ಶ್ರಾವಣಮಾಸದಲ್ಲಿ ಭಗವಂತನ ದ್ಯಾನ ಶ್ರೇಷ್ಟವಾದದ್ದು: ತಗ್ಗಿನಮಠ ಶ್ರೀ

ಹರಪನಹಳ್ಳಿ:

      ಶ್ರಾವಣಮಾಸದಲ್ಲಿ ಭಗವಂತನ ಆರಾಧನೆಗೆ ಅತ್ಯಂತ ಶ್ರೇಷ್ಟತೆಯಿದೆ ಎಂದು ತೆಗ್ಗಿನಮಠದ ಷ.ಬ್ರ.ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

      ಪಟ್ಟಣದ ಮೇಗಳಪೇಟೆಯ ಸಿ.ಎಂ.ಕೊಟ್ರಯ್ಯ ನವರ ನಿವಾಸದ ಆವರಣದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ನಿಮಿತ್ಯ ರುದ್ರಾಭಿಷೇಕ, ಇಷ್ಟ ಲಿಂಗಪೂಜೆ , ಧಾರ್ಮಿಕ ಕಾರ್ಯಕ್ರಕಮದಲ್ಲಿ ಮಾತನಾಡಿದ ಅವರು. ಶ್ರಾವಣಮಾಸದಲ್ಲಿ ಪುಣ್ಯಕತೆ ಪುರಾಣಗಳನ್ನು ಕೇಳುವುದು ಪುಣ್ಯದ ಕಾರ್ಯವಾಗಿದೆ. ಭಾರತೀಯರಲ್ಲಿ ಶಾಸ್ತ್ರದ ಮೇಲೆ ಅಪಾರ ನಂಬಿಕೆಯುಳ್ಳವರಾಗಿದ್ದಾರೆ. ಕಾಲಕ್ಕೆ ಅನುಗುಣವಾಗಿ ವ್ರತ ನಿಯಮಗಳನ್ನು ಅನುಸರಿಸುವುದು ರೂಢಿಯಲ್ಲಿದೆ. ಭಗವಂತನ ದ್ಯಾನದಲ್ಲಿ ಹಾಗೂ ಪೂಜೆಯಲ್ಲಿ ಮಗ್ನರಾದರೆ ಸಮಯದ ಅರಿವೂ ಇರವುದಿಲ್ಲ. ಮನಸು ಹಗುರವಾಗುವುದರೊಂದಿಗೆ ಬದುಕು ಸಾರ್ಥಕವಾಗುವುದು ಎಂದರು.

      ಗುರು ಶಿಷ್ಯರ ಭಾಂದವ್ಯ.ದ ಬಂದುತ್ವವನ್ನು ಕಟ್ಟುವ ಬಯಕೆಯಷೆ , ಲೋಕಕಲ್ಯಾಣ ಹಾಗೂ ಭಕ್ತರ ಅವರ ಕುಟುಂಬದ ಶ್ರೇಯೊಭಿವೃದ್ದಿಗಾಗಿ ಇಷ್ಟ ಲಿಂಗ ಪೂಜೆ, ರುದ್ರ ಪಠಣ, ಶಿವಪಂಚಾಕ್ಷರಿ ಜಪ, ಪಾದೋದಕ ಕ್ರಿಯಾ ಪ್ರಸಾದ್ ನಡೆಸಿ ಭಕ್ತರಲ್ಲಿ ಧರ್ಮಾಚರಣೆಯ ಜಾಗೃತಿ ಮೂಡಿಸಬೇಕಾಗಿದೆ ಎಂದು ನುಡಿದರು.

      ಮುಖ್ಯ ಶಿಕ್ಷಕ ಸಿ.ಎಂ.ಕೊಟ್ರಯ್ಯ ನವರು ಮಾತನಾಡಿ. ಶ್ರಾವಣ ಮಾಸದಲ್ಲಿ 28 ಭಕ್ತರ ಮನೆಯಲ್ಲಿ ತೆಗ್ಗಿನಮಠ ಶ್ರೀಗಳು ಪ್ರತಿದಿನ ರುದ್ರಾಭಿಷೇಕ ನಡೆಸುವರು, ಸಂಜೆ ಪಾದ ಪೂಜೆ ನೆರವೇರುವುದು ಎಂದು ಸೆ.9 ರಂದು ಭಾನುವಾರ ತೆಗ್ಗಿನಮಠದಲ್ಲಿ ಅಮವಾಸೆ ಪೂಜಾ ಕಾರ್ಯಕ್ರಮ ಹಾಗೂ ಶ್ರಾವಣ ಮಾಸದ ಶಿವಪೂಜಾ ಮಹಾ ಮಂಗಲ ನಡೆಯುವುದು ಎಂದು ತಿಳಿಸಿದರು.
ಪೂಜೆಯಲ್ಲಿ ಚಂದ್ರೇಗೌಡ, ಎ.ಎಸ್ ಎಂ ಗುರುಪ್ರಸಾದ್ , ಸಾವಳಗಿ ನಾಗರಾಜ, ಎಚ್ .ಜಿ.ಎಂ.ಜಯದೇವ, ಶಿವಾನಂದಯ್ಯ ಮತ್ತಿತರರು ಪಾಲ್ಗೊಂಡಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link