ಚಿತ್ರದುರ್ಗ:
ಅಶಾಂತಿ, ಅಸಮಾನತೆ, ಅಸಮತೋಲನಗಳ ಮಧ್ಯೆ ಹೋಯ್ದಾಡುತ್ತಿರುವ ಮನುಷ್ಯ ಶಾಂತಿ ಮತ್ತು ಪ್ರೇಮವನ್ನುಜೀವನದಲ್ಲಿ ಅಳವಡಿಸಿಕೊಂಡಾಗ ಸದೃಢರಾಷ್ಟ್ರ ನಿರ್ಮಾಣ ಮಾಡಬಹುದುಎಂದು ನಿವೃತ್ತ ಪ್ರಾಚಾರ್ಯ ಪ್ರೋ.ಜೆ.ಯಾದವ್‍ರೆಡ್ಡಿಅಭಿಪ್ರಾಯಪಟ್ಟರು.
ನಗರ ಸಮೀಪದಧಮ್ಮಕೇಂದ್ರದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆ, ಅರಳಿ ಸಂವಾದ ಸಂಸ್ಥೆ ಇವರ ವತಿಯಿಂದಏರ್ಪಡಿಸಲಾಗಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದು, ಶಾಂತಿ ಮತ್ತು ಸೌಹಾರ್ದತೆಗಾಗಿ ಹುಡುಕಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಪ್ರತಿಯೊಬ್ಬರು ಪ್ರೀತಿ ಮತ್ತು ಪ್ರೇಮವನ್ನುಜೀವನದಲ್ಲಿ ಅಳವಡಿಸಿಕೊಂಡರೆ ಅಶಾಂತಿಗೆಅವಕಾಶವಿಲ್ಲ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರೀತಿಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕರಾದಆರ್. ವಿಶ್ವಸಾಗರ್‍ರವರು ಮಾತನಾಡಿ, ಯುವ ಬರಹಗಾರರು ಶಾಂತಿ ಮತ್ತು ಸೌಹಾರ್ದತೆಕುರಿತು ಹೆಚ್ಚು ಹೆಚ್ಚು ಕವಿತೆ ಲೇಖನ, ಸಾಹಿತ್ಯಗಳನ್ನು ರಚನೆ ಮಾಡುವುದನ್ನು ರೂಢಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಮಾಡಬಹುದು.
ಯುವ ಬರಹಗಾರರುಕಾಡು, ಬೆಟ್ಟ, ಗುಡ್ಡ ಇವುಗಳನ್ನು ಕುರಿತು ಆಳವಾಗಿ ಅಧ್ಯಯನ ಮಾಡಿ, ಬರವಣಿಗೆಯನ್ನು ರೂಢಿಸಿಕೊಂಡರೆ ಅತ್ಯುತ್ತಮ ಬರಹಗಾರರಾಗಲು ಸಾಧ್ಯವಿದೆಎಂದರು.
ಯುವಜನರ ಮುಂದೆ ಹಲವಾರು ಸವಾಲುಗಳಿದ್ದು, ಮಹಿಳೆಯರ ಸಬಲೀಕರಣ, ಅಸ್ಪಶ್ಯತಾ ನಿವಾರಣೆ, ಬಾಲ್ಯವಿವಾಹ, ವರದಕ್ಷಿಣೆ, ಕುಡಿಯುವ ನೀರಿನ ಸಮಸ್ಯೆ, ಪರಿಸರ ವಿನಾಶ, ಹೀಗೆಯೇ ಹಲವಾರು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಇಂದಿನ ವಿದ್ಯಾರ್ಥಿಯುವಜನರು ಬರಹವನ್ನು ರೂಢಿಸಿಕೊಂಡಾಗ ಮಾತ್ರಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆಯಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ವಿಶ್ವಸಾಗರ್, ಅರಳಿ ಸಂಸ್ಥೆಯ ಹೊಳೆಯಪ್ಪ, ದೀಪಕ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.