ಹರಿಹರ:
ನಗರದ ಜೆ.ಸಿ.ಬಡಾವಣೆಯ ಒಂದನೇ ಮೇನ್ ನಿವಾಸಿ ಶತಾಯುಷಿ ರಾಮಕ್ಕ ಹಾಲಪ್ಪ ಚಂದಾವರಿ ಅವರನ್ನು ಇಂದು ಅವರ ನಿವಾಸದಲ್ಲಿ ಶಿವಮೊಗ್ಗ ಜಿಲ್ಲಾ ಹರಳಯ್ಯ ಸಮಗಾರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಶತಾಯುಷಿ ರಾಮಕ್ಕ ನವರು ಇಂದು ತಮ್ಮ ನಿವಾಸದಲ್ಲಿ 103 ವರ್ಷ ತುಂಬಿ 104 ನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭದಲ್ಲಿ ತನ್ನ ಮಕ್ಕಳು ಮೊಮ್ಮಕ್ಕಳು ಹಾಗೂ ಮರಿ ಮಕ್ಕಳೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಇದೇ ಸಂದರ್ಭದಲ್ಲಿ,ಶಿವಮೊಗ್ಗ ಜಿಲ್ಲೆ ಹರಳಯ್ಯ ಸಮಗಾರ ಸಂಘದ ಉಪಾಧ್ಯಕ್ಷ ಮಂಜುನಾಥ ಮಾನೆ ಮತ್ತು ಶ್ರೀಮತಿ ಲಕ್ಷ್ಮಿ ಮನೆಯವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳೊಂದಿಗೆ ರಾಮಕ್ಕ ನನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಂಜುನಾಥ್ ಮಾನೆ ಮಾತನಾಡಿ ಎಲ್ಲ ಸಮಾಜದವರು ಇಂದು ರಾಜಕೀಯವಾಗಿ ಮುಂದುವರಿದು ಜನಪ್ರತಿನಿಧಿಗಳಾಗಿ ಆಯ್ಕೆ ಹೊಂದುತ್ತಿದ್ದಾರೆ ಆದರೆ ನಮ್ಮ ಸಮಾಜದ ವ್ಯಕ್ತಿಗಳು ಸಹ ರಾಜಕೀಯವಾಗಿ ಮುಂದೆ ಬರುವ ವಾತಾವರಣವನ್ನು ನಾವು ಸೃಷ್ಟಿಸಬೇಕಾಗಿದೆ ಈ ನಿಟ್ಟಿನಲ್ಲಿ ನಮ್ಮ ಸಂಘ ಪ್ರಯತ್ನಗಳನ್ನು ಮಾಡುತ್ತಿದೆ.
ಸರ್ಕಾರದಿಂದ ಅನೇಕ ಸೌಲಭ್ಯಗಳು ಇಂದು ನಮ್ಮ ಸಮಾಜಕ್ಕೆ ಲಭ್ಯವಿದ್ದು ಅರ್ಹರಿಗೆ ಸೌಲಭ್ಯ ದೊರಕಿಸಿಕೊಡುವಲ್ಲಿ ನಮ್ಮ ಸಂಘ ತನ್ನ ವ್ಯಾಪ್ತಿ ಹೊರತುಪಡಿಸಿ ಹೋರಾಟ ನಡೆಸಲಿದೆ ಮತ್ತು ಸಮಾಜದ ಗಣ್ಯ ವ್ಯಕ್ತಿಗಳನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಹಾಗೂ ಇತರೆ ಸಹಾಯ ನೀಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ್ ಖಾನ್ ಪೆಟ್, ಕಾರ್ಯದರ್ಶಿ ಪರಶುರಾಮ ಸಾಬೋಜಿ, ನಾಗರಾಜ್ ಗಾಮನಗಟ್ಟಿ, ಗುರುಸ್ವಾಮಿ, ಹರೀಶ್ ಸಾಣಿಕೆ,ರಾಮಚಂದ್ರ ಕೊಪ್ಪಳ, ಪರಶುರಾಮ್ ಸಾಣಿಕೆ, ರವಿಕುಮಾರ್ ಅಬ್ದುಲ್ ಖಾನಿ, ಹರಿಹರ ತಾಲ್ಲೂಕು ಹರಳಯ್ಯ ಸಮಗಾರ ಸಂಘದ ಅಧ್ಯಕ್ಷ ರಮೇಶ್ ಮಾನೆ, ಉಪಾಧ್ಯಕ್ಷ ಸಂಜು ಕಾಶಿ, ಅಣ್ಣಪ್ಪ ಸಾಣಿಕೆ,ಮಂಜುನಾಥ್ ಕಾಳೆಗುಂದಿ, ಸುಧಾ, ಗಣೇಶ್ ಮಾನೆ, ರೇಖಾ, ಛಾಯಾ, ಶರತ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ