ದಾವಣಗೆರೆ
ಮಹಾನಗರ ಪಾಲಿಕೆ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ, ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ ಏಷ್ಯನ್ ಭ್ಯಾಂಕ್ ನೆರವಿನ ಸ್ಕೂಡ್ ವೆಸ್ ಕ್ಯುಮಿಪ್ ವತಿಯಿಂದ ಫಲಿತಾಂಶ ಆಧಾರಿತ ನೆರವು ಶೌಚಾಲಯ ಯೋಜನೆಯಡಿ” ಸೋಮವಾರ ಶೌಚಾಲಯ ಮಹತ್ವ ಹಾಗೂ ಒಳಚರಂಡಿ, ನಿರಂತರ ನೀರು ಸಂಪರ್ಕದ ಮಹತ್ವ ಮತ್ತು ಪರಿಸರ ನೈರ್ಮಲ್ಯ ಕುರಿತು ಅರಿವು ಮತ್ತು ಜಾಥಾ ಕಾರ್ಯಕ್ರಮ ನೆರವೇರಿತು.
ಪಾಲಿಕೆಯ 8ನೇ ವಾರ್ಡ್ ವ್ಯಾಪ್ತಿಯ ಎಸ್‍ಪಿಎಸ್ ನಗರದ 1ನೇ ಹಂತದಲ್ಲಿನ ಹರಪನಹಳ್ಳಿ ಮುಪ್ಪಣ್ಣ ಸಿದ್ದಮ್ಮ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಅಂಜಿನಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಸಹಶಿಕ್ಷಕ ಹನುಮಂತರೆಡ್ಡಿ, ನೀವೆದಿತಾ, ರಾಜಕುಮಾರ್, ಸ್ಕೊಡ್ ವೆಸ್ ಸಂಸ್ಥೆಯ ಸಮುದಾಯ ಮತ್ತು ಸಾಮಾಜಿಕ ಅಭಿವೃದ್ಧಿ ತಜ್ಞ ಎನ್.ಎ. ಲವ. ಸಮುದಾಯ ಪ್ರೇರೆಪಕಿ ಕಾವ್ಯ ಮತ್ತು ಶಿವಕುಮಾರ್ ಮತ್ತಿತರರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ