ಶ್ರೀರಾಮನನ್ನು ಟೀಕಿಸಿರುವ ಭಗವಾನ್‍ನನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ಕುಣಿಗಲ್

          ಸಾಹಿತಿ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಇವರನ್ನು ಗಡಿಪಾರು ಮಾಡಬೇಕೆಂದು ತಾಲ್ಲೂಕು ಭಜರಂಗ ಸೇನೆ, ಹಿಂದು ಜನಜಾಗೃತಿ ಸಮಿತಿ, ಭಜರಂಗದಳ ಹಾಗೂ ಇತರೆ ಹಿಂದೂಪರ ಸಂಘಟನೆಗಳು ಪ್ರತಿಭಟಿಸಿ ಧಿಕ್ಕಾರ ಕೂಗಿದರು.

          ಶ್ರೀರಾಮ ದೇವರೆ ಅಲ್ಲ, ಕೊಲೆಗಡುಕ, ಮದ್ಯಪಾನ ಮಾಡುತ್ತಿದ್ದನು, ಮಾಂಸಹಾರಿ ಎಂದು ಹಿಂದುಗಳ ಆರಾಧ್ಯ ದೈವ ಶ್ರೀರಾಮನ ವಿರುದ್ಧ ಹೇಳುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವ ಕೆ.ಎಸ್ ಭಗವಾನ್ ವಿರುದ್ಧ ಕ್ರಮ ಜರುಗಿಸಬೇಕು. ಹಿಂದುಗಳ ಭಾವನೆಗೆ ಅಪಚಾರ ಉಂಟು ಮಾಡುತ್ತಾ, ಶ್ರೀರಾಮ ದೇವರೆಂದು ಭಕ್ತಿ, ಶ್ರದ್ಧೆ ಭಾವದಿಂದಲೂ ಪುರಾತನ ಕಾಲದಿಂದಲೂ ಪೂಜೆ ಮಾಡುತ್ತಿದ್ದು, ಶ್ರೀ ಭಗವಾನ್‍ರವರು ಶ್ರೀರಾಮ ಬಗ್ಗೆ ಅವಹೇಳನಕಾರಿ ಅಂಶಗಳನ್ನ ಪುಸ್ತಕದಲ್ಲಿ ಬರೆದು ಪದೆ-ಪದೆ ಮಾಧ್ಯಮಗಳು, ಟಿವಿಗಳಲ್ಲಿ ಆಧಾರರಹಿತವಾದ ಸುದ್ದಿಗಳನ್ನ ಬಿಂಬಿಸುತ್ತಿದ್ದು, ಹಿಂದು ಧರ್ಮಿಯರ ಘನತೆಗೆ ಧಕ್ಕೆ ಉಂಟಾಗಿದೆ. ಇಂತಹ ವ್ಯಕ್ತಿಯ ವಿರುದ್ಧ ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಪ್ರತಿಭಟನೆ ನಡೆಸಿ ತಹಸೀಲ್ದಾರ್‍ರಿಗೆ ಮನವಿ ಸಲ್ಲಿಸಿದರು.

           ಭಜರಂಗದಳದ ದೇವರಾಜ್, ಹಿಂದೂ ಜನಜಾಗೃತಿ ವೇದಿಕೆಯ ಚೇತನಶಂಕರ್, ಪ್ರತಿಭಾಸುಧಾಕರ್, ಸುಮಿತ್ರಬಾಲಾಜಿ ಹಾಗೂ ಭಜರಂಗಸೇನೆ ಎಸ್.ರಾಮಚಂದ್ರ, ಗಿರೀಶ್, ಶ್ರೀನಿವಾಸ್, ಮನೋಜ್, ಚಂದ್ರು, ರವಿಕುಮಾರ್, ನರಸಿಂಹರಾಜ್ ಮುಖಂಡರಾದ ಎ.ಸಂತೋಷ್, ಸುರೇಶ್, ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ