ಶ್ರೀವಿಶ್ವಕರ್ಮ ಜಯಂತಿ ಸಮಾರಂಭ

ಗುಬ್ಬಿ:

              ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಶೈಕ್ಷಣಿಕವಾಗಿ ಮತ್ತು ಸಂಘಟನಾತ್ಮಕವಾಗಿ ಬಲಗೊಂಡಾಗ ಮಾತ್ರ ಸಾಮಾಜಿಕ ಸಮಾನತೆ ಪಡೆಯಲು ಸಾಧ್ಯವಾಗುತ್ತದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯ ಪಟ್ಟರು.

              ಪಟ್ಟಣದ ಶಿವರಾತ್ರಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ತಾಲೂಕು ಸಮಿತಿ ಗುಬ್ಬಿ, ತಾಲೂಕು ಪಂಚಾಯತಿ, ಪಟ್ಟಣ ಪಂಚಾಯತಿ, ಸೃಷ್ಠಿಕರ್ತ ವಿಶ್ವಕರ್ಮ ಜಯಂತಿ ಉತ್ಸವಸಮಿತಿ ಮತ್ತು ವಿಶ್ವಕರ್ಮ ಸಮಾಜ ಗುಬ್ಬಿ ತಾಲೂಕುವತಿಯಿಂದ ಆಯೋಜಿಸಿದ್ದ ಶ್ರೀವಿಶ್ವಕರ್ಮ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಣ್ಣ ಪುಟ್ಟ ಸಮುದಾಯಗಳು ಸಾಮಾಜಿಕ ಸಮಾನತೆ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ಸಮುದಾಯಗಳ ಸರ್ವಾಂಗೀಣ ಅಭಿವೃಧ್ದಿಗೆ ಸಂಘಟಿತರಾಗುವಂತೆ ಕರೆನೀಡಿದರು.

              ವಿಶ್ವಕರ್ಮ ಸಮುದಾಯ ಶ್ರಮಜೀವನದಿಂದ ಬದುಕು ಸಾಗಿಸುತ್ತಿದ್ದು ಅವರ ಶ್ರಮಕ್ಕೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯವಿದ್ದು ಸಮುದಾಯ ಬಂದುಗಳು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರಗಳನ್ನು ಕಲಿಸುವ ಮೂಲಕ ಅವರನ್ನು ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕರೆನೀಡಿದ ಅವರು ಮೂರನೆ ಭಾರಿಗೆ ಜಯಂತಿ ಕಾರ್ಯಕ್ರಮವನ್ನು ಸರಕಾರದ ವತಿಯಿಂದಲೆ ಆಯೋಜನೆ ಮಾಡುತ್ತಿರುವುದು ಸಂತೋಷದ ವಿಚಾರ ಇಂತಹ ಜಯಂತಿಗಳು ಮಾಡುವ ಉದ್ದೇಶವೆಂದರೆ ಸಮಾಜದ ಮಹಾನ್ ಪುರುಷರನ್ನು ಗೌರವಿಸಿದಂತಾಗುತ್ತದೆ ಅಲ್ಲದೆ ಸಮಾಜದ ಪ್ರಗತಿಗೆ ಹೊಸ ಆಯಾಮ ನೀಡಿದಂತಾಗುತ್ತದೆ ಎಂದು ತಿಳಿಸಿದರು.

               ಸೃಷ್ಠಿಕರ್ತ ಶ್ರೀವಿಶ್ವಕರ್ಮ ಅವರ ಆದರ್ಶಗಳನ್ನು ನಾವು ಪಾಲಿಸಬೇಕು ಅವರ ಮಾರ್ಗ ದರ್ಶನದಲ್ಲಿ ನಡೆದು ಬರಬೇಕು ಆಗ ಮಾತ್ರ ಸುಸಂಸ್ಕತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದ ಅವರು ಮಹಾನ್ ವ್ಯಕ್ತಿಗಳ ಆಚರಣೆಗಳು ಕೇವಲ ಆಚರಣೆಗಳಾಗಬಾರದು ಅವರ ತತ್ವಾಧರ್ಶಗಳನ್ನು ಸಂಆಜಿಕ ಬದುಕಿನಲ್ಲಿ ಅಳವಢಿಸಿಕೊಂಡು ಆಧರ್ಶ ಸಮಾಜ ನಿರ್ಮಾಣಕ್ಕೆ ಪ್ರಾಮಾನಿಕ ಪ್ರಯತ್ನ ಮಾಡುವಂತೆ ಕರೆನೀಡಿದ ಅವರು ರಾಜ್ಯದಲ್ಲಿ ಸುಮಾರು 15 ಜಯಂತಿಗಳನ್ನು ಆಚರಣೆ ಮಾಡುತ್ತಿದ್ದು ಯಾವುದೇ ಜಯಂತಿ ಕೇವಲ ಒಂದು ಜಾತಿಗೆ ಸಿಮೀತವಾಗದೆ ಎಲ್ಲಾ ಸಮುದಾಯಗಳಿಗೂ ಸೀಮಿತವಾಗಬೇಕು. ಪ್ರತಿಯೊಬ್ಬ ಮಹಾ ಪುರುಷರು ಸಮಾಜದ ಅಭಿವೃದ್ದಿಗೆ ಶ್ರಮಿಸಿದ್ದಾರೆ ಅವರು ಹೇಳಿರುವ ಪ್ರತಿ ಮಾತುಗಳು ಇಂದಿನ ಜನರಿಗೆ ದಾರಿದೀಪವಾಗಬೇಕು. ಇಂತಹ ಆಚರಣೆಯನ್ನು ಸಮುದಾಯದ ಮುಖಂಡರು ಮುಂದೆ ಬಂದು ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕು. ಶೋಷಿತ ವರ್ಗಕ್ಕೆ ಶಕ್ತಿ ನೀಡುವಂತಹ ಕೆಲಸವನ್ನು ಸಹ ಸರಕಾರ ಮಾಡುತ್ತದೆ ಎಂದು ತಿಳಿಸಿದರು.

                  ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ನಾಗರಾಜಾಚಾರ್ ಮಾತನಾಡಿ ತಾಲ್ಲೂಕಿನಲ್ಲಿ ನಮ್ಮ ಸಮುದಾಯವು ಶ್ರಮ ಜೀವನದಿಂದ ಬದುಕು ಸಾಗಿಸುತ್ತಿದ್ದು ನಮ್ಮ ಸಮುದಾಯವನ್ನು ಅಭಿವೃಧ್ದಿ ಪಥದತ್ತ ಕೊಂಡೊಯ್ಯಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುವತ್ತ ಮುಂದಾಗಬೇಕೆಂದು ಮನವಿ ಮಾಡಿಕೊಂಡ ಅವರು ನಮ್ಮ ಸಮುದಾಯ ಸಂಘಟಿತರಾಗಿದ್ದು ನಮಗೆ ದೊರೆಯಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವ ಮೂಲಕ ಸಮಾಜದ ಮುಖ್ಯವಾನಿಗೆ ಕೊಂಡೊಯ್ಯುವತ್ತ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ತಿಳಿಸಿದರು.

                  ಇದೆ ಸಂದರ್ಭದಲ್ಲಿ ಹಿರಿಯ ನಾಗರೀಕರು ಮತ್ತು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಹೆಚ್.ಜಗನ್ನಾಥ್, ಜಿ.ರಾಮಾಂಜಿನಪ್ಪ, ಕೆ.ಯಶೋಧಮ್ಮ, ತಾಲೂಕು ಪಂಚಾಯತಿ ಉಪಾಧ್ಯಕ್ಷೆ ಕಲ್ಪನಾ, ಪಟ್ಟಣ ಪಂಚಾಯತಿ ಸದಸ್ಯರಾದ ಸಿ.ಮೋಹನ್, ಜಿ.ಆರ್.ಶಿವಕುಮಾರ್, ಶೌಕತ್ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಡಾ:ಕೃಷ್ಣಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ಜಿ.ನಾಗಭೂಷಣ್, ರಾಜ್ಯ ಪರಿಷತ್ ಸದಸ್ಯ ಕೆ.ಜಿ.ನಾರಾಯಣ್, ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಡಾ;ಚಂದ್ರಶೇಖರಾಚಾರ್, ಉಪಾಧ್ಯಕ್ಷ ಎನ್.ವೀರಾಚಾರ್, ಡಾ:ಕೃಷ್ಣಾಚಾರ್, ಕಾರ್ಯದರ್ಶಿಗಳಾದ ಕಮಲನಾಭಾಚಾರ್, ನವೀನ್‍ಕುಮಾರ್, ಖಜಾಂಚಿ ಸಂತೋಷ್, ಉಪಾಧ್ಯಕ್ಷರಾದ ಬಿ.ನಾಗಭೂಷಣಾಚಾರ್, ಯೋಗಮೂರ್ತಾಚಾರ್, ಸಮಾಜದ ಮುಖಂಡರಾದ ಕೆ.ಮಹೇಶ್ ಕುಮಾರ್, ದಯಾನಂದ್, ಗೀತಾಲೋಕೇಶ್, ಕೃಷ್ಣಾಚಾರ್, ಗುರುರಾಜು ಸೇರಿದಂತೆ ತಾಲ್ಲೂಕಿನ ವಿಶ್ವಕರ್ಮ ಸಮುದಾಯದವರು ಭಾಗವಹಿಸಿದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap