ಶಾರುಖ್ ಖಾನ್-ಸುಕುಮಾರ್ ಸಿನಿಮಾ ಮಾಡೋ ಸುದ್ದಿ ಶುದ್ಧ ಸುಳ್ಳು

ತೆಲಂಗಾಣ :

     ನಿರ್ದೇಶಕ ಸುಕುಮಾ ರ್ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್  ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವರದಿಗಳು ಕೂಡ ಹರಿದಾಡುತ್ತಾ ಇವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಕೆಲವು ವರದಿಗಳ ಪ್ರಕಾರ ಇದು ಸುಳ್ಳು ಎಂದು ಹೇಳಲಾಗುತ್ತಿದೆ. ಇದಕ್ಕೆ ಸರಿಯಾದ ಸಾಕ್ಷಿಗಳನ್ನು ಒದಗಿಸೋ ಕೆಲಸವನ್ನು ಫ್ಯಾನ್ಸ್ ಮಾಡಿದ್ದಾರೆ. ಆ  ಬಗ್ಗೆ ಈ ಲೇಖನದಲ್ಲಿ ವಿವರ ಇದೆ.

    ಇಷ್ಟಕ್ಕೆ ನಿಂತಿಲ್ಲ. ಸುಕುಮಾರ್ ಅವರು ಸಿನಿಮಾ ವಿಚಾರದ ಚರ್ಚೆಗಾಗಿ ಮುಂಬೈಗೆ ಹಾರಿದ್ದರು ಎಂದೆಲ್ಲ ವರದಿ ಆಗಿದೆ. ಆದರೆ, ಈ ವರದಿಯಲ್ಲಿ ಯಾವುದೇ ಹುರುಳಿಲ್ಲ. ಇತ್ತೀಚೆಗೆ ಸುಕುಮಾರ್ ಅವರು ಮುಂಬೈಗೆ ತೆರಳಿದ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಒಂದೊಮ್ಮೆ ಹೋಗಿದ್ದರೆ ಅಲ್ಲಿನ ಪಾಪರಾಜಿಗಳು ಅವರನ್ನು ಸುತ್ತಿಕೊಳ್ಳುತ್ತಿದ್ದರು.

Recent Articles

spot_img

Related Stories

Share via
Copy link