ಶಿಕ್ಷಕ ವೃತ್ತಿಗೆ ಮಾತೃಸ್ಥಾನ: ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ತುಮಕೂರು:

            ಶಿಕ್ಷಕವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಶ್ರೇಷ್ಠ. ಅದು ಮಾತೃಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹಿರೇಮಠದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
            ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ತಮ್ಮ ವೃತ್ತಿಯ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವ ಹೊಣೆ ಶಿಕ್ಷಕರ ಮೇಲಿದೆ ಎಂದರು.
             ಭಾರತದ ಶ್ರೇಷ್ಠ ಗುರುಪರಂಪರೆಯುಳ್ಳ ದೇಶ. ಪ್ರತಿಯೊಂದು ವೃತ್ತಿಯೂ ತನ್ನ ಬದ್ಧತೆಯನ್ನು ಸಾಬೀತುಪಡಿಸಿಕೊಳ್ಳಬೇಕಿರುವ ಇಂದಿನ ದಿನಗಳಲ್ಲಿ ಶಿಕ್ಷಕರೂ ತಮ್ಮ ಬದ್ಧತೆಯನ್ನು ಸಾಬೀತುಪಡಿಸಿಕೊಳ್ಳಬೇಕಿದೆ ಎಂದರು.
              ವಿಶ್ವವಿದ್ಯಾನಿಲಯಗಳು ಜ್ಞಾನದ ವಿಶ್ವಕೋಶಗಳು. ಅಲ್ಲಿನ ಅಧ್ಯಾಪಕರು ಜ್ಞಾನಕೋಶಗಳಾಗಿ ಬದಲಾಗಬೇಕು ಎಂದರು.
              ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಮಾತನಾಡಿ, ಶಿಕ್ಷಣದಿಂದ ಸಂಸ್ಕøತಿಯೂ ಸಂಸ್ಕøತಿಯಿಂದ ಶಿಕ್ಷಣವೂ ಪ್ರಭಾವಿಸಲ್ಪಡುತ್ತದೆ. ಶಿಕ್ಷಕ ಸಮಾಜದ ಬೆನ್ನೆಲುಬು ಎಂದರು.
              ಇಂದು ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಪ್ರತೀ ಊರಿನಲ್ಲೂ ರಾಧಾಕೃಷ್ಣನ್, ಅಬ್ದುಲ್ ಕಲಾಂ ಅಂತಹ ಶ್ರೇಷ್ಠ ವ್ಯಕ್ತಿತ್ವಗಳು ರೂಪುಗೊಳ್ಳಬೇಕು ಎಂದರು.
ತುಮಕೂರು ವಿವಿ ಕುಲಸಚಿವ ಪ್ರೊ. ಟಿ. ವಿ. ವೆಂಕಟೇಶ್ ಈ ಸಂದರ್ಭ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link