ಶಿಕ್ಷಕಿ ಕತ್ತು ಸೀಳಿ ಬರ್ಬರ ಹತ್ಯೆ : 6 ಬಾಲಕರು ಅರೆಸ್ಟ್…!

ಕೋಲಾರ

    ಶಿಕ್ಷಕಿಯನ್ನು ಕತ್ತು ಸೀಳಿ ಬರ್ಬರ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ವೊಂದು ಸಿಕ್ಕಿದ್ದು, ಮುಳಬಾಗಿಲು ಮೂಲದ ಆರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಆಗಸ್ಟ್ 14 ರಂದು ಸಂಜೆ ಶಿಕ್ಷಕಿ ದಿವ್ಯಶ್ರೀ (43) ಎಂಬುವವರನ್ನು ಮುಳಬಾಗಿಲು ನಗರದ ಸುಂಕೂ ಲೇಔಟ್ ನಲ್ಲಿ ಕೊಲೆ ಮಾಡಲಾಗಿತ್ತು.

   ಈ ಪ್ರಕರಣದ ಜಾಡು ಹಿಡಿದ ನಗರ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಬಲೆ ಬೀಸಿದ್ದರು.ಅದರಂತೆಯೇ ಇಂದು ತಿರುಪತಿಯಲ್ಲಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆರು ಜನ ಹಂತಕರಲ್ಲಿ ಬಹುತೇಕ ಅಪ್ರಾಪ್ತರು ಎಂಬ ಮಾಹಿತಿ ದೊರಕಿದೆ.

   ಸದ್ಯ ವಿಚಾರಣೆ ವೇಳೆ ಜಮೀನು ವ್ಯಾಜ್ಯ, ದ್ವೇಷದಿಂದ ಶಿಕ್ಷಕಿ ದಿವ್ಯಶ್ರಿ ಕೊಲೆಗೆ ಸುಫಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಸುಫಾರಿ ನೀಡಿದ ಪ್ರಮುಖ ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link