ದಾವಣಗೆರೆ :
ನಗರದ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಇವುಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ಸಪ್ತಾಹದ” ಪ್ರಯುಕ್ತ “ಆತ್ಮಹತ್ಯೆ” ಒಂದು ಸಾಮಾಜಿಕ ಪಿಡುಗು ವಿಷಯ ಕುರಿತು ಪ್ರಬಂಧ ಸ್ಪರ್ಧೆ ನಡೆಯಿತು.
ಕಾಲೇಜಿನ ವಿವಿಧ ವಿಭಾಗದಿಂದ ಒಟ್ಟು 45 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಸರೋಜಬಾಯಿ ಜೆ. ಎಂ., ಕಾಲೇಜಿನ ಪ್ರಾಂಶುಪಾಲ ಡಿ. ಹೆಚ್ ಪ್ಯಾಟಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಗಂಗಂಸಿದ್ದಾ ರೆಡ್ಡಿ, ಮನಶಾಸ್ತ್ರಜ್ಞರಾದ ಎಸ್. ವಿಜಯಕುಮಾರ್, ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಸಂತೋಷ್‍ಕುಮಾರ್, ಶೂಶ್ರುಷಕ ಗಿರೀಶ್ ಎಸ್. ವೈ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಅಶೋಕ್‍ಕುಮಾರ್ ವಿ ಪಾಳೇದ್, ಪ್ರೊ. ಕಾಡಜ್ಜಿ ಶಿವಪ್ಪ, ಪ್ರೊ. ಎಂ. ಡಿ. ಅಣ್ಣಯ್ಯ, ಪ್ರೊ. ಅಂಜಿನಪ್ಪ ಡಿ.ಪ್ರೋ. ಬಸವರಾಜ್ ದೊಮ್ಮಳ್ಳಿ ಇತರರಿದ್ದರು.







