ಶ್ರೀ ವಿದ್ಯಾಪೀಠ ಮತ್ತು ಸುಮತಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ : ನಿವೃತ್ತ ಶಿಕ್ಷಕರಿಗೆ ಸನ್ಮಾನ

ತಿಪಟೂರು :

            ನಗರದ ಶ್ರೀ ವಿದ್ಯಾಪೀಟ ಮತ್ತು ಸುಮತಿ ಶಿಕ್ಷಣ ಸಂಸ್ಥೆಗಳಿಂದ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
            ಕಾರ್ಯಕ್ರಮದ ದಿಲೀಪ್ ಷಾ ರವರು ಮಾತನಾಡುತ್ತಾ ನಾವು ಜೀವನದಲ್ಲಿ ಯಾವ ರೀತಿ ಜಿವನ ಮಾಡಬೇಕು ಎಂದು ಮೌಲ್ಯಾಧಾರಿತ ಜೀವನದ ತತ್ವ ಆದರ್ಶಗಳನ್ನು ತಂದುಕೊಡುತ್ತದೆ. ಒಳ್ಳೆಯ ಶಾಲೆಯಿಂದ ಒಳ್ಳೆಯ ವಿದ್ಯಾರ್ಥಿಗಳು, ಒಳ್ಳೆಯ ಶಿಕ್ಷಕರಿಂದ ಶಿಕ್ಷಿತರಾದ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗುತ್ತಾರೆ. ಉತ್ತಮ ವ್ಯಕ್ತಿಗಳು ಉತ್ತಮ ಸಮಾಜವನ್ನು ನಿರ್ಮಿಸುತ್ತಾರೆ ಎಂದರು.
ನಿವೃತ್ತ ಶಿಕ್ಷಕ ದಂಪತಿಗಳಾದ ಶ್ರೀಮತಿ ಹೆಚ್.ಕೆ.ಪದ್ಮಾಕ್ಷಮ್ಮ ಮತ್ತು ಶ್ರೀ ಎಂ.ಗಂಗಾಧರಯ್ಯ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀವಿದ್ಯಾಪೀಠದ ಅಧ್ಯಕ್ಷರಾದ ಎಸ್.ಕೆ.ರಾಜಶೇಖರ್, ಸುಮತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ಆರ್.ಬಸವರಾಜು, ಆರ್.ಬಿ.ದೇವರಾಜು, ಪತ್ರಕರ್ತರಾದ ಹಳ್ಳಿ ಸುರೇಶ್ ಮತ್ತು ಸಂಸ್ಥೆಯ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಬಾಗವಹಿಸಿದ್ದರು.

Recent Articles

spot_img

Related Stories

Share via
Copy link