ಶಿಸ್ತು ಬದ್ದ ಬದುಕಿಗೆ ಸಾಹಿತ್ಯ ಅತ್ಯಗತ್ಯ: ಡಾ||ಬಿ.ರಾಜಶೇಖರಪ್ಪ.

ಹಿರಿಯೂರು :
              ತಾಲ್ಲೂಕಿನಲ್ಲಿ ಪುರಾತನ ಕಾಲದ ಅನೇಕ ಶಾಸನಗಳು ಪತ್ತೆಯಾಗಿವೆ. ಬಬ್ಬೂರಿನ ರಂಗನಾಥಸ್ವಾಮಿ ದೇವಾಲಯ ರಾಜರ ಆಳ್ವಿಕೆಯ ಕಾಲದಲ್ಲಿ ಕಟ್ಟಿಸಿದ್ದಾರೆ. ಇತಿಹಾಸ ಪುರಾಣ ತಿಳಿಯಲು ಸಾಹಿತ್ಯ ಬಹಳ ಮುಖ್ಯಾ ಮಾನವ ಶಿಸ್ತು ಬದ್ದ ಜೀವನ ನಡೆಸಲು ಸಂಸ್ಕಾರ, ಸಂಸ್ಕøತಿ, ಸಧೃಡವಾದ ಮನಸ್ಸು ಪಡೆಯಲು ಸಾಹಿತ್ಯ ಅತ್ಯಗತ್ಯ ಎಂಬುದಾಗಿ ಖ್ಯಾತ ಸಂಶೋಧಕರಾದ ಡಾ||ಬಿ.ರಾಜಶೇಖರಪ್ಪ ತಿಳಿಸಿದರು.
                ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಚಿನ್ಮೂಲಾದ್ರಿ ಸಾಹಿತ್ಯವೇಧಿಕೆ ಆಯೋಜಿಸದ್ದ ಸಾಹಿತ್ಯ ಬೇಕೆ? ಎಂಬ ವಿಷಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
               ಯಾವುದೇ ವ್ಯಕ್ತಿ ಕ್ರಮ ಬದ್ದ ಹಾಗೂ ನೆಮ್ಮದಿಯ ಜೀವನ ನಡೆಸಲು ಸಾಹಿತ್ಯ ಬೇಕು. ಕಥೆ, ಕವನ ನಾಟಕ, ಕಾದಂಬರಿ ಈ ಸಾಹಿತ್ಯಗಳು ಭರವಸೆಯ ಬದುಕಿಗೆ ಪೂರಕವಾಗಿವೆ. ಜಗತ್ತಿನ ಅತ್ಯಾಂತ ದೊಡ್ಡಕಾವ್ಯ ಮಹಾಭಾರತ ಈ ಕಾವ್ಯ ಓದುವುದರಿಂದ ಮಾನಸಿಕ ಪರಿವರ್ತನೆಯಾಗಿ ಉತ್ತಮ ಜೀವನ ಸಾಗಿಸಬಹುದು. ನೃಪತುಂಗನ ಆಸ್ಥಾನದ ಶ್ರೀ ವಿಜಯ ಪಾಪ, ಪುಣ್ಯಾ ಸಾಮಾಜಿಕ ಕಾವ್ಯ ರಚಿಸಿದ್ದಾರೆ. ಇತಿಹಾಸ ಉತ್ತಮ ಬದುಕಿಗೆ ಸಹಕಾರಿ ಕನ್ನಡದಲ್ಲಿ ಇಪ್ಪತ್ತೈದು ಸಾವಿರ ಶಾಸನಗಳಿವೆ. ಅದರಲ್ಲಿ ಆಗಿನಕಾಲದ ಮಹಿಳಾ ಕವಯತ್ರಿ ಶ್ರೀವಿಬಾಬೆಯವರು ಶಾಸನಗಳನ್ನು ರಚಿಸಿದ್ದಾರೆ, ಎಂದು ತಿಳಿಸಿದರು.
                ಈ ಸಮಾರಂಭದಲ್ಲಿ ಚಿನ್ಮೂಲಾದ್ರಿ ಸಾಹಿತ್ಯವೇಧಿಕೆಯ ಜಿಲ್ಲಾಧ್ಯಕ್ಷರಾದ ದಯಪುತ್ತೂರ್‍ರ್ಕರ್ ರವರು ಪ್ರಾಸ್ಥಾವಿಕ ಮಾತನಾಡುತ್ತಾ ಸಾಹಿತ್ಯ ಮನಸ್ಸಿಗೆ ಶಾಂತಿ ನೆಮ್ಮದಿ ಸಹನೆ, ತಾಳ್ಮೆ ತಂದುಕೊಡುತ್ತದೆ. ಉತ್ತಮ ಬದುಕಿಗೆ ಸಾಹಿತ್ಯಪೂರಕವಾಗಿರುತ್ತದೆ. ವಿಧ್ಯಾರ್ಥಿಗಳು ಹೆಚ್ಚು ಹೆಚ್ಚು ಸಾಹಿತ್ಯ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಎಂದು ವಿಧ್ಯಾರ್ಥಿಗಳಿಗೆ ಕರೆನೀಡಿದರು.
             ಸಮಾರಂಭದ ಅಧ್ಯಕ್ಷತೆವಹಿಸಿದ್ದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|| ಡಿ ಧರಣೇಂದ್ರಯ್ಯ ರವರು ಮಾತನಾಡುತ್ತಾ ವಿಧ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹೆಚ್ಚು ಜ್ಞಾನ ಸಂಪಾದಿಸಲು ಪುಸ್ತಕಗಳನ್ನು ಓದಬೇಕು.
              ವಿಧ್ಯೆಯುಳ್ಳವನು ಸದಾ ಹಸನ್ಮುಕಿಯಾಗಿರುತ್ತನೆ. ಅರ್ಥಪೂರ್ಣ ಬದುಕು ಸವೆಸಲು ಸಾಹಿತ್ಯಬೇಕು. ವಿಧ್ಯಾರ್ಥಿಯ ಕೈಯ್ಯಲ್ಲಿ ಒಂದು ಪುಸ್ತಕವಿದ್ದರೆ ಅವರ ಬದುಕಿಗೆ ಶೋಭೆತರುತ್ತದೆ. ಸಾಹಿತ್ಯದ ಅಭಿರುಚಿ ವಿಧ್ಯಾರ್ಥಿ ದೆಸೆಯಲ್ಲಿಯೇ ರೂಡಿಸಿಕೊಂಡರೆ ಅವನು ಮಹಾನ್ ವ್ಯಕ್ತಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಾನೆ. ಎಂದು ತಿಳಿಸಿದರು.
              ಈ ಸಮಾರಂಭದಲ್ಲಿ ಸಾಹಿತ್ಯ ವೇಧಿಕೆಯ ಗೌರವಾಧ್ಯಕ್ಷ ಬಬ್ಬೂರು ತಿಪ್ಪೀರನಾಯಕ ತಾಲ್ಲೂಕು ಅಧ್ಯಕ್ಷ ಎಂ ಬಿ ಲಿಂಗಪ್ಪ ಕನ್ನಡ ಸಾಹಿತ್ಯ ಪರಿಷತ್ ಐಮಂಗಲ ಹೋಬಳಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ ಪ್ರದಾನಕಾರ್ಯದರ್ಶಿ ಜೆ.ನಿಜಲಿಂಗಪ್ಪ ಪ್ರಾದ್ಯಾಪಕರಾದ ಪುಷ್ಪಲತಾ, ದಯಾನಂದ್ ಹಾಗೂ ಕಲಾವಿದರಾದ ಎ.ಕಂಬಣ್ಣ, ಗಿರಿಸ್ವಾಮಿ ಮತ್ತು ಸಮಾಜ ಸೇವಕಿ ನಂದಿನಿ ಪ್ರಹಲ್ಲಾದ್ ಕುಮಾರಸ್ವಾಮಿ ಯಶೋಧ ಮುಂತಾದವರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link