ಚಿತ್ರದುರ್ಗ;
ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳ ಶಾಲಾ ಕಟ್ಟಡಗಳ ನವೀಕರಣ, ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಆಗ್ರಹಿಸಿದ್ದಾರೆ
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ, ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳ ಸದಸ್ಯರ ಅನುದಾದಡಿ ರಾ.ಹೆ.13 ಕ್ಕೆ ಹೊಂದಿಕೊಂಡಿರುವ ಕಿರುಬನಕಲ್ಲು ಗ್ರಾಮದ ಗ್ರಾಮಠಾಣಾ ನಿವೇಶನದಲ್ಲಿ ಏರ್ಪಡಿಸಲಾಗಿದ್ದ ಚಿತ್ರದುರ್ಗ ತಾಲ್ಲೂಕಿನ ಚೋಳಗಟ್ಟ ಗ್ರಾಮ ಪಂಚಾಯಿತಿಯ ಗ್ರಾಮಸೌಧ ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು
ಉದ್ಯೋಗ ಖಾತರಿ ಯೋಜನೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಈ ಯೋಜನೆ ಜಾರಿಗೆ ಬಂದ ಬಳಿಕ ಗ್ರಾಮೀಣ ಪ್ರದೇಶಗಳ ಕೂಲಿಕಾರ್ಮಿಕರಿಗೆ ಅನುಕೂಲವಾಗಿದೆ. ಜೊತೆಗೆ ಹಳ್ಳಿಗಳಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳೂ ಆಗಿವೆ. ಯೊಜನೆಯಿಂದಾಗಿ ಜನರು ಉದ್ಯೋಗ ಹುಡಿಕೊಂಡು ಬೇರೆ ಕಡೆಗೆ ಹೋಗುವುದೂ ತಪ್ಪಿದೆ ಎಂದರು.
ಈ ಯೋಜನೆಯಡಿಯಲ್ಲಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿವೆ. ಇದರ ಜೊತೆಗೆ ಶಾಲಾ ಕಟ್ಟಡಳ ನಿರ್ಮಾಣ, ನವೀಕರಣ ಮತ್ತು ದುರಸ್ಥಿ ಕಾಮಗಾರಿಗಳಿಗೆ ಸರ್ಕಾರ ಅನುಮತಿ ನೀಡಿದರೆ ಶಾಲೆಗಳು ಇನ್ನಷ್ಟು ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಗ್ರಾಮಗಳು ಅಭೀವೃದ್ದಿಯಾದರೆ ದೇಶದ ಅಭೀವೃದ್ದಿಯಾದಂತೆ ಎಂದು ಗಾಂಧೀಜಿ ಹೇಳಿದ್ದರು ಅದರಂತೆ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ ಯೋಜನೆಗಳು ರಾಜ್ಯ ಮಟ್ಟದಲ್ಲಿಯೇ ಜಾರಿಯಾದರೂ ಅದರ ಅನುಷ್ಠಾನ ಮಾತ್ರ ಗ್ರಾಮಗಳಲ್ಲಿಯೇ ಆಗಬೇಕಿದೆ ಇದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಖ್ಯಮಂತ್ರಿ ಇದ್ದಂತೆ ಎಂದು ತಿಳಿಸಿ, ಕಟ್ಟಡ ನಿರ್ಮಾಣಕ್ಕೆ ಎಲ್ಲರಿಂದಲೂ ಸಹಾ ಅನುದಾನವನ್ನು ಪಡೆಯಿರಿ ನಿಮ್ಮ ಅವಧಿಯಲ್ಲಿಯೇ ಕಟ್ಟಡವನ್ನು ನಿರ್ಮಾಣ ಮಾಡಿ ಎಂದು ಹೇಳಿದರು.
ಜಿ.ಪಂ. ಅಧ್ಯಕ್ಷೆ ಸೌಭಾಗ್ಯಬಸವರಾಜನ್ ಮಾತನಾಡಿ, ಸರ್ಕಾರ ಜನತೆಯ ಸಮಸ್ಯೆಗಳನ್ನು ಪರಿಹಾರ ಮಾಡಲು ಅಧಿಕಾರವನ್ನು ವಿಕೇಂದ್ರೀಕರಣ ಮಾಡಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಎಂದು ನಿರ್ಮಾಣ ಮಾಡಿದ್ದರೂ ಸಹಾ ಜನತೆ ಸಮಸ್ಯೆಗಳನ್ನು ಹೊತ್ತು ಶಾಸಕರು, ಜಿ.ಪಂ ಅಧ್ಯಕ್ಷರು ಜಿಲ್ಲಾಧಿಕಾರಿಗಳು ಬಳಿ ಬರುತ್ತಾರೆ ಎಂದರೆ ಏನು ಅರ್ಥ ಎಂದು ತಿಳಿಸಿ, ಸಮಸ್ಯೆಗಳನ್ನು ನಿಮ್ಮ ಹಂತದಲ್ಲಿಯೇ ಪರಿಹಾರ ಮಾಡುವ ಕಾರ್ಯಕ್ಕೆ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಮುಂದಾಗಬೇಕಿದೆ ಯಾವುದೇ ಕಾರಣಕ್ಕೂ ಸಹಾ ಜನತೆ ಅರ್ಜಿಯನ್ನು ಹಿಡಿದು ಜಿಲ್ಲಾ ಕೇಂದ್ರಕ್ಕೆ ಬಾರದಂತೆ ಎಚ್ಚರವಹಿಸಬೇಕಿದೆ ಎಂದರು.
ಜನತೆಗೆ ಬೇಕಾದ ಸೌಲಭ್ಯಗಳನ್ನು ಎಲ್ಲೂ ಕುಳಿತು ನಿರ್ಮಾಣ ಮಾಡದೇ ಗ್ರಾಮ ಸಭೆಗಳನ್ನು ನಡೆಸುವುದರ ಮೂಲಕ ಜನತೆಯಿಂದ ಬಂದ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ತಕ್ಕ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯವಾಗಬೇಕಿದೆ. ಯಾವುದೇ ಯೋಜನೆಗಳು 4 ಗೋಡೆಯ ಮಧ್ಯದಲ್ಲಿ ರಚನೆಯಾಗದ ಜನತೆಯ ಮಧ್ಯದಲ್ಲಿ ನಿರ್ಮಾಣವಾಗಬೇಕಿದೆ ಈ ಹಿನ್ನಲೆಯಲ್ಲಿ ಗ್ರಾಮ ಸಭೆ ನಡೆದಾಗ ಎಲ್ಲರು ತಪ್ಪದೆ ಹಾಜರಾಗುವುದುರ ಮೂಲಕ ಸರ್ಕಾರದ ಸೌಲಭ್ಯ ಪಡೆಯಬೇಕಿದೆ ಎಂದು ತಿಳಿಸಿ, ಸರ್ಕಾರ ಈ ಹಿಂದೆ ಇದ್ದ ಮೀಸಲಾತಿಯ ಪ್ರಮಾಣವನ್ನು ಶೇ 33 ರಿಂದ ಶೇ 50ಕ್ಕೆ ಹೆಚ್ಚಳ ಮಾಡಿದ್ದರಿಂದ ನಾನು ಸೇರಿದಂತೆ ಹಲವಾರು ಮಹಿಳೆಯರು ವೇದಿಕೆಯನ್ನು ಏರಲು ಸಹಾಯವಾಗಿದೆ ಇದೇ ರೀತಿ ಜನತೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗುವಂತೆ ಕರೆ ನೀಡಿದರು.
ಜಿ.ಪಂ. ಸಿಇಓ ರವೀಂದ್ರ ಮಾತನಾಡಿ, ಕುಟುಂಬಕ್ಕೊಂದು ಮನೆ ಇದ್ದಂತೆ ಪಂಚಾಯಿತಿಗೆ ತನ್ನದೇ ಆದ ಕಚೇರಿ ಅಗತ್ಯ ಇದೆ, ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲು ಕಛೇರಿ ಅಗತ್ಯ ಇದ್ದು ಈ ಪಂಚಾಯಿತಿಯವರು ಅದರ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದು ತಿಳಿಸಿ ಚೋಳಗಟ್ಟ ಗ್ರಾಮ ಪಂಚಾಯಿತಿ ಶೌಚಾಲಯ ನಿರ್ಮಾಣದಲ್ಲಿ ಶೇ.100ಕ್ಕೆ 100 ರಷ್ಟು ಸಾಧನೆಯನ್ನು ಮಾಡಿದೆ ಇದು ಬೇರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆ ರಾಜ್ಯದ ಬೇರೆ ಜಲ್ಲೆಗಳಂತೆ ಅಭೀವೃದ್ದಿಯನ್ನು ಹೊಂದುತ್ತಿದೆ. ಮಳೆ ನಮ್ಮಲ್ಲಿ ಕಡಿಮೆಯಾದರೂ ಸಹಾ ಬೇರೆ ಪ್ರಕೃತಿದತ್ತವಾದ ಗಾಳಿ, ಬೆಳಕು ಹೇರಳವಾಗಿದೆ, ಸ್ಥಳಿಯ ಸಂಪನ್ಮೂಲವನ್ನು ಬಳಕೆ ಮಾಡಿಕೊಂಡು ಪಂಚಾಯಿತಿಗಳು ಅಭೀವೃದ್ದಿಯನ್ನು ಹೊಂದಲು ಮುಂದಾಗಬೇಕಿದೆ ಎಂದು ರವೀಂದ್ರ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ನರಸಿಂಹರಾಜು, ಚೋಳಗಟ್ಟ ಪಂಚಾಯಿತಿ ಮಾಜಿ ಅಧ್ಯಕ್ಷ ಈಶ್ವರಪ್ಪ, ಪgಮಶಿವಯ್ಯ ಮುರುಗೇಂದ್ರಯ್ಯ, ಸೇರಿದಂತೆ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು. ಗ್ರಾಮಪಂಚಾ ಯಿತಿ ಅಧ್ಯಕ್ಷ ಹೆಚ್.ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ರೂಪಕುಮಾರಿ ಸ್ವಾಗತಿಸಿದರು