ಚಿತ್ರದುರ್ಗ :
ಯಾವುದೇ ಸಾಹಿತ್ಯ ಕೃತಿಗಳು ಜನರಿಗೆ ಸರಳವಾದ ಭಾಷೆಯಲ್ಲಿ ಲಬ್ಯವಾಗಬೇಕು. ಸಾಮಾನ್ಯ ಒದುಗರೂ ಸಾಹಿತ್ಯ ಅರ್ಥೈಸಿಕೊಳ್ಳುವಂತಿರಬೇಕು ಎಂದು ಡಾ.ಉಮಾ ಆರ್.ಹೆಗಡೆ ಅಭಿಪ್ರಾಯ ಪಟ್ಟರು ನಗರದ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ ಆಯೋಜಿಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಏಕ್ ವಿಸ್ಮಯ್ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು
ಮುರುಘಾ ಶರಣರು ವ್ಯಕ್ತಿ ಅಲ್ಲ ಅವರೊಂದು ಶಕ್ತಿ. ನಮ್ಮಲ್ಲಿ ದೊಡ್ಡ ದೊಡ್ಡ ಮಠಗಳಿವೆ. ಆದರೆ ಸಾಹಿತ್ಯ ಕೃಷಿ ಮಾಡುವವರ ಸಂಖ್ಯೆ ಬಹಳ ಕಡಿಮೆ. ಆದರೆ ಶರಣರು ಇಷ್ಟೊಂದು ಪುಸ್ತಕಗಳನ್ನು ಬರೆದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಶ್ರೀಗಳವರ ಈ ಕೃತಿ ರಾಜ್ಯ ಭಾಷೆಯಿಂದ ಕೇಂದ್ರದ ಭಾಷೆಗೆ ಸಂಪರ್ಕ ಬೆಳೆಸಿದೆ. ಭಾರತದಾದ್ಯಂತ ಅವರ ಕೀರ್ತಿ ಬೆಳಗಲು ಸಹಾಯವಾಗುತ್ತದೆ ಎಂದರು
ಹೊರರಾಷ್ಟ್ರಗಳಲ್ಲಿ ಹಿಂದಿ ಕಲಿಯುತ್ತಿದ್ದಾರೆ. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಪದವಿಗೆ ಬಹಳ ಕಡಿಮೆ ಜನ ಪ್ರವೇಶ ಪಡೆಯುತ್ತಿದ್ದಾರೆ. ಆದರೆ ಜಕ್ ರಾಷ್ಟ್ರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಿಂದಿ ಕಲಿಯಲು ಪ್ರವೇಶ ಪಡೆಯುತ್ತಿದ್ದಾರೆ.
ಇತರೆ ಭಾಷೆಗಳನ್ನು ಉಳಿಸಿ ಬೆಳೆಸುವುದು ಪ್ರಯಾಸದಾಯಕವಾದುದು. ಶ್ರೀಗಳ ಪುಸ್ತಕಗಳು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಹೊರರಾಷ್ಟ್ರಗಳಲ್ಲಿ ಅವರ ವ್ಯಕ್ತಿತ್ವ ಪರಿಚಯವಾಗಬೇಕು. ಸರಳ ಭಾಷೆಯಲ್ಲಿ ಜನರಿಗೆ ಕೃತಿಗಳನ್ನು ತಲುಪಿಸಬೇಕು. ಶ್ರೀಗಳಲ್ಲಿ ಕವಿ ಹೃದಯವೂ ಇರುವುದು ಸಂತೋಷದ ವಿಷಯ ಎಂದರು.
ಡಾ.ಶಿವಮೂರ್ತಿ ಮುರುಘಾಶರಣರು ಮಾತನಾಡಿ, ಭಾಷೆಯನ್ನು ಕಲಿಯಬೇಕು. ಅದೊಂದು ಪರಿಣಾಮಕಾರಿ ಮಾಧ್ಯಮ. ಭಾಷೆಯನ್ನು ಕಲಿತಷ್ಟು ಜ್ಞಾನವು ವೃದ್ಧಿಯಾಗುತ್ತದೆ ಎಂದು ಎಂದರು ಭಾಷೆ ಕಲಿಯುವುದರಿಂದ ಅನೇಕ ರೀತಿಯ ಲಾಭಗಳು ಇವೆ. ಭಾವನೆಗಳನ್ನು ಅಭಿವ್ಯಕ್ತಿ ಮೂಲಕ ಹಂಚಿಕೊಳ್ಳಬಹುದು. ಭಾಷೆಯ ಅಭಿವ್ಯಕ್ತಿಯಿಂದ ಪ್ರಭಾವವನ್ನು ಬೀರುತ್ತಾರೆ. ಅನೇಕ ಜನರ ಜೊತೆ ಮಾತನಾಡುವುದು ಸಂಭಾಷಣೆ. ಇದು ಗಟ್ಟಿ ನೆಲೆಯನ್ನು ಕಂಡುಕೊಳ್ಳಬೇಕು. ವಿಚಾರಗಳನ್ನು ವ್ಯಕ್ತಪಡಿಸಬೇಕು ಎಂದು ಶರಣರು ನುಡಿದರು.
ನಾವು ಭಾಷಾ ಪ್ರೇಮಿಗಳಾಗಬೇಕು. ಬ್ರಿಟೀಷರು ಭಾರತಕ್ಕೆ ಬಂದು ಭಾಷೆ ಕಲಿತು ದೊಡ್ಡ ಗ್ರಂಥಗಳನ್ನು ರಚಿಸಿದ್ದಾರೆ. ನಾವು ಅವರಿಂದ ಭಾಷೆಯನ್ನು ಕಲಿತಿರುತ್ತೇವೆ. ನಮ್ಮಿಂದ ಅವರು, ಅವರಿಂದ ನಾವು ಪ್ರಭಾವಿತರಾಗಿದ್ದೇವೆ. ಬೇರೆ ಭಾಷಿಕರ ಜೊತೆ ಸಂವಹನ ಮಾಡಲು ಭಾಷೆ ಕಲಿಕೆ ಅತ್ಯಗತ್ಯ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷೆಗಳನ್ನು ಕಲಿಯಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ.ಸಿ. ಬಸವರಾಜಪ್ಪ, ಸೆಪ್ಟೆಂಬರ್ 14ನ್ನು ಭಾರತದಲ್ಲಿ ಹಿಂದಿ ದಿವಸ್ ಆಗಿ ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಪುಸ್ತಕ ಬಿಡುಗಡೆ ಮಾಡುವುದರೊಂದಿಗೆ ವಿಶಿಷ್ಟವಾಗಿ ಆಚರಿಸಬೇಕೆಂಬುದು ನಮ್ಮ ಅಭಿಲಾಷೆಯಾಗಿತ್ತು ಎಂದರು.
ಕೃತಿಯ ಹಿಂದಿ ಅನುವಾದಕ ಡಾ. ಸಂಗಮೇಶ ಬಿ. ನಾನನ್ನವರ ಮಾತನಾಡಿದರು. ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೌರಮ್ಮ, ಶ್ರೀಮತಿ ಗಾಯತ್ರಿ ಶಿವರಾಂ, ಸಿದ್ದಪ್ಪ ಹೊಸದುರ್ಗ, ಜಿತೇಂದ್ರ, ಪ್ರೊ. ಶಿವಕುಮಾರ್, ಶ್ರೀಮತಿ ಪಿ.ಸಿ. ಗಾಯತ್ರಿ, ಪ್ರೊ. ರಜಪೂತ್ ಮುಂತಾದವರಿದ್ದರು.
ಶ್ರೀಮತಿ ಹರ್ಷಿಣಿ ಪ್ರಾರ್ಥಿಸಿದರು. ಆಯಿಷಾ ಸ್ವಾಗತಿಸಿದರು. ಕೈರುನ್ನೀಸಾ ನಿರೂಪಿಸಿದರು. ಹೀನಾ ಕೌಸರ್ ವಂದಿಸಿದರು.
