ಶಿಕ್ಷಕ ಆತ್ಮವಂಚಕನಾಗಬಾರದು – ಎನ್.ನಾಗಪ್ಪ

ತುಮಕೂರು:

             ಶಿಕ್ಷಕರ ದಿನಾಚರಣೆಯ ದಿನ ಶಿಕ್ಷಕರುಗಳ ಬಗ್ಗೆ ಮಾತನಾಡುತ್ತಾ ಶಿಕ್ಷಕರುಗಳು ಅಕ್ಷರ ಜ್ಞಾನ ಕಲಿಸುವಂತಹವರು. ಈ ಅಕ್ಷರ ಜ್ಞಾನದ ಜೊತೆ ಅರಿವಿನ ಜ್ಞಾನವನ್ನು ಕಲಿಸಬೇಕು. ಕಲಿಸುವಾಗ ಶಿಕ್ಷಕರು ಆತ್ಮವಂಚಕರಾಗಿರಬಾರದು ಎಂದು ವಾಸವಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಸಾಹಿತಿ ಎನ್.ನಾಗಪ್ಪ ಹೇಳಿದರು.
             ಅವರು ತುಮಕೂರಿನ ಎಸ್.ಐಟಿ ಮುಖ್ಯರಸ್ತೆಯಲ್ಲಿರುವ ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಈ ಸಂಸ್ಥೆಯ ಎಲ್ಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸಂಬ್ರಮ ಸಡಗರದಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ್ದನ್ನು ನಾಗಪ್ಪ ಪ್ರಶಂಸಿಸಿದರು.
             ಶಿಕ್ಷಕರು ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳಬೇಕು. ತನ್ನನ್ನು ತಾನೇ ವಿಮರ್ಶಿಸಿಕೊಳ್ಳುವಂತಾಗಬೇಕು. ಕಾರಣ ತನ್ನ ಪ್ರಶ್ನೆಗೆ ತನ್ನಲ್ಲೇ ಉತ್ತರ ಸಿಗುತ್ತದೆ. ನಾನು ಶಿಕ್ಷಕನಾಗುವುದಕ್ಕೆ ಅರ್ಹನಾ ಎಂದುಕೊಂಡರೆ ಉತ್ತರ ಸಿಗುತ್ತದೆ. ಮಾತೃ ಹೃದಯದ ಶಿಕ್ಷಕರುಗಳಾಗಬೇಕು. ಎಲ್ಲಾ ವರ್ಗದ ಎಲ್ಲಾ ಜಾತಿಯ ವಿದ್ಯಾರ್ಥಿಗಳನ್ನು ಸಮಾನದೃಷ್ಟಿಯಿಂದ ಕಾಣುವಂತಾಗಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳು ಪ್ರಶ್ನಿಸುವಂತಾಗಬೇಕು. ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವವನ್ನು ರೂಢಿಸಿಕೊಳ್ಳುವಂತೆ ಶಿಕ್ಷಕರು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಕರು ಒಳ್ಳೆಯ ಪುಸ್ತಕಗಳನ್ನು ತಾವೇ ಕೊಟ್ಟು ಓದುವ ಹವ್ಯಾಸವನ್ನು ಬೆಳೆಸಬೇಕು. ಶಿಕ್ಷಕ ಎಂದಾಕ್ಷಣ ನಾಲ್ಕು ಗೋಡೆಗಳ ಒಳಗಡೆ ಪಾಠ ಮಾಡುವುದಷ್ಟೇ ಆಗಬಾರದು. ಅದರಾಚೆಗೆ ವಿದ್ಯಾರ್ಥಿ ಬದುಕಿಗೆ ಜೀವನ ಹಾದಿಯನ್ನು ತೋರುವುದರ ಜೊತೆಗೆ ಮನುಷ್ಯ ಸಂಬಂಧದ ನೆಲೆ ವಿದ್ಯಾರ್ತಿಗಳ ಜೊತೆ ಶಿಕ್ಷಕ ಮನಸ್ಸು ಕಟ್ಟುವಂತಹ ಕೆಲಸವನ್ನು ಮಾಡಬೇಕು. ಕೇವಲ ಸಂಬಳ, ಮನೆ, ಮಠ, ಚೀಟಿ ವ್ಯವಹಾರ, ಬಡ್ಡಿ ವ್ಯವಹಾರ ಬಣ್ಣ, ಬಣ್ಣ ಬಟ್ಟೆಗಳನ್ನು ಮಿಗಿಲಾಗಿ ಬಂಗಾರದ ಒಡವೆಗಳಷ್ಟೇ ಶಿಕ್ಷಕರಿಗೆ ಮುಖ್ಯವಾಗದೆ. ಪುಸ್ತಕಗಳನ್ನು ಕೊಂಡು ಓದುವಂತಾಗಬೇಕು. ಪುಸ್ತಕವೇ ಶಿಕ್ಷಕನಿಗೆ ಆಸ್ತಿಯಾಗಬೇಕು ಎಂದು ಹೇಳಿದರು.
             ಮುಖ್ಯ ಅತಿಥಿಗಳಾಗಿದ್ದ ಹೈಸ್ಕೂಲ್ ಶಿಕ್ಷಕಿ ಕೆ.ಟಿ. ರಾಧ ಮಾತನಾಡಿ, ರಾಧಕೃಷ್ಣನ್ ಅವರ ಹುಟ್ಟು ವ್ಯಾಸಂಗ ಮಾಡಿದ್ದು ಶಿಕ್ಷಕ ವೃತ್ತಿಗೆ ಸೇರಿದ್ದು ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
               ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಾರದ ಪಿ.ಕೆ. ಇಂಗ್ಲೀಷಿನಲ್ಲಿ ತುಂಬಾ ಸೊಗಸಾಗಿ ರಾಧಾಕೃಷ್ಣನ್ ಅವರ ಜೀವನ ಚರಿತ್ರೆಯನ್ನು ಮತ್ತು ಶಿಕ್ಷಕರ ಜವಾಬ್ದಾರಿಯನ್ನು ತೆರೆದಿಟ್ಟರು. ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಸುಂದರಪ್ಪ ಜೈನ್ ವಹಿಸಿದ್ದರು. ವೇದಿಕೆಯಲ್ಲಿ ಬಿ.ಆರ್. ಸೋಮಶೇಖರ, ಉದ್ಭವ ಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
ಇದೇ ವೇಳೆ ವಿದ್ಯಾರ್ಥಿಗಳು ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ಶಿಕ್ಷಕರುಗಳಿಗೆ ತಾನೇ ತಂದಂತಹ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳ ಪರವಾಗಿ ಚಂದನಾ. ಎಂ ಚನ್ನಾಗಿ ಮಾತನಾಡಿದಳು. ಚಿನ್ಮಯಿ ಪ್ರಾರ್ಥಿಸಿ, ತೇಜಶ್ರೀ ಸ್ವಾಗತಿಸಿದರು. ಪ್ರಸನ್ನ ವಂದಿಸಿದರು. ಧನುಶ್ರೀ ನಿರೂಪಿಸಿದರು.

Recent Articles

spot_img

Related Stories

Share via
Copy link
Powered by Social Snap