ಶಿವಮೊಗ್ಗ
ಇತ್ತೀಚಿಗಷ್ಟೆ ಶಿವಮೊಗ್ಗ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ್ದ ಅನುಭವವಾಗಿತ್ತು.ಇದೀಗ ಮತ್ತೆ ಅದೇ ಅನುಭವವಾಗಿದ್ದು, ವಾರಾಹಿ ಯೋಜನಾ ಪ್ರದೇಶದ ವ್ಯಾಪ್ತಿಯ ಯಡೂರು ಗ್ರಾಮದಲ್ಲಿ ಮತ್ತೆ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ.
ಇಂದು ಮಧ್ಯಾಹ್ನ 12.20 ರ ಸುಮಾರಿಗೆ ಲಘು ಭೂಕಂಪದ ಶಬ್ದ ಕೇಳಿ ಬಂದಿದೆ. ಯಡೂರಿನ ಶಿವಕುಮಾರ್ ಜೋಯ್ಸ್‍ಎಂಬುವರ ಮನೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಶಿವಕುಮಾರ್ ಜೋಯ್ಸ್‍ಅವರ ಪುತ್ರಿ ಓದುತ್ತಾ ಕುಳಿತಿದ್ದಾಗ ಟೇಬಲ್ ಒಂದು ಸೆಕೆಂಡ್ ಅಲುಗಾಡಿದ ಹಾಗಾಗಿ ಬಳಿಕ ಇಡೀ ಮನೆಯೇಅಲುಗಾಡಿದ ಅನುಭವವಾಗಿದೆ. ಇದಕ್ಕೂ ಮೊದಲು ಡ್ಯಾಂ ಭಾಗದಿಂದ ಒಂದು ರೀತಿಯ ಶಬ್ದ ಕೇಳಿ ಬಂತು ಎಂದು ಜೋಯ್ಸ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








