ದೊಡ್ಡೇರಿ:-
ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ನೂತನ ದೇವಸ್ಥಾನದ ಕಳಸ ಪ್ರತಿಷ್ಠಪನೆ ಮಹೋತ್ಸವವು ದಿನಾಂಕ 04/09/2018 ಮಂಗಳವಾರದಿಂದ 06/09/2018ರವರೆಗೆ ಜರುಗಲಿದೆ.
ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಸಿಡದರಗಲ್ಲು ಗ್ರಾಮದಲ್ಲಿ 04/09/2018 ರಂದು ಯಮುನಾ ಪೂಜೆ, ಮಂಗಳವಾದ್ಯ, ವೇದಗೋಶಾಧಿಗಳಿಂದ ಕಳಸ ಮೆರವಣಿಗೆ ನವಗ್ರಹ ಆರಾಧನೆ, ಮಹಾಮಂಗಳಾರತಿ 05/09/2018 ಬುಧವಾರ ಕಳಸ ಪೂಜೆ, ಜಲದಿ ವಾಸ, ಜಪ ಪರಾಯಣ, ಕ್ಷೀರಾಭೀಷೇಕ ಇತರೆ ಪೂಜೆಗಳು ನೆರವೇರಲಿದೆ.
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ 1940 ಕ್ಕೆ ಸಲ್ಲುವ ಶ್ರೀಮತ್ ವಿಳಂಬಿನಾಮ ಸಂವತ್ಸರದ ಶ್ರಾವಣ ಶುಬ ಲಗ್ನದಲ್ಲಿ ಪೂಷ್ಯಮ್‍ಷದಲ್ಲಿ ಓಂ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದ ನೂತನ ಕಳಸ ಪ್ರತಿಷ್ಟಪಾನೆ ದಿನಾಂಕ 06-09-2018 ಗಣಪತಿ ಪೂಜೆ, ಹೋಮ, ಅಂಗಹೋಮ ಇತರೆ ಪೂಜೆ ಕಾರ್ಯಕ್ರಮಗಳು ನೆರವೇರಲಿವೆ.
11-08-2018 ರಿಂದ 14-08-2018 ರ ವರೆಗೆ ಮೂರು ದಿನಗಳ ಕಾಲ ನವೀಕರಣಗೊಂಡಿರುವ ದೇವಾಲಯದ ಜೀರ್ಣೋದ್ದಾರ ಕಾರ್ಯಕ್ರಮಗಳು ದೀಕ್ಷಾಹೋಮ, ವಾಸ್ತುಹೋಮ, ನವಗ್ರಹಹೋಮ, ದುರ್ಗಾಹೋಮ, ನಾಡಿಸೂತ್ರ ಹಾಗೂ ಕುಂಬಾಭಿಷೇಕ, ಮಹಾಭಿಷೇಕ ಇನ್ನು ಮುಂತಾದ ಕಾರ್ಯಕ್ರಮಗಳು ಜರುಗಲಿವೆ. ಈ ದೇವಸ್ಥಾನವು ಇತಿಹಾಸ ಪ್ರಸಿದ್ದವಾಗಿರುವ ದೇವಸ್ಥಾನ ವಾಗಿದ್ದು ಚೋಳರ ಕಾಲದ ದೇವಾಲಯ ಸುಮಾರು ವರ್ಷಗಳಿಂದ ಶಿಥಿಲ ಗೊಂಡು. ಇದನ್ನು ಗಮನಿಸಿದ ಗ್ರಾಮದ ಗ್ರಾಮಸ್ಥರು ಮತ್ತು ವಿಶೇಷ ದಾನಿಗಳ ಸಹಯೋಗದೊಂದಿಗೆ ಸುತ್ತಮುತ್ತಲ ಗ್ರಾಮಸ್ಥರು ಸೇರಿ ದೇವಸ್ಥಾನವನ್ನು ಪುನರ್‍ನಿರ್ಮಾಣ ಜೀರ್ಣೋದ್ದಾರ ಕಾರ್ಯಕ್ರಮಕ್ಕೆ ಶಾಸಕರಾದ ಎಂ.ವಿ.ವೀರಭದ್ರಯ್ಯನವರು, ಮಾಜಿಶಾಸಕರಾದ ಕೆ ಎನ್ ರಾಜಣ್ಣ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಡಿ ಸಿ.ಸಿ ಬ್ಯಾಂಕ್ ತುಮಕೂರು, ಎಸ್.ಪಿ ಮುದ್ದಹನುಮೆಗೌಡ್ರು ಲೋಕಸಬಾಸದಸ್ಯರು, ಹೂವಿನಚೌಡಪ್ಪನವರು ಜಿ.ಪಂ. ಸದಸ್ಯರು ಗೋಪಾಲಯ್ಯನವರು ವಾಸ್ತು ಶಿಲ್ಪಿಕಾರರು ಇನ್ನು ಅನೇಕ ಗಣ್ಯರು ಬಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಗೌಡ್ರು ಬಂಡಿವೀರಪ್ಪ ಬಾಣಗರಹಳ್ಳಿ, ವಿಶ್ವನಾಥಪ್ಪ, ಮಾಜಿ ಗ್ರಾಂ.ಪಂ.ಸದಸ್ಯರು, ಶ್ರೀನಿವಾಸ್ ಪಿ.ಎಲ್.ಡಿ ಬ್ಯಾಂಕ್ ಸದಸ್ಯರು ಹಾಗೂ ಸಮಿತಿಯ ಸದಸ್ಯರುಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರುಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








