ವ್ಯಕ್ತಿತ್ವ ವಿಕಾಸವೇ ಶಿಕ್ಷಣದ ಗುರಿ – ಸೌಮ್ಯಶ್ರೀ

ತುಮಕೂರು

               ನಮ್ಮೆ ಭಾರತ ದೇಶ ಎರಡು ರೀತಿಯ ಶಿಕ್ಷಣವನ್ನು ಮುಂದುವರಿಸಿಕೊಂಡು ಬಂದಿದೆ. ಉಪನಿಷತ್ತುಗಳಿಂದ ಹಿಡಿದು ಆಧುನಿಕ ವಿದ್ವಾಂಸರವರೆಗೂ ಶಿಕ್ಷಣವನ್ನು ಭಿನ್ನ ಭಿನ್ನವಾಗಿ ಗುರುತಿಸಲಾಗಿದೆ. ಸ್ವಾಮಿ ವಿವೇಕಾನಂದರು ವ್ಯಕ್ತತ್ವ ವಿಕಾಸವೇ ಶಿಕ್ಷಣದ ಗುರಿ ಎಂದು ಹೇಳಿದ್ದಾರೆ ಎಂದು ಸಿದ್ದಗಂಗಾ ಕಾಲೇಜಿನ ಉಪನ್ಯಾಸಕಿ ಸೌಮ್ಯಶ್ರೀ ಹೇಳಿದರು.
               ಅವರು ಕೃಷ್ಣಾನಗರದಲ್ಲಿರುವ ವಿದ್ಯಾವಾಹಿನಿ ಕಾಲೇಜಿನಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗ ಕಾರ್ಯಕ್ರಮದಲ್ಲಿ ಡಾ.ಶ್ರೀ ಸಿವಕುಮಾರ ಸ್ವಾಮೀಜಿ ಮತ್ತು ಶಿಕ್ಷಣ ಎಂಬ ವಿಷಯ ಕುರಿತು ಮಾತನಾಡಿದರು. ಒಬ್ಬ ವಿದ್ಯಾರ್ಥಿಯನ್ನು ಸಂಪೂರ್ಣ ಮನುಷ್ಯನನ್ನಾಗಿ ಮಾಡುವುದೇ ಉತ್ತಮವಾದ ಶಿಕ್ಷಣ. ಆದರ್ಶ ವ್ಯಕ್ತಿಯಾಗಿ ಅವನ ವ್ಯಕ್ತಿತ್ವವನ್ನು ರೂಪಿಸುವುದೇ ಶಿಕ್ಷಣ ಎಂದರು.
             ಒಂದು ಬಾರಿ ಒಬ್ಬ ವ್ಯಕ್ತಿ ಶಿಕ್ಷಣ ಪಡೆದರೆ ಒಬ್ಬ ವ್ಯಕ್ತಿಯಾಗಿ ರೂಪುಗೊಂಡು ತನ್ನ ಬದುಕನ್ನು ತಾನೇ ನಿಭಾಇಸಿಕೊಳ್ಳುತ್ತಿದ್ದರು. ಏಕಮಾತ್ರ ಶಿಕ್ಷಣ ಸಾರ್ವತ್ರಿಕವಾದುದು. ಕ್ಷತ್ರಿಯರಿಗೂ ಸಹ ಕಲೆಗಳಿಗೆ ಸಂಬಂಧಪಟ್ಟಂತೆ ಶಿಕ್ಷಣ ನಡೆಯುತ್ತಿತ್ತು. ಅಗ್ರಹಾರ, ಬ್ರಹ್ಮಪುರಿ, ಘಟಿಕ ಸ್ಥಾನಗಳಲ್ಲಿ ರಾಜರುಗಳಿಗೆ ಶಿಕ್ಷಣ ನಡೆಯುತ್ತಿತ್ತು. ಹದಿನೆಂಟನೆ ಶತಮಾನದವರೆವಿಗು ಇದು ಮುಂದುವರೆದಿತ್ತು ಎಂದು ತಿಳಿಸಿದರು.
ಕ್ರಿಶ್ಚಿಯನ್ ಮಿಷನರಿಗಳು ಧರ್ಮ ಪ್ರಚಾರದ ಜೊತೆ ಅನೇಕ ಶಿಕ್ಷಣ ವ್ಯವಸ್ಥೆಯನ್ನು ತಂದರು. ಕಾಯಕವನ್ನು ಆಧರಿಸಿ ಮಠಗಳು ಶಿಕ್ಷಣ ಕೊಡುತ್ತಿತ್ತು. ಸಮಾಜಸೇವೆಯನ್ನು ಸಾರುವ ಧಾರ್ಮಿಕ ಧರ್ಮವನ್ನು ಅನೇಕ ಮಠಗಳು ಪ್ರಚಾರ ಮಾಡಿದವು.

             ತುಮಕೂರಿನಲ್ಲಿ ಅಸ್ತಿತ್ವದಲ್ಲಿರುವ ಕೆಲವು ಮಠಳು ಸಿಗುತ್ತವೆ. ಇವುಗಳಲ್ಲಿ ಕೆಲವೇ ಕೆಲವು ಮಠಗಳು ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಿವೆ. ತುಮಕೂರಿನ ಅದರಲ್ಲೂ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠ ಹೆಮ್ಮೆಯ ಮಠವಾಗಿದೆ. ವಿಶ್ವದಲ್ಲೇ ವಿಶ್ವಭಾರತಿಗೆ ಆರತಿಯಂತಿರುವ ಮಠ ಸಿದ್ದಗಂಗಾ ಮಠ. ಇದರ ಮೂಲ ಹದಿನಾರನೇ ಶತಮಾನದಲ್ಲಿ ಎಡೆಯೂರು ಸಿದ್ದಲಿಂಗೇಶ್ವರ ಮಠ ಸ್ಥಾಪನೆಯಾದದ್ದನ್ನು ಮರೆಯುವಂತಿಲ್ಲ. ಅದೇ ರೀತಿಯಲ್ಲಿ 13ನೇ ಶತಮಾನದಲ್ಲಿ ಅಟವಿ ಸ್ವಾಮಿಗಳು ಸಿದ್ದಗಂಗಾ ಮಠಕ್ಕೆ ಬರುವುದನ್ನು ಮನಗಾಣಬಹುದಾಗಿದೆ ಎಂದು ಹೇಳಿದರು.
               ಸಿದ್ದಗಂಗಾ ಮಠ ಮತ್ತು ಶಿವಕುಮಾರಸ್ವಾಮೀಜಿ ಶಿಕ್ಷಣಕ್ಕೆ ನೀಡಿದ ಮಹತ್ವ ಅತ್ಯಂತ ಅಪರೂಪ. ಅವಿಸ್ಮರಣೀಯ. ಪ್ರತಿನಿತ್ಯ ಹತ್ತು ಸಾವಿರ ವಿದ್ಯಾರ್ಥಿಗಳ ವಿದ್ಯಾರ್ಜನೆ ನಡಯುತ್ತಿರುವುದು ಪರಮಾಶ್ಚರ್ಯ. ಶಿಕ್ಷಣ ಕ್ಷೇತ್ರಕ್ಕೆ ಶಿವಕುಮಾರ ಸ್ವಾಮೀಜಿ ಅವರ ಸೇವೆ ಕರ್ನಾಟಕದಲ್ಲಿ ಮನೆ ಮಾತಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಜ್ಞಾನಬುತ್ತಿ ಸತ್ಸಂಗದ ಅಧ್ಯಕ್ಷೆ ಎಂ.ಸಿ.ಲಲಿತಾ ಮಾತನಾಡಿ ಈಗಿರುವ ಶಿಕ್ಷಣ ಪದ್ದಥಿ ಬದಲಾಗಬೇಕು. ಏಕರೂಪ ಶಿಕ್ಷಣ ಪದ್ದತಿ ಜಾರಿಗೆ ಬರಬೇಕು. ಶಿಕ್ಷಣ ಎಲ್ಲಾ ವರ್ಗದ ಎಲ್ಲಾ ಜಾತಿಯ ಹಾಗೂ ಎಲ್ಲಾ ಧರ್ಮದವರಿಗು ಸುಲಭವಾಗಿ ಸಇಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ಶಿವಕುಮಾರ ಸ್ವಾಮಿಗಳು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅದ್ಭುತವಾದದ್ದೆಂದು ಮಿಗಿಲಾಗಿ ಬೇರೆಯವರಿಗೆ ಅನುಕರಣೀಯವಾದ ಗುಣವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಸೌಮ್ಯಶ್ರೀ ಅವರನ್ನು ಜ್ಞಾನಬುತ್ತಿ ಸತ್ಸಂಗದ ಸಂಸ್ಥಾಪಕ ಪಿ.ಶಾಂತಿಲಾಲ್ ಗೌರವಾಧ್ಯಕ್ಷ ಟಿ. ಮುರಳಿಕೃಷ್ಣಪ್ಪ ಸನ್ಮಾನಿಸಿದರು. ಸುಮನ ಮತ್ತು ಇಂದಿರಮ್ಮ ಪ್ರಾರ್ಥಿಸಿದರು. ಕಾರ್ಯದರ್ಶಿ ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿ, ಮಾಜಿ ಕಾರ್ಯದರ್ಶಿ ಸಿದ್ದಗಂಗಮ್ಮ ಟಿ.ಎಸ್. ನಿರೂಪಿಸಿದರು.

Recent Articles

spot_img

Related Stories

Share via
Copy link