ಕುಣಿಗಲ್
ತಾಲ್ಲೂಕಿನ ಬಿದನಗೆರೆಯ ಶ್ರೀ ಸತ್ಯ ಶನೇಶ್ವರಸ್ವಾಮಿ ಕ್ಷೇತ್ರವನ್ನ ಕರ್ನಾಟಕದ ಶನಿಸಿಂಗ್ನಾಪುರ ಐತಿಹಾಸಿಕ ಸ್ಥಳವನ್ನಾಗಿ ಮಾಡಲು ನಾಡಿನ ವಿವಿಧ ಮಠಗಳ ಮಹಾಸ್ವಾಮೀಜಿಗಳ ಸಮ್ಮುಖದಲ್ಲಿ ಆ.31ರಂದು ಲೋಕಾರ್ಪಣೆ ಮಾಡಲಾಗುವುದೆಂದು ಶ್ರೀಸತ್ಯ ಶನೇಶ್ವರಸ್ವಾಮಿಯ ಧರ್ಮದರ್ಶಿ ಹಾಗೂ ಸ್ಥಾಪಕರಾದ ಡಾ. ಧನಂಜಯ ಗುರುಜೀ ತಿಳಿಸಿದರು.
ಅವರು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ಐತಿಹಾಸಿಕ ಅವಿಸ್ಮರಣೆಯ ಬಿದಿನಗೆರೆಯಲ್ಲಿ ಶ್ರೀ ಸತ್ಯಶನೇಶ್ವರ ಸ್ವಾಮಿ ಕ್ಷೇತ್ರವನ್ನ ಮಹಾರಾಷ್ಟ್ರದಲ್ಲಿರುವ ಶನಿಸಿಂಗ್ನಾಪುರ ಮಾದರಿಯಲ್ಲಿ ಈ ಕ್ಷೇತ್ರವನ್ನ ಕರ್ನಾಟಕದ ಶನಿಸಿಂಗ್ನಾಪುರವನ್ನಾಗಿ ಮಾಡುವ ಮೂಲಕ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಶನೇಶ್ವರ ವಿಗ್ರಕ್ಕೆ ತಾವೇ ಖುದ್ದಾಗಿ ಎಣ್ಣೆಯಾಕಿ ತಮ್ಮ ಭಕ್ತಿಯನ್ನು ಸಮರ್ಪಿಸಿಕೊಂಡು ತಮಗೆ ಮತ್ತು ಕುಟುಂಬಕ್ಕೆ ಭಗವಂತನಿಂದ ಒಳಿತನ್ನು ಪಡೆಯುವ ಅವಕಾಶವನ್ನ ಕಲ್ಪಿಸಲಾಗುವುದೆಂದು ತಿಳಿಸಿದರು.
ಈ ಕ್ಷೇತ್ರದಲ್ಲಿ ಉದ್ಬವ ಬಸವಣ್ಣ, ಶ್ರೀ ಸತ್ಯಶನೇಶ್ವರಸ್ವಾಮಿ, ಹಾಗೂ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ನೆಲೆಸಿರುವ ಈ ಪುಣ್ಯ ಕ್ಷೇತ್ರವು ತ್ರಿವೇಣಿ ಸಂಗಮವಾಗಿ ನಿರ್ಮಾಣವಾಗುತ್ತಿದ್ದು, ವಿಶ್ವದಲ್ಲಿಯೇ ಪ್ರಥಮ ಬಾರಿಗೆ 151 ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿಯ ನಿರ್ಮಾಣವಾಗುತ್ತಿದ್ದು, ಇದೇ ಸನ್ನಿಧಿಯಲ್ಲಿ ಆಗಸ್ಟ್ 31ರಂದು ಶನಿಸಿಂಗಾಪುರ ಮಾದರಿಯಲ್ಲಿ ದೇವರ ವಿಗ್ರವನ್ನು ಮುಟ್ಟಿ ಎಳ್ಳೆಂಣ್ಣೆ ಹಾಕುವ ಕಾರ್ಯಕ್ರಮವನ್ನ ಲೋಕಾರ್ಪಣೆ ಗೊಳಿಸಲು ಈ ಕ್ಷೇತ್ರದ ಸನ್ನಿಧಿಗೆ ಕೂಡಲ ಸಂಗಮದ ಪಂಚಮಸಾಲ ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ, ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತಿವೀರ ಮಹಾಸ್ವಾಮೀಜಿ, ಅರೆಶಂಕರ ಮಠದ ಶ್ರೀ ಸಿದ್ದರಾಮಚೈತನ್ಯಸ್ವಾಮೀಜಿ, ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾಪುರಿ ಮಹಾಸ್ವಾಮೀಜಿ, ಚಿತ್ರದುರ್ಗದ ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಧುರೆ ಶ್ರೀ ಪುರುಷೋತ್ತಮ ನಂದಪುರಿ ಮಹಾಸ್ವಾಮೀಜಿ ಆಗಮಿಸುತ್ತಿದ್ದು ಬೆಂ.ಗ್ರಾ.ಸಂಸದ ಡಿ.ಕೆ.ಸುರೇಶ್, ಶಾಸಕರಾದ ಡಾ.ರಂಗನಾಥ್, ವಿಧಾನಪರಿಷತ್ ಸದಸ್ಯ ಡಾ.ಟಿ.ಎ. ಶರವಣ ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ಬಿ.ಬಿ.ರಾಮಸ್ವಾಮಿಗೌಡ, ಬಿಜೆಪಿ ಮುಖಂಡರಾದ ಡಿ.ಕೃಷ್ಣಕುಮಾರ್ ಮತ್ತು ರಾಜೇಶ್‍ಗೌಡ ಸೇರಿದಂತೆ ಚಲನ ಚಿತ್ರ ನಟರಾದ ರಮೇಶ್‍ಭಟ್, ಮುಖ್ಯಮಂತ್ರ ಚಂದ್ರು, ಸಂದರ್‍ರಾಜ್, ನಿರ್ದೇಶಕ ಹೋಂ ಪ್ರಕಾಶ್, ನಟಿ ಆಧಿತಿಪ್ರಭುದೇವ್, ಶನಿ ಧಾರವಾಹಿಯ ಸುನಿಲ್ ಹಾಗೂ ವಿಕಾಸ್ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ