ಹಿರಿಯೂರು :
ಶ್ರೀ ತೇರುಮಲ್ಲೇಶ್ವರ ಪತ್ತಿನ ಸಹಕಾರ ಸಂಘ ನಿ., ಹಿರಿಯೂರು ಇದರ 2017-18 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ದಿನಾಂಕ 16-09-2018 ರಂದು ಭಾನುವಾರ ಹಿರಿಯೂರಿನ ರೋಟರಿ ಕ್ಲಬ್, ನೆಹರೂ ಮೈದಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಿ.ನಾಗರಾಜ್‍ರವರು ಮಾತನಾಡಿ, ಈ 2017-18ನೇ ಸಾಲಿನಲ್ಲಿ ಸಂಘ ಒಟ್ಟು 11,34,57,949-25ರೂ.ಗಳ ವಹಿವಾಟು ನಡೆಸಿದ್ದು, ಅದರಲ್ಲಿ ನಿವ್ವಳ ಲಾಭ 7,45,400-59 ರೂ. ಗಳಿಸಿರುತ್ತದೆ. ಸಾಲ ಪಡೆದ ಸದಸ್ಯರು ಸರಿಯಾದ ಸಮಯದಲ್ಲಿ ಸಾಲ ತೀರುವಳಿ ಮಾಡಿ, ಸಂಘದ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂಬುದಾಗಿ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಹೆಚ್.ಆರ್.ತಿಮ್ಮಯ್ಯ, ಟಿ.ಶ್ರೀನಾಥ್‍ಗೌಡ, ಪಿ.ರಂಗಯ್ಯ, ಎಂ.ಗಿರಿಸ್ವಾಮಿ, ಕೆ.ರಮೇಶ್‍ಬಾಬು, ಪಿ.ಕೆ.ಚಂದ್ರಪ್ಪ, ಶ್ರೀಮತಿ ಟಿ.ಸುಶೀಲಮ್ಮ, ಜಿ.ವಿಜಯ್‍ಕುಮಾರ್, ಜೆ.ಹೆಚ್.ರಂಗಸ್ವಾಮಿ ಸೇರಿದಂತೆ ಸಂಘದ ವ್ಯವಸ್ಥಾಪಕರಾದ ಶ್ರೀಮತಿ ಗೀತಾಂಜಾಲಿ, ಸಿಬ್ಬಂದಿವರ್ಗ ಹಾಗೂ ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ