ಕುಣಿಗಲ್ 
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಖಾಸಗಿ ಶಾಲೆಗಳಿಗೇನು ಕಮ್ಮಿಇಲ್ಲಾ ಎಂಬುದನ್ನ ಈ ಬಾರಿಯೂ ಸಾಬೀತು ಪಡಿಸಿದ್ದಾರೆ.
ತಾಲ್ಲೂಕಿನ ಅಮೃತೂರು ಹೋಬಳಿಯ ಪಡುವಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಳೆದ ನಾಲ್ಕೈದು ವರ್ಷಗಳಿಂದಲೂ ಷಟಲ್ ಬ್ಯಾಂಡ್‍ಮಿಟನ್‍ನಲ್ಲಿ ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಗೆಲುವು ಸಾಧಿಸುವ ಮೂಲಕ ತಾಲ್ಲೂಕು ಖಾಸಗೀ ಶಾಲೆಗಳ ವಿದ್ಯಾರ್ಥಿಗಳ ಹೊಟ್ಟೆಯುರಿ ಹೆಚ್ಚಿಸುವ ಮೂಲಕ ಹುಬ್ಬೇರಿಸುವಂತೆ ಮಾಡುತ್ತ ಪ್ರತಿ ಬಾರಿ ಜಿಲ್ಲಾ ಮಟ್ಟದವರೆಗೆ ಆಯ್ಕೆಯಾಗುತ್ತಿರುವುದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇದಕ್ಕೆ ಇಲ್ಲಿನ ಎಸ್.ಡಿ.ಎಂ.ಸಿ ಅಧ್ಯಕ್ಷರು ಪದಾಧಿಕಾರಿಗಳು, ಮುಖ್ಯ ಶಿಕ್ಷಕ ಬಿ.ಜೆ.ರಾಜು ಸಹಶಿಕ್ಷಕರಾದ ಹೆಚ್.ವಿ.ಉಮೇಶ್, ಚಿರಂಜೀವಿ, ರೂಪ ಕೆ. ಸಿಬ್ಬಂದಿವರ್ಗ ಹಾಗೂ ಪೋಷಕರು ಇಂತಹ ಕೀರ್ತಿಗೆ ಪಾತ್ರರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಾರಿ ಅಮೃತೂರು ಹೋಬಳಿ ಮಟ್ಟದ ಕ್ರೀಡಾ ಕೂಟವನ್ನು ನಡೆಸುವ ಜವಾಬ್ದಾರಿಯನ್ನು ಸಹ ಇದೇ ಪಡುವಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆ ನೀಡಿದಾಗ ಜವಾಬ್ದಾರಿಯುತವಾಗಿ ನಡೆಸುವ ತೀರ್ಮಾನವನ್ನು ಕೈಗೆತ್ತಿಕೊಂಡ ಇಲ್ಲಿನ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ ಹಾಗೂ ಅಪಾರ ದಾನಿಗಳ ನೆರವಿನೊಂದಿಗೆ ಕ್ರೀಡೆಯಲ್ಲಿ ಯಾವುದೇ ರೀತಿಯ ವೈಮನಸ್ಸು, ವ್ಯಾಜ್ಯ ಬರದಂತೆ ಸಂಪೂರ್ಣ ಜವಾಬ್ದಾರಿಯೊತ್ತ ಇಲ್ಲಿನ ಮುಖ್ಯ ಶಿಕ್ಷಕ ಬಿ.ಜೆ.ರಾಜು ಅತ್ಯುತ್ತಮವಾಗಿ ಹೋಬಳಿ ಮಟ್ಟದ ಕ್ರೀಡೆಯನ್ನು ನಡೆಸಿಕೊಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಖಾಸಗಿ ಶಾಲೆಗಳ ಮಾದರಿಯಲ್ಲಿ ಕ್ರೀಡಾ ಉದ್ಘಾಟನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೇ ಹುಲಿವೇಷ ಸೇರಿದಂತೆ ವಿವಿಧ ಸಾಂಸ್ಕøತಿಕ ಮೇಳಗಳೊಂದಿಗೆ ಪಟಾಕಿ ಸಿಡಿಮದ್ದುಗಳನ್ನ ಸಿಡಿಸುವ ಮೂಲಕ ಪೂರ್ಣ ಕುಂಭ ದೊಂದಿಗೆ ಗಣ್ಯವ್ಯಕ್ತಿಗಳನ್ನ ಬರಮಾಡಿಕೊಂಡು ಕ್ರೀಡೆಗೆ ಚಾಲನೆ ನೀಡಿದ್ದು ಗ್ರಾಮಸ್ತರ ಕಣ್ಮನ ಸೆಳೆಯುವಂತಿತ್ತು. ಹಳೆ ವಿದ್ಯಾರ್ಥಿಗಳ ಹಾಗೂ ಹಲವು ಸಮಾಜ ಸೇವಕರ ಸಹಾಯಸ್ತದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕವರ್ಗದವರಿಗೆ ಟೀಶರ್ಟ್, ಟೋಪಿ ವಿಜೇತರಿಗೆ ಬಹುಮಾನ ಹಾಗೂ ಊಟದ ವ್ಯವಸ್ಥೆ ಅತ್ಯುತ್ತಮವಾಗಿ ಮಾಡುವ ಮೂಲಕ ಶಿಕ್ಷಣ ಇಲಾಖೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪೋಷಕರ ಪ್ರಶಂಸೆ ಹಾಗೂ ಪ್ರೋತ್ಸಾಹಕ್ಕೂ ಈ ಹಳ್ಳಿಗಾಡಿನ ಶಾಲೆ ಪಾತ್ರವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








