ಗುಬ್ಬಿ
ತಾಲ್ಲೂಕಿನ ನಡುವಲ ಪಾಳ್ಯ ಗ್ರಾಮದ ಶ್ರೀ ಶನಿಮಹಾದೇವರಿಗೆ ಶ್ರಾವಣ ಮಾಸದ ಪೂಜೆ ಮತ್ತು ದಾಸೋಹ ಕಾರ್ಯಕ್ರಮವು ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ವೈಭವಯುತವಾಗಿ ನಡೆಯಿತು.
ಪ್ರತಿವರ್ಷ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮೊದಲನೆ ಶ್ರಾವಣ ಶನಿವಾರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಲಾಗುತ್ತಿದೆ. ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ದೇವಾಯಲದ ವತಿಯಿಂದ ವಿಶೇಷವಾಗಿ ಅನ್ನದಾಸೋಹ ನಡೆಸಲಾಗುತ್ತಿದೆ. ಚಿಕ್ಕೋನಹಳ್ಳಿ, ನಡುವಲಪಾಳ್ಯ, ಕಡೇಪಾಳ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿ ತಮ್ಮ ಇಷ್ಠಾರ್ಥ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಿಸುತ್ತಾರೆ.
ಪೂಜಾ ಕಾರ್ಯಕ್ರಮದಲ್ಲಿ ಯಜಮಾನ್ ರಾಜಣ್ಣ ಗೌಡರು, ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಉಂಡೆರಾಮಣ್ಣ, ದೇವಾಯಲದ ಅಧ್ಯಕ್ಷ ಸಿ.ಬಸವರಾಜು, ಮುಖಂಡರುಗಳಾದ ಮುಳಕಟ್ಟೆಗೌಡರು, ಸುರೇಶ್, ಜಿ.ಬಿ.ಮಲ್ಲಪ್ಪ, ರಾಜಣ್ಣ, ಶಿವಣ್ಣ, ಜಿ.ಗೋವಿಂದಪ್ಪ, ಹನುಮಂತಯ್ಯ, ಸೋಮಶೇಖರ್, ಕರಿಗಿರಿಯಪ್ಪ, ಬಲರಾಮಣ್ಣ, ಆಣೆಕಾರ್ ಲಕ್ಷ್ಮೀನರಸಯ್ಯ, ನಾಗೇಶ್, ಹೊನ್ನಪ್ಪಾಜಿ, ಅರ್ಚಕ ಉಮೆಶ್ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾದಿಗಳು ಭಾಗವಹಿಸಿದ್ದರು.