ವೇದಾವತಿ ನದಿಪಾತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆ ಆರೋಪ

ಚಳ್ಳಕೆರೆ:

   ತಾಲ್ಲೂಕಿನ ತಳಕು ಠಾಣಾ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದ ವೇದಾವತಿ ನದಿ ಪಾತ್ರದಿಂದ ಪ್ರತಿನಿತ್ಯ ಅಕ್ರಮವಾಗಿ ಯಾವುದೇ ಅನುಮತಿ ಇಲ್ಲದೆ ಲಾರಿಗಳಲ್ಲಿ ಮರಳನ್ನು ಬೆಂಗಳೂರು ಹಾಗೂ ಇನ್ನಿತರೆ ಕಡೆಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಉಪವಿಭಾಗಾಧಿಕಾರಿ ವಿಜಯಕುಮಾರ್, ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಬುಧವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

   ಈ ಸಂದರ್ಭದಲ್ಲಿ ನಾಲ್ಕು ಲಾರಿ, ಒಂದು ಜೆಸಿಬಿ ಸ್ಥಳದಲ್ಲಿದ್ದು, ಈ ಪೈಕಿ ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡು ಇಲ್ಲಿನ ತಾಲ್ಲೂಕು ಕಚೇರಿಗೆ ಆಗಮಿಸಿ ಮರಳು ಸಾಗಾಣಿಕೆಯ ಬಗ್ಗೆ ಅನುಮತಿ ಪಡೆದಿದ್ಧಾರೆಯೇ ಅಥವಾ ಅಕ್ರಮ ಸಾಗಾಟವೇ ಎಂಬ ಬಗ್ಗೆ ಮಾಹಿತಿ ಪಡೆದು ವರದಿ ನೀಡುವಂತೆ ತಹಶೀಲ್ದಾರ್‍ಗೆ ಸೂಚನೆ ನೀಡಿರುತ್ತಾರೆ.

   ಆರೋಪ :- ಅಕ್ರಮ ಮರಳು ಸಾಗಾಟ ನಿತ್ಯ ನಡೆಯುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಇನ್ನೂ ಹೆಚ್ಚು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕೆಂದು ಯುವ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್.ಎನ್.ಆದರ್ಶ ತಿಳಿಸಿದ್ಧಾರೆ. ಪ್ರತಿನಿತ್ಯವೂ ಗುಡಿಹಳ್ಳಿ ಗ್ರಾಮದಿಂದ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಲಾರಿಗಳ ಮೂಲಕ ಮಿತಿಮೀರಿದ ತೂಕದಲ್ಲಿ ಮರಳು ಸಾಗಾಟವಾಗುತ್ತಿದ್ದು, ಈ ಬಗ್ಗೆ ತಾಲ್ಲೂಕು ಆಡಳಿತ ಹೆಚ್ಚು ಗಮನ ಹರಿಸಬೇಕೆಂದು ಅವರು ತಿಳಿಸಿದ್ದಾರೆ.

   ವಶಪಡಿಸಿಕೊಂಡ ನಾಲ್ಕು ಲಾರಿಗಳನ್ನು ಪರಿಶೀಲನೆ ನಡೆಸಿದಾಗ ಎರಡು ಲಾರಿಗಳಲ್ಲಿ ಮಾತ್ರ ಮರಳು ತುಂಬಿದ್ದು, ಇನ್ನೂ ಎರಡು ಲಾರಿಗಳು ತುಂಬುವ ಪ್ರಯತ್ನದಲ್ಲಿದ್ದವು. ಇದಕ್ಕೆ ಹೊರತು ಪಡಿಸಿ ತಮಿಳು ನಾಡು ಮೂಲದ ಲಾರಿಯೊಂದು ಸಹ ಅಕ್ರಮ ಮರಳು ಮಾರಾಟ ಮಾಡುವ ಸಂದರ್ಭದಲ್ಲಿ ಸಿಕ್ಕಿಬಿದಿದೆ. ಈ ಬಗ್ಗೆ ಸಂಪೂರ್ಣವಾದ ವರದಿಯನ್ನು ನೀಡುವಂತೆ ತಹಶೀಲ್ದಾರ್‍ರವರು ಸೂಚನೆ ನೀಡಿದ್ದು, ವರದಿ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದ್ಧಾರೆ.

Recent Articles

spot_img

Related Stories

Share via
Copy link
Powered by Social Snap