ಶ್ರೀನಿವಾಸ ಕಲ್ಯಾಣೋತ್ಸವಶ್ರೀನಿವಾಸ ಕಲ್ಯಾಣೋತ್ಸವ

ಚಿಕ್ಕನಾಯಕನಹಳ್ಳಿ :

                ಪಟ್ಟಣದ ಶ್ರೀ ವೆಂಕಟರಮಣ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ವೆಂಕಟೇಶ್ವರ ಸ್ವಾಮಿಗೆ ಹೂವಿನ ಅಲಂಕಾರದ ಜೊತೆಯಲ್ಲಿ ಸ್ವಾಮಿಗೆ ಪದ್ಮಾವತಿ ದೇವಿಯ ಕಲ್ಯಾಣೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಶುಕ್ರವಾರ ಸ್ವಾಮಿಗೆ ಗಣಪತಿ, ಗಂಗೆ ಪೂಜೆಯೊಂದಿಗೆ ದೇವಾಲಯ ಪ್ರವೇಶ ಅರಿಶಿಣ ಶಾಸ್ತ್ರ, ಬಳೆ ಪೂಜೆ ಹಾಗೂ ಸ್ವಾಮಿಗೆ ಮಹಾಮಂಗಳಾರತಿ ನಡೆಯಿತು.
               ಶನಿವಾರ ಶ್ರೀಗಣಪತಿ, ಮಹಾಲಕ್ಷ್ಮಿ, ಪದ್ಮಾವತಿ ಹಾಗೂ ಆಂಜನೇಯಸ್ವಾಮಿ ವೆಂಕಟರಮಣಸ್ವಾಮಿ ಪಂಚಾಮೃತ ಅಭಿಷೇಕ ಅಷ್ಟೋತ್ತರ ಶತನಾಮ ಪೂಜೆ ನಡೆಯಿತು. ನಂತರ ಆದಿತ್ಯಾದಿ ನವಗ್ರಹ ಶಾಂತಿ ಹೋಮ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವದ ಪೂಜೆ ನಡೆಯಿತು. ಶ್ರೀನಿವಾಸ ಕಲ್ಯಾಣೋತ್ಸವವನ್ನು ತುರುವೇಕೆರೆಯ ಸುಬ್ರಹ್ಮಣ್ಯಶಾಸ್ತ್ರಿಗಳು ರಾಮಕೃಷ್ಣ ಜೋಯಿಸ್ ನಡೆಸಿಕೊಟ್ಟರು. ಕಲ್ಯಾಣೋತ್ಸವಕ್ಕೆ ಬಂದಂತಹ ಭಕ್ತರಿಗೆ ಪೂಜೆಯ ನಂತರ ಲಡ್ಡು, ಮೊಸರನ್ನ, ಪುಳಿಯೋಗರೆ ಪ್ರಸಾದ ನೀಡಲಾಯಿತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link