ಬಾಗಲಕೋಟೆ:
ಬಾಗಲಕೋಟೆ ಮುನ್ಸಿಪಲ್ ಕೌನ್ಸಿಲ್ ವಾರ್ಡ್ ನಂ.19 ರಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಿಸುತ್ತಿದ್ದ ವಿಡಿಯೋ ಈಗ ವೈರಲ್ ಆಗಿದೆ.ಇಂದು ಹೊರಬಿದ್ದ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ವೀರಪ್ಪ ಸಿರಗಣ್ಣವರ್ ಗೆಲುವು ಸಾಧಿಸಿದರು. ಬಾಗಲಕೋಟೆಯ ನಗರಸಭೆಯ 35 ವಾರ್ಡ್ ಗಳಲ್ಲಿ 29 ರಲ್ಲಿ ಬಿಜೆಪಿ ಗೆಲುವು ಸಾಧಿಸಿ ದಾಖಲೆ ಬರೆದಿದೆ.ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಒಟ್ಟಾರೆ ಫಲಿತಾಂಶದಲ್ಲಿ ಕಾಂಗ್ರೆಸ್ ಮುಂದಿದ್ದರೂ, ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳಲ್ಲಿ ಬಿಜೆಪಿ ಮುನ್ನಡೆ ನಿಚ್ಛಳವಾಗಿದೆ.
ವೈರಲ್ ಆದ ವೀಡಿಯೋದ ಲಿಂಕ್ ಇಲ್ಲಿದೆ: ಕೃಪೆ ಎ ಎನ್ ಐ
#WATCH: Veerappa Siragannavar, BJP candidate from ward No. 19 of Bagalkote municipal council, celebrates his victory in the urban local body polls by removing his shirt. #Karnataka pic.twitter.com/hUl7PnCG6W
— ANI (@ANI) September 3, 2018
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ