ಶವ ಸಂಸ್ಕಾರ ತಿಥಿ ಕಾರ್ಯದ ನಂತರ ವ್ಯಕ್ತಿ ಪ್ರತ್ಯಕ್ಷ..!

ಮಧುಗಿರಿ:

ಮೃತ್ತಪಟ್ಟಿದ್ದಾನೆ ಎಂದು ಭಾವಿಸಿ ಬೇರೊಬ್ಬರ ಶವವನ್ನು ಶವಸಂಸ್ಕಾರ ಮಾಡಿದ್ದ ಕುಟುಂಬದವರಿಗೆ ಆಶ್ಚರ್ಯ ಮತ್ತು ಸಂತೋಷ ಏಕಕಾಲಕ್ಕೆ ಆಗುವಂತೆ ಮನೆಯ ಯಜಮಾನ ನೇರವಾಗಿ ಬಸ್ ಇಳಿದು ತನ್ನ ಮನೆಗೆ ವಾಪಸ್ ಬಂದಿರುವ ಘಟನೆ ವರದಿಯಾಗಿದೆ.

ಕೊಡಿಗೇನಹಳ್ಳಿ ಹೋಬಳಿಯ ಚಿಕ್ಕಮಾಲೂರು ಗ್ರಾಪಂ ಅಧ್ಯಕ್ಷೆ ಪ್ರೇಮಲತಾ ತಂದೆ ನಾಗರಾಜಪ್ಪ (70) ಎಂಬುವವರು ಮಂಗಳವಾರ ಬೆಳಗ್ಗೆ ಬಸ್ ಇಳಿದು ಮನೆಗೆ ಬಂದಾಗ ಕುಟುಂಬಸ್ಥರಿಗೆ ಆಶ್ಚರ್ಯವಾಗಿದೆ.

ಕಳೆದ 3 ತಿಂಗಳ ಹಿಂದೆ ಕುಡಿತಕ್ಕೆ ಬಲಿಯಾಗಿದ್ದ ನಾಗರಾಜಪ್ಪ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲಾಗಿಸಿ, ನಂತರ ಬೇರೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾಗ ಅಲ್ಲಿಂದ ಈತ ಪರಾರಿ ಆಗಿದ್ದಾನೆ ಎನ್ನಲಾಗಿದೆ. ಆದರೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮರಣ ಪ್ರಮಾಣ ಪತ್ರ ಸಹ ನೀಡಿದ್ದಾರೆ.

ನಾಗರಾಜಪ್ಪನ ದ್ವಿತೀಯ ಪುತ್ರಿ ನೇತ್ರಾವತಿ ಎನ್ನುವವರು ತನ್ನ ತಂದೆ ಮರಣ ಹೊಂದಿದ್ದಾರೆಂದು 2021 ರ ಸೆ. 18 ರಂದು ಬೆಂಗಳೂರಿನ ಕೋರಮಂಗಲ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿಂದೆ ನಾಗರಾಜಪ್ಪ 13 ವರ್ಷಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದು, ನಂತರ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎನ್ನಲಾಗುತ್ತಿದೆ.

ನಾಗರಾಜಪ್ಪನಿಗೆ ಹೋಲಿಕೆಯಾಗುವ ಬೇರೊಂದು ಶವವನ್ನು ಸ್ವಗ್ರಾಮಕ್ಕೆ ತಂದು ಹಿಂದೂ ಸಂಪ್ರದಾಯದಂತೆ ಶವ ಸಂಸ್ಕಾರ ಹಾಗೂ ತಿಥಿ ಕಾರ್ಯಗಳನ್ನು ಕುಟುಂಬಸ್ಥರು ಮಾಡಿ ಮುಗಿಸಿದ್ದರು. ಆದರೆ ಈಗ ಮರಳಿ ಮನೆಗೆ ಬಂದಿರುವ ತಂದೆಯನ್ನು ಕಂಡ ಕುಟುಂಬಸ್ಥರು ಬೆರಗಾಗಿದ್ದು, ಮತ್ತೆ ಇವರು ಶವ ಸಂಸ್ಕಾರ ಮಾಡಿದ ವ್ಯಕ್ತಿ ಯಾರು ಎಂಬುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link