೆಡ್ಡಿ, ರಘುನಾಥ್, ಡಾ.ಸಿ.ವಿ.ಕವಿತಾ, ಕೆ.ಚಿತ್ತಯ್ಯ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap