ಶೀಲಾ ದೀಕ್ಷಿತ್ ಭೇಟಿ ಮಾಡಿದ ದೆಹಲಿ ಮುಖ್ಯಮಂತ್ರಿ

ನವದೆಹಲಿ:

             ನೂತನ ತತ್ವ ಸಿದ್ದಾಂತ ಮತ್ತು ಭ್ರಷ್ಟಾಚಾರ ರಹಿತ ಸರ್ಕಾರ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ಭಾರಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ ಕಾಂಗ್ರೇಸ್ ನ ಆಗಿನ ಸಾರಥಿ ಶೀಲಾ ದೀಕ್ಷಿತ್ ರವರನ್ನು  ಭೇಟಿ ನೀಡಿದ್ದಾರೆ.

             ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮೂರು ಬಾರಿ ದೆಹಲಿ ಮುಖ್ಯಮಂತ್ರಿ ಸ್ವಲ್ಪ ಸಮಯದವರೆಗೆ ಅಸ್ವಸ್ಥರಾಗಿದ್ದಾರೆ ಮತ್ತು ವೈದ್ಯರು ಅವರ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ.

            “ಶೀಲಾ ದೀಕ್ಷಿತ್ ಅವರ ಆರೋಗ್ಯ ಬಗ್ಗೆ ವಿಚಾರಣೆ ನಡೆಸಲು ಹೋಗಿದ್ದಾಗಿಯೂ, ಅವರು ಹೃದಯ ಸಂಬಂಧಿ ಸಮಸ್ಯೆಯನ್ನು ಹೊಂದಿದ್ದಾರೆ ಮತ್ತು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ, ನಾನು ಅವರ ಆರೋಗ್ಯಕ್ಕೆ ಪ್ರಾರ್ಥಿಸುತ್ತೇನೆ” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು.ಅವರ ಈ ನಡೆಯಿಂದಾಗಿ ರಾಜಕೀಯ ರಣಾಂಗಣದಲ್ಲಿ ಮೈತ್ರಿಯ ವಾಸನೆ ಬರುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link