ಶಿವಕುಮಾರ ರಾಜ್ಯಕ್ಕೆ ಮೂರನೇ ಸ್ಥಾನ

ಹರಪನಹಳ್ಳಿ:

      ಪಟ್ಟಣದ ಎಸ್.ಯು.ಜೆ.ಎಂ. ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಬಾರಿಕರ ಶಿವಕುಮಾರ ಕಲಾವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಗಳಿಸಿದ್ದಾನೆ.

      ಶಿವಕುಮಾರ ಕಲಾ ವಿಭಾಗದಲ್ಲಿ ರಾಜ್ಯದ ಮೂವರು ವಿದ್ಯಾರ್ಥಿಗಳ ಜತೆ ಮೂರನೇ ಸ್ಥಾನ ಹಂಚಿಕೊಂಡಿದ್ದಾನೆ. ಕೊಟ್ಟೂರಿನ ಕೆ.ಜಿ.ಸಚಿನ್ ಹಾಗೂ ಎಚ್.ಸುರೇಶ್ ಇವರಷ್ಟೇ ಅಂಕ ಶಿವಕುಮಾರ ಪಡೆದುಕೊಂಡಿದ್ದಾನೆ.

      ಈ ವಿದ್ಯಾರ್ಥಿ ಕನ್ನಡ -96, ಸಂಸ್ಕೃತ -100, ಐಚ್ಛಿಕ ಕನ್ನಡ-97, ಇತಿಹಾಸ-97, ರಾಜ್ಯಶಾಸ್ತ್ರ-99, ಶಿಕ್ಷಣ ಶಾಸ್ತ್ರ-100 ಒಟ್ಟು 589 ಅಂಕಗಳೊಂದಿಗೆ ಶೇ.98.66 ಅಂಕಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾನೆ. ಎಜುಕೇಷನ್ ಹಾಗೂ ಸಂಸ್ಕೃತದಲ್ಲಿ ನೂರಕ್ಕೆ ಅಂಕ ಪಡೆದಿದ್ದಾನೆ.

      ವಿದ್ಯಾರ್ಥಿ ಶಿವಕುಮಾರ ಸಾಧನೆ ಕಾಲೇಜಿಗೆ ಕೀರ್ತೀ ತಂದಿದೆ. ಬಡ ಕುಟುಂಬದ ವಿದ್ಯಾರ್ಥಿ ಇಡೀ ರಾಜ್ಯದ ಗಮನ ಸೆಳೆದಿದ್ದಾನೆ. ನಮ್ಮ ಸಂಸ್ಥೆಯ ಕಾರ್ಯದರ್ಶಿ, ಬೋಧಕ ಸಿಬ್ಬಂದಿ ಅವರ ಪರಿಶ್ರಮ ಸಾರ್ಥಕವಾಗಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಎಸ್.ಯು.ಜೆ.ಎಂ. ಕಾಲೇಜಿನ ಪ್ರಾಚಾರ್ಯ ಎಲ್ .ಕೃಷ್ಣಸಿಂಗ್ ಅವರು.ಫಲಿತಾಂಶ ಸಂತಸ ತಂದಿದೆ. ಕಷ್ಟ ಪಟ್ಟು ಓದಿದ್ದಕ್ಕೆ ಫಲ ಸಿಕ್ಕಿದೆ, ಕಾಲೇಜಿನ ಉಪನ್ಯಾಸಕರು ಉತ್ತಮ ರೀತಿಯಲ್ಲಿ ಬೋಧಿಸುತ್ತಿದ್ದರು. ತಂದೆ-ತಾಯಿ, ಮಾವನವರ ಸಹಕಾರ ಬಹಳಷ್ಟಿದೆ’ ಎನ್ನುತ್ತಾರೆ ವಿದ್ಯಾರ್ಥಿ ಬಾರಿಕರ ಶಿವಕುಮಾರ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap