ಶ್ರೀ ಕೃಷ್ಣ ವೇಷ ಸ್ಪರ್ಧೆ

ಮಧುಗಿರಿ:

              ಶ್ರೀ ಕೃಷ್ಣ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಸಲುವಾಗಿ ಜನ್ಮ ತಾಳಿದ ಮಹಾನ್ ದೈವೀ ಪುರುಷ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಶ್ರೀ ಮಂಜುನಾಥ ಚಾರಿಟಬಲ್ ಸಂಸ್ಥಾಪಕ ಅಧ್ಯಕ್ಷ ಜಿ.ಸಿದ್ದಗಂಗಪ್ಪ ತಿಳಿಸಿದರು.
              ಪಟ್ಟಣದ ಮೌಂಟ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಸಂಸ್ಕಾರ ಭಾರತಿ ಮತ್ತು ಶಾಲಾ ಆಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಶ್ರೀ ಕೃಷ್ಣ ಗೋವಿನ ಬಗ್ಗೆ ವಿಶೇಷ ಪ್ರೀತಿ ತೋರಿದ್ದರಿಂದ ಗೋಪಾಲ ಎಂದು ಕರೆಯುತ್ತಿದ್ದು, ಗೋ ಸಂತತಿಗೆ ನಮ್ಮ ನಾಡಿನಲ್ಲಿ ಪೂಜನೀಯ ಸ್ಥಾನವಿದೆ ಎಂದರು.
ಸಂಸ್ಕಾರ ಭಾರತಿ ಅಧ್ಯಕ್ಷೆ ಸಹನಾ ನಾಗೇಶ್ ಮಾತನಾಡಿ ನಮ್ಮ ನಾಡಿನ ಮಹನೀಯರ ಜಯಂತಿಗಳನ್ನು ಆಚರಿಸುವುದರ ಜೊತೆಗೆ ನಮ್ಮ ಸಂಸ್ಕತಿ, ಸಂಸ್ಕಾರ ಬಿಂಬಿಸುವ ಧಾರ್ಮಿಕ ಹಬ್ಬಗಳ ಆಚರಣೆ ಹಾಗೂ ವೈಶಿಷ್ಯಗಳ ಬಗ್ಗೆ ಮಕ್ಕಳಿಗೆ ತಿಳಿಸುವಂತಾಗಬೇಕು ಶ್ರೀ ಕೃಷ್ಣನ ಸಂದೇಶಗಳು ಸರ್ವಕಾಲಿಕ. ಸತ್ಯ, ನ್ಯಾಯ, ಧರ್ಮ ಹಾದಿಯಲ್ಲಿ ನಡೆಯಲು ಶ್ರೀ ಕೃಷ್ಣನೇ ಪ್ರೇರಣೆ ಎಂದರು.
ಕ.ಸಾ.ಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಶಾಲೆಯ ಕಾರ್ಯದರ್ಶಿ ಜಿ.ಎಸ್.ಜಗದೀಶ್‍ಕುಮಾರ್, ಸಂಸ್ಕಾರ ಭಾರತಿಯ ಪದಾಧಿಕಾರಿಗಳಾದ ಭಾರತಮ್ಮ ಲಕ್ಷ್ಮೀಕಾಂತ್, ವೀಣಾ ಶ್ರೀನಿವಾಸ್, ವಿಜಯ ಶ್ರೀನಾಥ್, ಶಾರದಮ್ಮ, ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link