“ಶರಣರ ಬದುಕೆಲ್ಲ ಸಾಮರಸ್ಯದಿಂದಲೇ ಕೂಡಿತ್ತು.”

ತುಮಕೂರು

              “ಹನ್ನೆರಡನೇ ಶತಮಾನದಲ್ಲಿ ಆಗಿಹೋದ ಎಲ್ಲ ಶರಣ ಶರಣೆಯರ ಬದುಕು ಸಾಮರಸ್ಯದಿಂದ ಕೂಡಿತ್ತು. ಅಲ್ಲಿ ಸ್ವಾರ್ಥವಿರಲಿಲ್ಲ. ಎಲ್ಲ ಶರಣ ಶರಣೆಯರೂ ನಿರ್ವಂಚನೆಯಿಂದ ಬಾಳಿದವರು” ಎಂದು ತುಮಕೂರು ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಸಹ ಕಾರ್ಯದರ್ಶಿಗಳಾದ ಶ್ರೀಮತಿ ಎಸ್. ಸುಮಾ ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು.
                ಅವರು ತುರುವೇಕೆರೆ ತಾ|| ದೊಂಬರನಹಳ್ಳಿಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ತುಮಕೂರು ರೋಟರಿ ಪೂರ್ವ ಸಂಘಟನೆಗಳಿಂದ ಸಂಯುಕ್ತವಾಗಿ ಲೀಂ ಬಿ.ಡಿ.ಎಂ. ಚಂದನ್ ಸಂಸ್ಮರಣಾ ದತ್ತಿಯಲ್ಲಿ “ಶರಣರ ಸಾಮರಸ್ಯ ಬದುಕು” ವಿಷಯವಾಗಿ ಮಾತನಾಡುತ್ತಾ ಶರಣರು ನಡೆನುಡಿ ಒಂದಾಗಿ : ಜಾತಿ ದೂರ ಮಾಡಿ ಲಿಂಗ ತಾರತಮ್ಯವಿಲ್ಲದೆ ಬದುಕಿದವರು. ಕಾಯಕ ಮತ್ತು ದಾಸೋಹ ತತ್ತ್ವ ಅವರ ಉಸಿರಾಗಿತ್ತು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿದ ತುಮಕೂರು ರೋಟರಿ ಪೂರ್ವದ ಅಧ್ಯಕ್ಷರಾದ ಡಾ|| ಶ್ರೀ ವಿಜಯಕುಮಾರ್‍ರವರು ಸಸಿಗೆ ನೀರೆರೆದರೆ ಮುಂದೆ ಮರವಾಗಿ ಪರೋಪಕಾರ್ಯಕ್ಕಾಗಿ ಹಣ್ಣು ಕೊಡುವಂತೆ ಮುಂದಿನ ಯುವ ಜನಾಂಗಕ್ಕೆ ಶರಣರು. ಕವಿಗಳು. ದಾಸರ, ಸಂತರ ವಾಣಿಗಳನ್ನು ಬಾಲಕ ಬಾಲಕಿಯರಿಗೆ ಬಿತ್ತಿದರೆ ಮುಂದೆ ಸುಮದರ ಸಮಾಜ ನಿರ್ಮಾಣ ಸಾಧ್ಯ ಎಂದರು.
        ಮುಖ್ಯ ಅತಿಥಿಗಳಾಗಿ ಡಿ.ಆರ್. ಬಸವರಾಜುರವರು ಮಾತನಾಡುತ್ತಾ ಡಿ.ಎಂ. ಚಂದನ್ ಅಕಾಲ ಮರಣಕ್ಕೆ ತುತ್ತಾದರೂ ಆತ           ಚಿಕ್ಕಂದಿನಲ್ಲೇ ವಿನಯ ಸಂಪನ್ನನಾಗಿದ್ದನು. ಆತನ ನೆನಪು ಈ ಕುಟುಂಬಕ್ಕೇ ಸ್ಫೂರ್ತಿ ಎಂದರು.
ವಿಶೇಷವಾಗಿ ಲಿಂ|| ಚಂದನ್‍ರವರ ತಂದೆ ತಾಯಿಗಳಾದ ಡಿ.ಆರ್.ಮಲ್ಲೇಶಯ್ಯ ಸುನಂದ ದಂಪತಿಗಳು ಶ್ರೀ ಸೋಮೇಶ್ವರ ಗ್ರಾಮೀಣ ಪ್ರೌಢಶಾಲೆಯ 120 ಮಕ್ಕಳಿಗೆ ಗ್ರಂಥದಾನ ಮಾಡಿ ಪುತ್ರನ ಅಕಾಲ ಮೃತ್ಯುವನ್ನು ಮರೆಸುವಂತೆ ಪರೋಪಕಾರ ಮೆರೆದರು. ಅಲ್ಲದೆ ಕಂಪ್ಯೂಟರ್‍ಗೆ ಹೊಂದುವ ಬ್ಯಾಟರಿಗಳನ್ನು ನೀಡಿದರು. ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸ್ವೀಕರಿಸಿದರು.
           ಅಧ್ಯಕ್ಷ ಸ್ಥಾನದಿಂದ ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯನವರು ಮಾತನಾಡುತ್ತಾ ಮಾಧ್ಯಮಗಳ ಪ್ರಭಾವದಿಂದ ಕೆಲವೊಮ್ಮೆ ಯುವಶಕ್ತಿ ದಾರಿತಪ್ಪುವ ಸಂದರ್ಭದಲ್ಲಿ ಸಾಹಿತ್ಯ ಸಂಸ್ಕøತಿಗಳ ಪರಿಚಯದಿಂದ ಸನ್ಮಾರ್ಗ ದೊರೆಯುತ್ತದೆ. ಈ ನಿಟ್ಟಿನಲ್ಲಿ ಶರಣರ ವಚನಗಳು ನಮಗೆ ದಾರಿದೀಪ ಎಂದರು.
            ಪ್ರಾರಂಭದಲ್ಲಿ ಶರಣ ಶರಣೆಯರಿಂದ ವಚನಗಾಯನ ನಡೆಸಿದರು. ಶ್ರೀಮತಿ ಮಂಜುಳಾ ಪ್ರಾರ್ಥಿಸಿದರು. ಎಸ್. ದೇವರಾಜು ಸ್ವಾಗತಿಸಿದರು. ಡಿ.ಆರ್. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಮಿಕ್ರಿ ಈಶ್ವರಯ್ಯ ನಿರೂಪಿಸಿ ವಂದಿಸಿದರು. ಗ್ರಂಥದಾನ ಸ್ವೀಕರಿಸಿದ ವಿದ್ಯಾರ್ಥಿಗಳು ತಾವು ಮುಂದೆ ಆದರ್ಶ ವಿದ್ಯಾರ್ಥಿಗಳಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.

Recent Articles

spot_img

Related Stories

Share via
Copy link