ವೇತನ ತಾರತಮ್ಯ ಸರಿದೂಗಿಸಲು ಉಪತಹಸೀಲ್ದಾರರಿಗೆ ಮನವಿಪತ್ರ ಸಲ್ಲಿಕೆ

ಮಧುಗಿರಿ

6ನೇ ವೇತನ ಆಯೋಗದ 2ನೇ ಸಂಪುಟದ ವರದಿಯ ಅನುಷ್ಠಾನ ವರದಿಯನ್ನು ಜಾರಿಗೊಳಿಸಿ ಬಡ್ತಿ ಪಡೆದ ಪ್ರೌಢಶಾಲಾ ಶಿಕ್ಷಕರು ಹಾಗೂ ಉಪನ್ಯಾಸಕರುಗಳ ಸಮಸ್ಯೆ ಬಗೆಹರಿಸಿಕೊಡುವಂತೆ ಕರ್ನಾಟಕ ರಾಜ್ಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪತಹಸೀಲ್ದಾರ್ ತಿಪ್ಪೇಸ್ವಾಮಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲ್ಯಾಣ ದೃಷ್ಟಿಯಿಂದ ಈಗಾಗಲೇ 6ನೇ ವೇತನ ಆಯೋಗದ ಮೊದಲನೇ ಸಂಪುಟದ ವರದಿಯ ಅನುಷ್ಠಾನವನ್ನು ಯಥಾವತ್ತಾಗಿ ಜಾರಿಗೊಳಿಸಿರುವುದಕ್ಕೆ ಅಭಿನಂದಿಸುತ್ತೇವೆ. ಬಡ್ತಿ ನೌಕರರಿಗೆ ಪದೋನ್ನತಿಯಿಂದಾಗಿ 10, 15, 20, 25, 30 ವರ್ಷಗಳ ಕಾಲಮಿತಿ ವೇತನ ಬಡ್ತಿಗಳು ಪಡೆಯದೇ ಈ ಕಾಲಮಿತಿ ಬಡ್ತಿ ಪಡೆದ ನೌಕರರಿಗಿಂತ ಕಡಿಮೆ ಮಾಸಿಕ ವೇತನವನ್ನು ಪಡೆಯುತ್ತಿರುತ್ತೇವೆ. ಆದ್ದರಿಂದ 2ನೇ ಸಂಪುಟ ವರದಿಯಲ್ಲಿ 6ನೇ ವೇತನ ಅಯೋಗಕ್ಕೆ ಸಂಬಂಧಿಸಿ ಶಿಫಾರಸ್ಸು ಮಾಡಿರುವುದನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಪ್ರಾಥಮಿಕ ಶಾಲೆಯಿಂದ ಬಡ್ತಿ ಪಡೆದ, ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಪದೋನ್ನತಿ ಪಡೆದ ಬಡ್ತಿ ಪ್ರೌಢಶಾಲಾ ಶಿಕ್ಷಕರಿಗೆ 400 ರೂ., ಉಪನ್ಯಾಸಕರಿಗೆ 500 ರೂ.ಗಳ ವಿಶೇಷ ಭತ್ಯೆ ಸೌಲಭ್ಯವನ್ನು ನೀಡಿ ವೇತನವನ್ನು ಫಿಟ್‍ಮೆಂಟ್ ಆಗುವಂತೆ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.

ಬಡ್ತಿ ಪ್ರೌ.ಶಾ.ಸ.ಶಿ ಸಂಘದ ಅಧ್ಯಕ್ಷ ಜಿ.ಎಚ್.ನಾಗಭೂಷಣರೆಡ್ಡಿ, ಉಪಾಧ್ಯಕ್ಷ ರಂಗನಾಥಪ್ಪ, ಪ್ರಧಾನ ಕಾರ್ಯದರ್ಶಿ ಎಲ್.ಬೀರಲಿಂಗಯ್ಯ, ಖಜಾಂಚಿ ಎಚ್.ಕೆ.ನಾರಾಯಣಪ್ಪ, ತಾ.ಪ್ರೌ.ಸÀ.ಶಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪದಾಧಿಕಾರಿಗಳಾದ ಸಿದ್ದೇಶ್, ಆರ್.ಮಲ್ಲೇಶ್ ಮುಂತಾದವರು ಪಾಲ್ಗೊಂಡಿದ್ದರು

Recent Articles

spot_img

Related Stories

Share via
Copy link