ಶಾಸಕನ ಬೆಂಬಲಿಗನ ಹತ್ಯೆಗೆ ಸಂಚು ರೂಪಿಸಿದ ಕರ್ನಾಟಕ ಪೊಲೀಸ್‌ ಪೇದೆ ಅರೆಸ್ಟ್…!

ಕೋಲಾರ:

    ಟಿಡಿಪಿ ಶಾಸಕ ಬೆಂಬಲಿಗನ ಕೊಲೆಗೆ ಸ್ಕೆಚ್ ಹಾಕಿದ್ದಕ್ಕೆ, ಕೋಲಾರ ಪೊಲೀಸ್ ಪೇದೆ ವಿನಾಯಕ ಎಂಬಾತನನ್ನು ಆಂಧ್ರಪ್ರದೇಶದ ಗಂಗವರಂ ಪೊಲೀಸರು ಬಂಧಿಸಿದ್ದಾರೆ. ವಿನಾಯಕ ಕೋಲಾರ ಪೊಲೀಸ್ ಠಾಣೆ ಅಪರಾಧ ಕಾನ್ಸ್‌ಟೇಬಲ್‌ ಆಗಿದ್ದು, ಟಿಡಿಪಿ ಶಾಸಕನ ಬೆಂಬಲಿಗನನ್ನು ಕೊಲ್ಲಲು ಸುಪಾರಿ ನೀಡಿದ್ದ ಎನ್ನಲಾಗಿದೆ.

   ಇಚರ್ ವಾಹನದಿಂದ ಅಪಘಾತ ಮಾಡುವಂತೆ ವಿನಾಯಕ ಐಡಿಯಾ ಕೊಟ್ಟಿದ್ದ. ಕೊಲೆಗೆ ಯೋಜನೆ ರೂಪಿಸಿ , ಅಪಘಾತಕ್ಕೆ ವಾಹನವನ್ನು ಸಿದ್ಧಪಡಿಸಿದ್ದ. ಆದರೆ ಅದೃಷ್ಟವಶಾತ್ ಟಿಡಿಪಿ ಕಾರ್ಯಕರ್ತ ಪ್ರಾಣಾಪಾಯದಿಂದ ಪಾರಾಗಿದ್ದರು. ಲಕ್ಕಹಳ್ಳಿ ಶ್ರೀನಿವಾಸ ರೆಡ್ಡಿ ಹಾಗೂ ಪೇದೆ ವಿನಾಯಕ ಸೇರಿ ಟಿಡಿಪಿ ನಾಯಕ ರವಿಚಂದ್ರ ಗುಪ್ತರ ಕಾರಿಗೆ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದರು. ಸದ್ಯ ಸುಪಾರಿ ನೀಡಿದ ವಿನಾಯಕ ವಿರುದ್ಧ ಗಂಗವಾರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap