ಹಿರಿಯೂರು:
ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ಗೌರವ ಸಲ್ಲಿಸುವುದು, ಉಡುಗೊರೆ ನೀಡುವುದು, ಆಟೋಟ ಸ್ಪರ್ಧೆಗಳನ್ನು ಬಹುಮಾನ ವಿತರಿಸಿ ಶಿಕ್ಷಕರನ್ನು ರಂಜಿಸಿ ಗೌರವಿಸುವುದು ವಾಡಿಕೆ.
ಆದರೆ ಪೂರ್ಣಪ್ರಜ್ಞಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಮಕ್ಕಳು ಗಿಡ, ಮರ, ಪ್ರಾಣಿ, ಪಕ್ಷಿಗಳ ಪೋಷಕನೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಪರಿಸರ ಸಂಬಂಧ ಘೋಷ ವಾಕ್ಯಗಳನ್ನು ಹೇಳುತ್ತಾ ಜನರಿಗೆ ಪರಿಸರ ಶಿಕ್ಷಣ ನೀಡುವ ಪ್ರಯತ್ನ ಮಾಡಲಾಯಿತು.
ಮೆರವಣಿಗೆಯ ಜೊತೆ-ಜೊತೆಗೆ ಹಿಂದಿನ ದಿನವೇ ಗುರುತಿಸಲಾದ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಯಿತು. ಚಿಕ್ಕಮಕ್ಕಳು ಸಾರ್ವಜನಿಕರ ಸಹಕಾರದೊಂದಿಗೆ 100 ಸಸಿಗಳನ್ನು ನೆಹರು ಮೈದಾನದ ಹಿಂದಿನ ಬೀದಿ ಚರ್ಚ್ ರಸ್ತೆ ಪುಷ್ಪಾಂಜಲಿ ಟಾಕೀಸ್ ರಸ್ತೆಯಲ್ಲಿ ಸಸಿಗಳನ್ನು ನೆಟ್ಟು ಅಂತಿಮವಾಗಿ ಕುವೆಂಪು ನಗರದ ಪಾರ್ಕ್ನಲ್ಲಿ ಸಭೆ ನಡೆಸÀಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಹೆಚ್.ಟಿ.ಚಂದ್ರಶೇಖರÀಯ್ಯ ಮಾತನಾಡಿ, ನಾಗರೀಕರಣ, ಕೈಗಾರೀಕರಣದಿಂದ ಅರಣ್ಯ ನಾಶವಾಗಿದ್ದು ಮರಗಳ ನಾಶದಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಆದ್ದರಿಂದ ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸುವತ್ತ ಗಮನ ನೀಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜೆ.ಜೆ.ಹಳ್ಳಿ ಇತಿಹಾಸ ಉಪನ್ಯಾಸಕರಾದ ಹೆಚ್.ರೇವಣಸಿದ್ದಪ್ಪ ಸೇರಿದಂತೆ ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು.