ಚಳ್ಳಕೆರೆ:
ಪ್ರತಿವರ್ಷ ಶ್ರಾವಣ ಮಾಸವೆಂದರೆ ಅದು ಗೃಹಿಣಿಯರಿಗೆ ಎಲ್ಲಿಲ್ಲದ ಸಂತಸವನ್ನು ತರುವ ಮಾಸವಾಗಿದೆ. ಕಾರಣ ಮಹಿಳೆಯರಿಗೆ ಧೀರ್ಘ ಸುಮಂಗಲಿಯರಾಗಿ ಬದುಕುವ ಶುಭ ಆಶೀರ್ವಾದವನ್ನು ಗೌರಿಪೂಜೆ ಮಾಡುವ ಮೂಲಕ ಪಡೆಯುತ್ತಾರೆ. ಅದೇ ರೀತಿ ಕಾಗಿನೆಲೆ ಮಹಾ ಸಂಸ್ಥಾನ ಸಹ ಈ ಮಾಸವನ್ನು ಎಲ್ಲಾ ಸದ್ಭಕ್ತರ ಮಾಸವೆಂದು ಪರಿಗಣಿಸಿ ಶಿಷ್ಯವೃಂದದ ಮನೆಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಕ್ತರಿಗೆ ಶುಭಕೋರುವ ದಿನವಾಗಿದೆ ಎಂದು ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಶ್ರೀಈಶ್ವರಾನಂದಪುರಿಸ್ವಾಮೀಜಿ ತಿಳಿಸಿದರು.
ಅವರು ಸೋವiವಾರ ಮಧ್ಯಾಹ್ನ ಇಲ್ಲಿನ ವಿಠಲನಗರದಲ್ಲಿ ವಾಸವಾಗಿರುವ ಮಸ್ಕಲ್ ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ ಹಾಗೂ ಯುವ ರಾಜಕಾರಣಿ ಕಂದಿಕೆರೆ ಸುರೇಶ್‍ಬಾಬು ನಿವಾಸಕ್ಕೆ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಸುರೇಶ್‍ಬಾಬು ದಂಪತಿಗಳು ಗುರುಗಳ ಪಾದಪೂಜೆಯನ್ನು ನೆರವೇರಿಸಿದರು. ಪ್ರತಿಶ್ರಾವಣ ಮಾಸದಲ್ಲಿ ಶ್ರಾವಣ ಭಿಕ್ಷೆ ಮೂಲಕ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಭಕ್ತಾಧಿಗಳು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಠಕ್ಕೆ ತಮ್ಮ ಭಕ್ತಿಯನ್ನು ಸಮರ್ಪಿಸುವರು. ಶ್ರಾವಣ ಭಿಕ್ಷೆ ಕಾರ್ಯಕ್ರಮ ಭಕ್ತರಿಗೆ ವಿಶೇಷ ಶಕ್ತಿ ಹಾಗೂ ಭರವಸೆಯನ್ನು ನೀಡುವ ಮಾಸವಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ ಎಂದರು.
ಶ್ರಾವಣ ಮಾಸದ ಬಿಕ್ಷೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರದೇಶ ಕುರುಬರ ಸಂಘದ ನಿರ್ದೇಶಕ ಕಂದಿಕೆರೆ ಸುರೇಶ್‍ಬಾಬು, ತಾಲೂಕು ಅಧ್ಯಕ್ಷ ಆರ್.ಮಲ್ಲೇಶಪ್ಪ, ಇಂಜಿನಿಯರ್ ಲೋಕೇಶ್, ಪ್ರೋ. ಎಂ.ಶಿವಲಿಂಗಪ್ಪ, ಪರಸಪ್ಪ, ಬಸವರಾಜು, ದಯಾನಂದ, ಚಂದ್ರಣ್ಣ, ಗುತ್ತಿಗೆದಾರ ತಿಪ್ಪೇಸ್ವಾಮಿ, ಅವಿನಾಶ್, ಕಾಂತರಾಜು, ಮಂಜಣ್ಣ ಮುಂತಾದವರು ಭಾಗವಹಿಸಿದ್ದರು.
