ಶಿಕ್ಷಕರ ದಿನಾಚರಣೆ

ತುರುವೇಕೆರೆ :

              ಎಷ್ಟೇ ದೊಡ್ಡವರಾದರೂ ತಂದೆ, ತಾಯಿಗಳ ಹಾಗೂ ಶಿಕ್ಷಕರ ಋಣವನ್ನು ತೀರಿಸಲು ಎಂದಿಗೂ ಸಾದ್ಯವಿಲ್ಲ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
              ಪಟ್ಟಣದ ಕೆ.ಹಿರಣಯ್ಯ ಬಯಲು ರಂಗಮಂದಿರದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ, ತಾಲೂಕು ಪಂಚಾಯಿತಿ, ಕ.ರಾ.ಸ.ನೌ.ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಿದ್ಯಾ ಇಲಾಖೆ, ಲಯನ್ಸ್ ಹಾಗು ರೋಟರಿ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಮತ್ತು ಡಾ|| ರಾಧಾಕೃಷ್ಣನ್ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
              ಗುರುಗಳು ಕಲಿಸಿದ ವಿದ್ಯಾಧಾನದಿಂದ ಹಲವಾರು ಗ್ರಾಮೀಣ ಬಡ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ನಾನು ಸಹ ನನಗೆ ವಿದ್ಯೆ ಕಲಿಸಿದ ಗುರುಗಳನ್ನು ಮರೆಯಲು ಸಾದ್ಯವಿಲ್ಲ. ಇಂದು ಸರ್ಕಾರಗಳು ಗುಣ ಮಟ್ಟದ ಶಿಕ್ಷಣ ನೀಡುತ್ತಿದ್ದು ಶಿಕ್ಷಕರುಗಳು ಮಕ್ಕಳನ್ನು ತಿದ್ದಿ ತೀಡಿ ಸಮಾಜಕ್ಕೆ ಆದರ್ಶರಾಗಿ ರಾಷ್ಟ ಕಟ್ಟುವಂತ ವಿದ್ಯಾರ್ಥಿಗಳನ್ನು ಸೃಷಿಸಿ ಎಂದು ಸಲಹೆ ನೀಡಿದರಲ್ಲದೆ ಶಿಕ್ಷಕರ ಕಷ್ಟ ಸುಖಗಳಿಗೆ ಸದಾ ನಿಮ್ಮೊಂದಿಗೆ ಭಾಗಿಯಾಗುತ್ತೇನೆ ಎಂದು ತಿಳಿಸಿದರು.
              ಬದರಿಕಾಶ್ರಮದ ಶ್ರೀ ಓಂಕಾರಾನಂದಾಜೀ ಸ್ವಾಮೀಜಿ ಮಾತನಾಡಿ ನಾಡಿನ ಆಸ್ತಿ ಮಕ್ಕಳು, ಭವ್ಯ ಭಾರತ ನಿರ್ಮಾಣವಾಗಬೇಕೆಂದರೆ ಅದು ಶಿಕ್ಷಕರಿಂದ ಮಾತ್ರ ಸಾದ್ಯ. ಪ್ರತಿಯೊಂದು ಮಗುವನ್ನೂ ತನ್ನ ಮಕ್ಕಳಂತೆ ಕಂಡು ಸದೃಢ ರಾಷ್ಟ್ರ ನಿರ್ಮಿಸುವಂತೆ ಶಿಕ್ಷಕರಿಗೆ ಕರೆ ನೀಡಿದರು.
                 ಬಿಇಓ ಎಸ್.ಸಿ.ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಿನಾಚರಣೆ ಅಂಗವಾಗಿ ನಿವೃತ್ತ ಶಿಕ್ಷಕರು ಹಾಗು ಉತ್ತಮ ಶಿಕ್ಷಕರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಮತ್ತು ಸಾಂಸ್ಕøತಿಕ ಹಾಗು ಕ್ರೀಡೆಯಲ್ಲಿ ವಿಜೇತರಾದ ಶಿಕ್ಷಕರುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಇದಕ್ಕೂ ಮುನ್ನಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಡಾ.ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ವಿವಿದ ಕಲಾ ಪ್ರಕಾರಗಳೊಂದಿಗೆ ಗಣ್ಯರು ಹಾಗು ನೂರಾರು ಶಿಕ್ಷಕರೊಡಗೂಡಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
                 ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನರವಿಕುಮಾರ್, ಉಪಾದ್ಯಕ್ಷೆ ಹೇಮಾವತಿ ಶಿವಾನಂದ್, ಜಿಲ್ಲಾಪಂಚಾಯ್ತಿ ಸದಸ್ಯೆ ರೇಣುಕಾ ಕೃಷ್ಣಮೂರ್ತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹಬಾಬು, ತಾಪಂ ಸದಸ್ಯರುಗಳಾದ ನಂಜೇಗೌಡ, ಸಿ.ವಿ.ಮಹಾಲಿಂಗಪ್ಪ, ಬೈರಪ್ಪ, ಮಂಜುನಾಥ್, ಸ್ವಾಮಿ, ಎಪಿಎಂಸಿ ವಿ.ಟಿ.ವಂಕಟರಾಮಯ್ಯ, ಮುಖಂಡರುಗಳಾದ ಕೊಂಡಜ್ಜಿವಿಶ್ವನಾಥ್, ಎನ್.ಆರ್.ಜಯರಾಮ್, ಕಡೇಹಳ್ಳಿಸಿದ್ದೇಗೌಡ, ಬುಗಡನಹಳ್ಳಿ ಕೃಷ್ಣಮೂರ್ತಿ, ಶಂಕರೇಗೌಡ, ಕಾಳಂಜಿಹಳ್ಳಿ ಸೋಮಶೇಖರ್, ರಾಮಚಂದ್ರಯ್ಯ, ತಹಶೀಲ್ದಾರ್ ಜೆ.ಎಚ್.ನಾಗರಾಜು, ಇ.ಒ.ಗಂಗಾಧರ್, ದೈಹಿಕ ಶಿಕ್ಷಣಾಧಿಕಾರಿ ಚಿದಾನಂದ್, ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ನಾಗರಾಜು, ಕ.ರಾ.ಪ್ರಾ.ಶಾ.ಶಿ.ಸಂಘ ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಮಂಜಣ್ಣ, ಕಾರ್ಯಾದ್ಯಕ್ಷ ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ಸಾ,ಶಿ.ದೇವರಾಜು, ಬಿಆರ್‍ಸಿ ಉಮೇಶ್ ಗೌಡ, ವಸಂತ್ ಕುಮಾರ್, ಚಂದ್ರಯ್ಯ, ಬಸವರಾಜು ಸೇರಿದಂತೆ ಅನೇಕ ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಶಾಸಕ ಮಸಾಲಾ ಜಯರಾಂ ರವರಿಂದ ಭರ್ಜರಿ ಬೋಜನ ವ್ಯವಸ್ಥೆ ಆಯೋಜಿಸಲಾಗಿತ್ತು.

Recent Articles

spot_img

Related Stories

Share via
Copy link