ಚಳ್ಳಕೆರೆ
ಪ್ರಧಾನ ಮಂತ್ರಿ ನರೇಂದ್ರಮೋದಿಯವರ 69ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ವಿಠಲನಗರದ ಶ್ರೀಮಾನ್ ವೃದ್ಧಾಶ್ರಮದ ವೃದ್ದರಿಗೆ ಎಲ್‍ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗ ಬುಧವಾರ ಬ್ರೆಡ್, ಬಿಸ್ಕತ್ ನೀಡಿ ಪ್ರಧಾನ ಮಂತ್ರಿಗಳ ಹುಟ್ಟುಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಬಳಗದ ಅಧ್ಯಕ್ಷ ಎಲ್‍ಐಸಿ ದುಗ್ಗಾವರ ರಂಗಸ್ವಾಮಿ, ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಕರಾತ್ಮಕವಾಗಿ ಸ್ಪಂದಿಸುತ್ತಿದ್ದು, ಇಂದು ವಿಶ್ವವೇ ಇವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದೆ. ರಾಷ್ಟ್ರದ ಮುನ್ನಡೆಗೆ ಇಂತಹ ಧೀಮಂತ ನಾಯಕರ ಆಡಳಿತ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರಿಗೆ ಆರೋಗ್ಯ ಮತ್ತು ಆಯುಷ್ ಕೋರಿ ವೃದ್ದರಿಗೆ ಬ್ರೆಡ್ ಬಿಸ್ಕತ್ ಹಂಚುವ ಮೂಲಕ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಟಿ.ಮಂಜುನಾಥ ಮಾತನಾಡಿ, ಪ್ರಧಾನಮಂತ್ರಿಗಳ ಹುಟ್ಟು ಹಬ್ಬ ಎಲ್ಲೆಡೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಬಿಜೆಪಿ ಘಟಕವೂ ಸಹ ಸಸಿ ನೆಡುವ ಮೂಲಕ ಈ ಕಾರ್ಯಕ್ರಮ ಆಚರಿಸಿತ್ತು. ಆದರೆ, ಇಂದು ಎಲ್‍ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗ ವೃದ್ದರಿಗೆ ಬ್ರೆಡ್, ಬಿಸ್ಕತ್ ನೀಡಿ ಪ್ರಧಾನ ಮಂತ್ರಿಗಳ ಹುಟ್ಟು ಹಬ್ಬದ ಬಗ್ಗೆ ಅವರಿಗೂ ಸಹ ಜಾಗೃತಿ ಮೂಡಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಬಳಗದ ಸದಸ್ಯ ಬಿ.ಚನ್ನಕೇಶವ, ನಾಗರಾಜು, ವಿನಯ್ ಮುಂತಾದವರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ