ಶಾರದಾ ಚಿಟ್‌ಫಂಡ್‌ ಹಗರಣ : 6 ಕೋಟಿಗೂ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿದ ಇ ಡಿ

ನವದೆಹಲಿ:

ದೇಶದಲ್ಲಿ ಸಂಚನಕ್ಕೆ ಕಾರಣವಾಗಿದ್ದ ಶಾರದಾ ಚಿಟ್‌ಫಂಡ್‌ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖಂಡ ಹಾಗು ಕೇಂದ್ರದ ಮಾಜಿ ವಿತ್ತ ಸಚಿವರೂ ಆದ  ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ಮತ್ತು ಸಿಪಿಎಂ ಮಾಜಿ ಶಾಸಕ ದೇವೇಂದ್ರನಾಥ್ ಬಿಸ್ವಾಸ್ ಸೇರಿದಂತೆ ಇತರರಿಗೆ ಸೇರಿದ ಸುಮಾರು 6 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಶುಕ್ರವಾರ ತಿಳಿಸಿದೆ.

ಸಾವಿರಾರು ಜನರು ತಮ್ಮ ಜೀವಿತಾವಧಿಯ ಗಳಿಕೆಯನ್ನು ಉಳಿಸಿ ಹೂಡಿಕೆ ಮಾಡಿದ್ದ ಸಾವಿರಾರು ಹೂಡಿಕೆದಾರರಿಗೆ ವಂಚಿಸಿದ ಆರೋಪದ ಮೇಲೆ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ 3.30 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 3 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಶಾರದಾ ಗ್ರೂಪ್ 2013ರವರೆಗೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಕಾರ್ಯಾಚರಣೆಯೊಂದಿಗೆ ಚಿಟ್ ಫಂಡ್ ಹಗರಣವನ್ನು ನಡೆಸಿತು. ಈ ಸಮೂಹದ ಕಂಪನಿಯು ಒಟ್ಟುಗೂಡಿಸಿರುವ ಒಟ್ಟು ಹಣದ ಪ್ರಮಾಣವು ಸುಮಾರು 2,459 ಕೋಟಿ ರೂಪಾಯಿಗಳಷ್ಟಿದ್ದು, ಅದರಲ್ಲಿ ಇಲ್ಲಿವರೆಗೆ ಠೇವಣಿದಾರರಿಗೆ ಬಡ್ಡಿ ಮೊತ್ತವನ್ನು ಹೊರತುಪಡಿಸಿ ಸುಮಾರು 1,983 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿಲ್ಲ. ಕೋಲ್ಕತ್ತಾ ಪೊಲೀಸರು ಮತ್ತು ಸಿಬಿಐನ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ 2013 ರಲ್ಲಿ ಶಾರದಾ ಗ್ರೂಪ್ ಆಫ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು

Recent Articles

spot_img

Related Stories

Share via
Copy link
Powered by Social Snap