ಶ್ರೀ ಸಿದ್ಧಗಂಗಾ ಸಂಜೆ ಕಾಲೇಜಿನಲ್ಲಿ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ

ತುಮಕೂರು

         ಶ್ರೀ ಸಿದ್ಧಗಂಗಾ ಕಲಾ ಮತ್ತು ವಾಣಿಜ್ಯ ಸಂಜೆ ಕಾಲೇಜಿನಲ್ಲಿ ಒಬ್ಬ ಸಾಮಾನ್ಯ ಶಿಕ್ಷಕ ಸರ್ವಶ್ರೇಷ್ಠ ವ್ಯಕ್ತಿರೂಪದ ಶಕ್ತಿಯಾಗಿ ಹಂತ ಹಂತವಾಗಿ ಬೆಳೆದು ಭಾರತದ ಪ್ರಥಮ ಪ್ರಜೆಯಾದ ಡಾ|| ಸರ್ವಪಲ್ಲಿ ರಾಧಕೃಷ್ಣನ್ ರವರ 131ನೇ ಹುಟ್ಟುಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.
          ಇಂತಹ ಮಹಾನ್ ಚೇತನ ಡಾ|| ಎಸ್ ರಾಧಕೃಷ್ಣನ್ ರವರ ಹುಟ್ಟು ಹಬ್ಬವನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರತ್ನಮಂಜರಿ ಕೆ.ಜಿ. ರವರು ಪುಷ್ಪನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರ ವ್ಯಕ್ತಿತ್ವವನ್ನು ನೆನೆದರು. ನಂತರ ಅರ್ಥಶಾಸ್ತ್ರ ಸಹಾಯಕ ಪ್ರಾದ್ಯಾಪಕರಾದ ಎನ್.ಎಸ್. ಮಹದೇವಸ್ವಾಮಿ ರವರು ಮಾತನಾಡುತ್ತಾ ಅಂದು ಅರಮನೆ ನಗರಿ ಮೈಸೂರು ಅಕ್ಷರಶ: ದೇವಲೋಕದ ಮೆರುಗನ್ನು ಪಡೆದಿತ್ತು, ವೈಭವು ಮೇಳೈಸಿ ಕಂಗೊಳಿಸುತ್ತಿತ್ತು.

            ಮೈಸೂರಿನ ಜಾಮರಾಜ ಕಾಲೇಜಿನಿಂದ ಕಲ್ಕತ್ತಾಗೆ ವರ್ಗಾವಣೆಗೊಂಡಾಗ ತನ್ನ ಶಿಷ್ಯಕೋಟಿ ಸಿಂಗಾರ ಮಾಡಿದ್ದ ಸಾರೋಟಿನಲ್ಲಿ ಪೂಜ್ಯ ಗುರುಗಳನ್ನು ಕುಳ್ಳರಿಸಿಕೊಂಡು ಹೆಗಲುಕೊಟ್ಟು ಅನಂದ ಮತ್ತು ಅಭಿಮಾನದಿಂದ ಹೊಮ್ಮಿದ ಶಕ್ತಿಯನ್ನು ಧಾರೆಯೆರೆದು ಸಾರೋಟನ್ನು ಕಾಲೇಜಿನಿಂದ ರೈಲ್ವೆ ನಿಲ್ದಾಣಕ್ಕೆ ಎಳೆದು ತಂದು ಪೂಜ್ಯರಿಗೆ ಮೀಸಲಿರಿಸಿದ್ದ ಕಂಪಾರ್ಟಮೆಂಟನ್ನು ರತ್ನಗಂಬಳಿ, ಸುಗಂಧ ಪುಷ್ಪಗಳಿಂದ ಶೃಂಗರಿಸಿ ಒರಗುದಿಂಬನ್ನಿಟ್ಟು ತಮ್ಮ ಅಭಿಮಾನದ ಪರಾಕಾಷ್ಟೆಯನ್ನು ತೋರಿಸಿದ್ದು ವಿಶೇಷವಾಗಿತ್ತು ಯಾವ ರಾಜ ಮಹಾರಾಜರಿಗೂ ದಕ್ಕದ ಅಂತಹ ಅಭೂತಪೂರ್ವ ಬೀಳ್ಕೊಡುಗೆಗೆ ಸಾಕ್ಷಿಯಾದ ವ್ಯಕ್ತಿ ಬೇರೆ ಯಾರು ಅಲ್ಲ ಅವರೆ ನಮ್ಮೆಲ್ಲರ ಸಿಂದೂರು ಶಿಕ್ಷಕತಿಲಕ ಡಾ|| ಸರ್ವಪಲ್ಲಿ ರಾಧಕೃಷ್ಣನ್ ಎಂದು ತಿಳಿಸಿ ಅವರ ಮತ್ತು ವಿದ್ಯಾರ್ಥಿಗಳ ನಡುವಿನ ಸಬಂಧವನ್ನು ವಿವರಿಸಿದರು.
ಗಣಕವಿಜ್ಞಾನ ವಿಭಾಗದ ಸಹಪ್ರಾದ್ಯಾಪಕರಾದ ಲೆಪ್ಟಿನೆಂಟ್ ರಾಮಲಿಂಗಾರೆಡ್ಡಿ ಎಸ್ ರವರು ಮಾತನಾಡುತ್ತಾ ನಾವಿಂದು ಡಾ|| ಎಸ್. ರಾಧಕೃಷ್ಣನ್ ರವರ 131ನೇ ಜನ್ಮದಿನೋತ್ಸವ ಸಂಭ್ರಮದಲ್ಲಿದ್ದೇವೆ. ಇವರು ಒಬ್ಬ ಮಹಾನ್ ಮೇಧಾವಿ, ತತ್ವಶಾಸ್ತ್ರ ಪ್ರವೀಣ, ಉತ್ತಮ ವಾಗ್ಮಿ, ಅಲ್ಲದೆ ಆದರ್ಶ ಶಿಕ್ಷಕರಾಗಿದ್ದರು ಎಂದು ತಿಳಿಸಿದರು.

            ನಂತರ ಅವರ ಹುಟ್ಟಿನ ಬಗ್ಗೆ ತಿಳಿಸುತ್ತಾ ಶ್ರೀಯುತರು ಆಂದ್ರಪ್ರದೇಶದ ಚಿತ್ತೂರು ಜಿಲ್ಲೆ ತಿರುತ್ತಣಿ ಎಂಬ ಸಣ್ಣ ಹಳ್ಳಿಯಲ್ಲಿ 1888ನೇ ಸೆಪ್ಟಂಬರ್ 5 ರಂದು ಧಾರ್ಮಿಕ ಸಂಸ್ಕøತಿಯುಳ್ಳ ಮಧ್ಯಮ ಕುಟುಂಬದಲ್ಲಿ ವೀರಸಾಮಯ್ಯ ಮತ್ತು ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಶ್ರೀಯುತರ ಜಾಣ್ಮೆ, ಆತ್ಮಚೈತನ್ಯ ಕಾಣುತ್ತಿತ್ತು. 1906ರಲ್ಲಿಯೇ ತಮ್ಮ 18ನೇ ವಯಸ್ಸಿನಲ್ಲಿ ಶಿವಕಾಮಮ್ಮ ರೊಡನೆ ಸಪ್ತಪದಿ ತುಳಿದರು. ವೈವಾಹಿಕ ಜೀವನ ಅವರ ಅಧ್ಯಯನ ಮತ್ತು ಧಾರ್ಮಿಕ ಸಂಶೋಧನೆಗೆ ಎಂದೂ ತೊಡಕಾಗಿರಿಲಿಲ್ಲ ತಾನು ಬಯಸಿದ ಕೆಲಸ ಮತ್ತು ಪ್ರೀತಿಸುವ ಪತ್ನಿ, ಮಕ್ಕಳು, ದೊರೆತಾಗಲೇ ಜೀವನ ಸಾರ್ಥಕ ಎಂಬ ಹೆಗೆಲ್ ರವರ ಹೇಳಿಕೆಯನ್ನು ಶ್ರೀಯುತರು ಮೆಲಕು ಹಾಕುತ್ತಿದ್ದರು. “ ಜ್ಞಾನಿಯಾದವನು ಹುದ್ದೆಗಳ ಹಿಂದೆ ಹೋಗುವ ಅಗತ್ಯವಿಲ್ಲ, ಹುದ್ದೆಗಳೇ ಆತನನ್ನು ಅರಸಿ ಬರುತ್ತವೆ.”ಎನ್ನುವಂತೆ ಹತ್ತಾರು ಉನ್ನತ ಹುದ್ದೆಗಳು ಅವರನ್ನು ಕೈಬೀಸಿ ಕರೆದರೂ ಅವರು ಆಯ್ಕೆ ಮಾಡಿಕೊಂಡಿದ್ದು ಶಿಕ್ಷಕ ವೃತ್ತಿ.

              ಅಲ್ಲಿಂದ ಒಂದೊಂದೇ ಯಶಸ್ಸಿನ ಹೆಜ್ಜೆಯಿಡುತ್ತಾ ಸಾಗಿದ ಇವರು 1952ರಲ್ಲಿ ಭಾರತದ ಉಪರಾಷ್ಟ್ರಪತಿಗಳಾದರು, ದೇಶಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ಪುರಸ್ಕರಿಸಿ ಅಂದಿನ ಸರ್ಕಾ “ಭಾರತ ರತ್ನ” ಪ್ರಶಸ್ತಿ ನೀಡಿ ಗೌರವಿಸಿತು. ನಂತರ 1962ರಲ್ಲಿ ಅಂದಿನ ರಾಷ್ಟ್ರಪತಿಗಳಾದ ರಾಜೇಂದ್ರ ಪ್ರಸಾದ್ ರವರು ನಿವೃತ್ತಿಯಾದಾಗ ಶ್ರೀಯುತ ಡಾ|| ಎಸ್. ರಾಧಕೃಷ್ಣನ್ ರವರು ಭಾರತದ ರಾಷ್ಟ್ರತಿಗಳಾಗಿ ಸಾಮಾನ್ಯ ಶಿಕ್ಷಕ ವ್ಯಕ್ತಿರೂಪದ ಶಕ್ತಿಯಾಗಿ ಹೊರಹೊಮ್ಮಿದ ಮಹಾನ್ ಚೇತನ. ಇವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವುದರೊಂದಿಗೆ ಶಿಕ್ಷಕರ ಜವಬ್ದಾರಿ ಮತ್ತು ಮೌಲ್ಯಗಳನ್ನು ಹೆಚ್ಚಿಸುವ ಸಂದರ್ಭ ಇದಾಗಿದೆ ಎಂದು ತಿಳಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ವರ್ಷದ ವಿದ್ಯಾರ್ಥಿ ನಾಗಮಣಿ ಪ್ರಾರ್ಥನೆಯೊಂದಿಗೆ ಹರೀಶ್ ನಡೆಸಿಕೊಟ್ಟರೆ, ಕಾರ್ಯಕ್ರಮಕ್ಕೆ ರಶ್ಮಿ ಜಿ.ಬಿ. ಎಲ್ಲರನ್ನು ಸ್ವಾಗತಿಸಿದರು.

Recent Articles

spot_img

Related Stories

Share via
Copy link