ಶ್ರೀಗ್ರಾಮದೇವತೆ ಅಮ್ಮನವರಿಗೆ ನೇತ್ರಧಾರಣೆಯೊಂದಿಗೆ ಜಾತ್ರಾ ಮಹೋತ್ಸವ

ಗುಬ್ಬಿಸೆ7:

             ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಗ್ರಾಮದೇವತೆ ಅಮ್ಮನವರ ಜಾತ್ರಾ ಮಹೋತ್ಸವವು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ನಡೆಯಿತು. 
             ಶ್ರೀಗ್ರಾಮದೇವತೆ ಅಮ್ಮನವರಿಗೆ ನೇತ್ರಧಾರಣೆಯೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭವಾಗಿ ಪ್ರತಿ ನಿತ್ಯ ಆರತಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೂವಿನಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಅಮ್ಮನವರನ್ನು ಕುಳ್ಳಿರಿಸಿ ವಿವಿಧ ವಾಧ್ಯಗಳೊಂದಿಗೆ ಪಟ್ಟಣದ ರಾಜ ಬೀದಿಗಳಲ್ಲಿ ವೈಭವಯುತವಾದ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ 18 ಕೋಮಿನವರಿಂದ ಮಹಾ ಮಂಗಳಾರತಿ ನಂತರ ಬ್ರಾಹ್ಮಣರು, ಆರ್ಯ ವೈಶ್ಯರು, ವೀರಶೈವರು, ಅರಸರು, ಜ್ಯೋತಿ ಪಣದವರು, ಅಗ್ನಿವಂಶಸ್ಥರು. ಭಾವಸಾರ ಕ್ಷತ್ರಿಯ, ಗಂಗೆ ಮತಸ್ಥರು ಮತ್ತು ಸವಿತಾ ಸಮಾಜದವರ ಆರತಿ ಸೇವೆಗಳು ನಡೆದವು. ತಳವಾರರು, ಮಡಿವಾಳರು ಮತ್ತು ಭೋವಿ ಜನಾಂಗದವರ ಆರತಿ ಸೇವೆ ನಡೆಯಲಿದ್ದು ಯಾದವರ ಬಾಪೂಜೆ, ಈಡಿಗರ ಘಟೆ ಸೇವೆ, ಹರಿಜನ ಗಿರಿಜನರ ಆರತಿ ಸೇವೆಗಳು ನಡೆದವು ಆನಂತರ ಅಮ್ಮನವರನ್ನು ಬೀಳ್ಕೊಡಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ನಿತ್ಯ ವಿವಿಧ ಧಾರ್ಮಿಕ ಪೂಜಾ ಕಾರ್ಯ ಕ್ರಮಗಳು ವಿಧಿವತ್ತಾಗಿ ನಡೆದವು. ವಿವಿಧ ಭಾಗಗಳಿಂದ ಆಗಮಿಸುವ ಭಕ್ತಾಧಿಗಳು ಅಮ್ಮನವರಿಗೆ ತಮ್ಮ ಇಷ್ಠಾರ್ಥ ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವದಲ್ಲಿ ಪಟ್ಟಣದ 18 ಕೋಮಿನವರು ಅಮ್ಮನವರಿಗೆ ವಿವಿಧ ಪೂಜೆ ಸಲ್ಲಿಸಿದರು.

Recent Articles

spot_img

Related Stories

Share via
Copy link
Powered by Social Snap