ಶೂ ಗೋಡೋನ್‌ ಗೆ ಬೆಂಕಿ : ಸುಮಾರು 4 ಕೋಟಿ ನಷ್ಟ

ಬೆಂಗಳೂರು:

     ಚಪ್ಪಲಿ ಗೋದಾಮಿನಲ್ಲಿ ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೋಟ್ಯಂತರ ರೂಪಾಯಿ ಮೌಲ್ಯದ ಚಪ್ಪಲಿ, ಶೂ ಸೇರಿದಂತೆ ಅನೇಕ ವಸ್ತುಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

    ಕೆಂಗೇರಿ ಸ್ಯಾಟಲೈಟ್ ಟೌನ್‌ನ ಹರ್ಷಾ ಲೇಔಟ್‌ನಲ್ಲಿರುವ ಯುನಿಕಾರ್ನ್ ಮಾರ್ಕೆಟಿಂಗ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್ ಮತ್ತು ಎಎಸ್‌ಆರ್ ಮಾರ್ಕೆಟಿಂಗ್‌ಗೆ ಸೇರಿದ ಗೋದಾಮುಗಳಲ್ಲಿ ರಾತ್ರಿ 10.20 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸುಮಾರು 4 ಕೋಟಿ ರು ಮೌಲ್ಯದ ಚಪ್ಪಲಿ ಶೂ ಬೆಂಕಿಗಾಹುತಿಯಾಗಿವೆಯ

   ಗೋಡೌನ್​ ಬಳಿಯ ವಿದ್ಯುತ್ ಕಂಬಕ್ಕೆ ಕ್ಯಾಂಟರ್​ ಡಿಕ್ಕಿ ಹೊಡೆದಿದ್ದು, ಪರಿಣಾಮ  ಶ್ರೀನಿವಾಸ್ ಎಂಬುವವರಿಗೆ ಸೇರಿದ ಗೋಡೌನ್​​ಗೆ ಸಂಪರ್ಕಿಸಿದ್ದ ವಿದ್ಯುತ್ ​​​ತಂತಿಯಿಂದ ಶಾರ್ಟ್​ಸರ್ಕ್ಯೂಟ್ ಉಂಟಾಗಿ ಈ ಅವಘಡ ಸಂಭವಿಸಿದೆ.

    20 ಲಕ್ಷ ಮೌಲ್ಯದ ಪಾದರಕ್ಷೆಗಳನ್ನು ಇಳಿಸಿದ ನಂತರ ಗೋದಾಮಿನ ವ್ಯವಸ್ಥಾಪಕ ಶ್ರೀನಿವಾಸ್ ಹೋದ ಸ್ವಲ್ಪ ಸಮಯದಲ್ಲೇ ಬೆಂಕಿ ಕಾಣಿಸಿಕೊಂಡಿದೆ.  ಗೋದಾಮಿನ ಗೇಟ್ ಬಳಿ ರಿವರ್ಸ್ ತೆಗೆದುಕೊಳ್ಳುತ್ತಿದ್ದ ಟ್ರಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ, ಕಳಪೆ  ಗುಣಮಟ್ಟದ ವಿದ್ಯುತ್ ಕಂಬ ಮುರಿದು ಬಿದ್ದಿದೆ ಎಂದು  ಯೂನಿಕಾರ್ನ್ ಮಾರ್ಕೆಟಿಂಗ್‌ನ ವ್ಯವಸ್ಥಾಪಕರ ಪತ್ನಿ ಮತ್ತು ಉದ್ಯೋಗಿಯೂ ಆಗಿರುವ ಅಂಬಿಕಾ ಶ್ರೀನಿವಾಸ್ ಹೇಳಿದ್ದಾರೆ.ವಿದ್ಯುತ್ ಕಂಬವು ರಸ್ತೆಯ ಮೇಲೆ ಕುಸಿದು ಬಿದ್ದಿದ್ದು, ವೈರಿಂಗ್ ಸಡಿಲಗೊಂಡಿದ್ದರಿಂದ ಗೋದಾಮಿನೊಳಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap