ಗುಬ್ಬಿಸೆ17:
ಸುಮಾರು 8 ಶತಮಾನಗಳ ಹಿಂದಿನಿಂದಲೂ ನಡೆದು ಬಂದಿರುವ ಜಯಂತಿ ಎಂದರೆ ಅದು ಶ್ರೀಸಿದ್ದರಾಮೇಶ್ವರರ ಜಯಂತಿಯಾಗಿದ್ದು ಇದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಸರ್ವರನ್ನು ಪ್ರೀತಿಸುವಂತಹ ಮತ್ತು ಬರಮಾಡಿಕೊಳ್ಳುವ ಜಯಂತಿಯಾಗಿದೆ ಇಂತಹ ಜಯಂತಿಯನ್ನು ಭಕ್ತಿ ಮತ್ತು ಶ್ರಧ್ದೆಯಿಂದ ಆಚರಿಸ ಬೇಕಿದೆ ಎಂದು ಅಖಿಲ ಭಾರತ ವೀರಶೈವ ವiಹಾ ಸಭಾದ ರಾಜ್ಯ ಅಧ್ಯಕ್ಷ ತಿಪ್ಪಣ್ಣ ತಿಳಿಸಿದರು.
ತಾಲೂಕಿನ ಬಾಗೂರು ಗೇಟಿನ ಅನುಭವ ಮಂಟಪಕ್ಕೆ ಭೇಟಿ ನೀಡಿ ಶ್ರೀಸಿದ್ದರಾಮ ಜಯಂತಿ ನಡೆಯುವ ಕಾರ್ಯಕ್ರಮಗಳ ಸಿದ್ದತೆಯ ಬಗ್ಗೆ ಸ್ವಾಮೀಜಿಗಳೊಂದಿಗೆ ಚರ್ಚೆ ಹಾಗೂ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದ ಅವರು ಆಧುನಿಕತೆ, ನಗರೀಕರಣ ಮತ್ತು ವಿದೇಶಿ ಸಂಸ್ಕತಿಗೆ ಮಾರುಹೋಗಿರುವ ನಾವುಗಳು ನಮ್ಮ ಧರ್ಮ, ಆಚಾರ, ವಿಚಾರ, ಸಂಸ್ಕಾರದಿಂದ ದೂರವಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಹಾಗಾಗಿ ಹಲವು ಶತಮಾನಗಳಿಂದ ನಡೆದು ಬಂದಿರುವಂತಹ ಇಂತಹ ಮಹಾಪುರುಷರ ಜಯಂತಿಗಳಲ್ಲಿ ಸರ್ವರು ಭಾಗಿಯಾಗಿ ಶ್ರೀಸಿದ್ದರಾಮೇಶ್ವರ ಜಯಂತಿ ಮಾಡುವ ಕೆಲಸವನ್ನು ಮಾಡಬೇಕಾಗಿದೆ. ಪ್ರತಿಯೂಬ್ಬರ ಸಹಕಾರ ಸಹಾಯ ಇಲ್ಲಿ ಬೇಕಾಗಿದೆ ಎಲ್ಲಿಯೇ ಜಯಂತಿ ನಡೆದರು ಕನಿಷ್ಠ 2 ರಿಂದ 3 ಲಕ್ಷ ಭಕ್ತರು ಸೇರುತ್ತಾರೆ ಹಾಗಾಗಿ ಜನವರಿ 14 ಮತ್ತು 15 ರಂದು ಗುಬ್ಬಿ ತಾಲೂಕಿನಲ್ಲಿ ನಡೆಯುವ ಶ್ರೀಸಿದ್ದರಾಮೇಶ್ವರ ಜಯಂತಿಗೆ ಇನ್ನೂ ಹೆಚ್ಚಿನ ಜನರು ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಬೆಟ್ಟದಹಳ್ಳಿಮಠದ ಶ್ರೀಚಂದ್ರಶೇಖರ ಸ್ವಾಮೀಜಿ ಮಾತನಾಡಿ ಸುಮಾರು 20 ಎಕರೆ ಜಾಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ರಾಜ್ಯದ ಎಲ್ಲಾ ಸ್ವಾಮೀಜಿಗಳು, ಚಿಂತಕರು, ವಚನಕಾರರು, ಆಗಮಿಸಲಿದ್ದು ಸಾಕಷ್ಟು ವಿಶೇಷವಾಗಿ ಕಾರ್ಯಕ್ರಮ ಮಾಡಲು ಸಕಲ ರೀತಿಯಲ್ಲಿ ಸಿದ್ದತೆ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ sಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಜಯಂತ್, ರಾಜ್ಯ ಘಟಕದ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.
ಪೋಟೋ5:ಗುಬ್ಬಿ ತಾಲೂಕಿನ ಬಾಗೂರು ಗೇಟಿನ ಅನುಭವ ಮಂಟಪಕ್ಕೆ ಭೇಟಿ ನೀಡಿ ಶ್ರೀಸಿದ್ದರಾಮ ಜಯಂತಿ ನಡೆಯುವ ಕಾರ್ಯಕ್ರಮಗಳ ಸಿದ್ದತೆಯ ಬಗ್ಗೆ ಸ್ವಾಮೀಜಿಗಳೊಂದಿಗೆ ಚರ್ಚೆ ಹಾಗೂ ಸ್ಥಳ ವೀಕ್ಷಣೆ ಮಾಡಿದ ಅಖಿಲ ಭಾರತ ವೀರಶೈವ ವiಹಾ ಸಭಾದ ರಾಜ್ಯ ಅಧ್ಯಕ್ಷ ತಿಪ್ಪಣ್ಣ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ